ಮುಹೂರ್ತ ಸಮಾರಂಭದಲ್ಲಿ ನಟ ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

ಸಂಚಿತ್ ಸಂಜೀವ್ ಚೊಚ್ಚಲ ಚಿತ್ರ; ಮುಹೂರ್ತಕ್ಕೆ ಬಂದು ಸೋದರಳಿಯನಿಗೆ ಹಾರೈಸಿದ ಕಿಚ್ಚ ಸುದೀಪ್!

ಚಿತ್ರಕ್ಕೆ ತಾತ್ಕಾಲಿಕವಾಗಿ ಸಂಚಿ01 ಎಂದು ಹೆಸರಿಡಲಾಗಿದ್ದು, ಮೈಸೂರಿನಲ್ಲಿ ನಡೆಯುವ ಈ ಕಥೆಯು 1990 ಮತ್ತು 2010 ರ ನಡುವಿನ ನೈಜ ಘಟನೆಗಳಿಂದ ಪ್ರೇರಿತಗೊಂಡಿದೆ.

ಕಿಚ್ಚ ಸುದೀಪ್ ಅವರ ಅಕ್ಕ ಸರೋಜಾ ಅವರ ಮಗ ಸಂಚಿತ್ ಸಂಜೀವ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರವನ್ನು KRG ಸ್ಟುಡಿಯೋಸ್ ಮತ್ತು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಜಂಟಿಯಾಗಿ ನಿರ್ಮಿಸುತ್ತಿದ್ದು, ಶುಕ್ರವಾರ ಸಾಂಪ್ರದಾಯಿಕ ಮುಹೂರ್ತ ಸಮಾರಂಭದೊಂದಿಗೆ ಚಿತ್ರ ಸೆಟ್ಟೇರಿದೆ. ಸಮಾರಂಭದಲ್ಲಿ ಸುದೀಪ್ ಅವರ ತಂದೆ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಮತ್ತು ಇತರರು ಪಾಲ್ಗೊಂಡಿದ್ದರು. ಫೆಬ್ರುವರಿ 5 ರಂದು ಸಂಚಿ ಅವರ ಜನ್ಮದಿನದಂದು ಚಿತ್ರದ ಶೀರ್ಷಿಕೆ ಮತ್ತು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

ಚಿತ್ರಕ್ಕೆ ತಾತ್ಕಾಲಿಕವಾಗಿ ಸಂಚಿ01 ಎಂದು ಹೆಸರಿಡಲಾಗಿದ್ದು, ಮೈಸೂರಿನಲ್ಲಿ ನಡೆಯುವ ಈ ಕಥೆಯು 1990 ಮತ್ತು 2010 ರ ನಡುವಿನ ನೈಜ ಘಟನೆಗಳಿಂದ ಪ್ರೇರಿತಗೊಂಡಿದೆ. ದಿಟ್ಟ ಮತ್ತು ಸಾಹಸಮಯ ವ್ಯಕ್ತಿಯ ಕಥೆಯನ್ನು ಹೇಳುತ್ತದೆ.

ಚಿತ್ರಕ್ಕೆ ವಿವೇಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಕುತೂಹಲಕಾರಿ ಪಾತ್ರಗಳು ಮತ್ತು ವಿಶಿಷ್ಟವಾದ ಕಥಾಹಂದರದ ಮಿಶ್ರಣದೊಂದಿಗೆ ತೆರೆಗೆ ಬರಲಿದೆ. ಚಿತ್ರದಲ್ಲಿ ಮಾಲಾಶ್ರೀ ಮತ್ತು ಮಯೂರ್ ಪಟೇಲ್ ಜೊತೆಗೆ ಕಾಜಲ್ ಕುಂದರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಲಿದ್ದು, ಶೇಖರ್ ಚಂದ್ರ ಅವರ ಛಾಯಾಗ್ರಹಣ, ಶರತ್ ವಸಿಷ್ಠ ಅವರ ಸಂಕಲನ ಮತ್ತು ವಿಶ್ವಾಸ್ ಕಶ್ಯಪ್ ನಿರ್ಮಾಣ ವಿನ್ಯಾಸವನ್ನು ನಿರ್ವಹಿಸುತ್ತಿದ್ದಾರೆ.

ಕಥೆ ಮತ್ತು ಚಿತ್ರಕಥೆಯನ್ನು ವಿವೇಕ್ ಮತ್ತು ನಾಗಭೂಷಣ ದೇಶಪಾಂಡೆ ಬರೆದಿದ್ದಾರೆ. ಸುಪ್ರಿಯಾನ್ವಿ ಸ್ಟುಡಿಯೋಸ್ ಅಡಿಯಲ್ಲಿ ಪ್ರಿಯಾ ಸುದೀಪ್ ಸಹಯೋಗದೊಂದಿಗೆ ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ನಿರ್ಮಿಸಿರುವ ಈ ಚಿತ್ರವು ಫೆಬ್ರುವರಿ 10 ರಂದು ಚಿತ್ರೀಕರಣವನ್ನು ಪ್ರಾರಂಭಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT