ಸೋನಲ್ ಮೊಂಥೆರೋ 
ಸಿನಿಮಾ ಸುದ್ದಿ

'ರಾಕ್ಷಸ' ಬಿಡುಗಡೆಗೆ ದಿನಾಂಕ ನಿಗದಿ; ನನ್ನ ಪಾತ್ರ ತುಂಬಾ ಪ್ರಭಾವಶಾಲಿಯಾಗಿದೆ ಎಂದ ಸೋನಲ್

ಸೋನಲ್ ಮದುವೆ ನಂತರದ ಮೊದಲ ಚಿತ್ರ 'ರಾಕ್ಷಸ' ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ. ಎಚ್.ಲೋಹಿತ್ ನಿರ್ದೇಶನದ 'ಟೈಮ್ ಲೂಪ್' ಕಾನ್ಸೆಪ್ಟ್ ನ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ.

ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಅವರನ್ನು ಇತ್ತೀಚಿಗೆ ವಿವಾಹವಾದ ನಟಿ ಸೋನಾಲ್ ಮೊಂಥೆರೋ, ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ಸಮಾನವಾಗಿ ಮುಂದುವರೆಸಿದ್ದಾರೆ. ಅವರು ಅಭಿನಯಿಸಿರುವ ಹಲವು ಚಿತ್ರಗಳು ರಿಲೀಸ್ ಅಥವಾ ನಿರ್ಮಾಣದ ಹಂತದಲ್ಲಿದ್ದು, ನಟನಾ ವೃತ್ತಿಯಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ.

ಸೋನಲ್ ಮದುವೆ ನಂತರದ ಮೊದಲ ಚಿತ್ರ 'ರಾಕ್ಷಸ' ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ. ಎಚ್. ಲೋಹಿತ್ ನಿರ್ದೇಶನದ 'ಟೈಮ್ ಲೂಪ್' ಕಾನ್ಸೆಪ್ಟ್ ನ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ.

ರಾಕ್ಷಸದಲ್ಲಿನ ತನ್ನ ಪಾತ್ರ ಕುರಿತು ಅನುಭವ ಹಂಚಿಕೊಂಡ ಸೋನಲ್, ಪಾತ್ರನನ್ನು ನನ್ನನ್ನು ಸೆಳೆಯಿತು. ಲೋಹಿತ್ ಅವರ ಹಿಂದಿನ ಚಿತ್ರಗಳಲ್ಲಿ ವಿಶಿಷ್ಟ ಪರಿಕಲ್ಪನೆಗಳ ಮೂಲಕ ಬಲವಾದ ಸ್ತ್ರೀ ಪಾತ್ರ ತೋರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಈ ಚಿತ್ರವೂ ಅದಕ್ಕೆ ಹೊರತಾಗಿಲ್ಲ. ರಾಕ್ಷಸ ಕಮರ್ಷಿಯಲ್ ಅಂಶಗಳಿರುವ ಹಾರರ್ ಚಿತ್ರವಾಗಿದೆ.

ಲೋಹಿತ್ ಅವರ ಟೈಮ್-ಲೂಪ್ ಪರಿಕಲ್ಪನೆ ಆಕರ್ಷಕವಾಗಿದ್ದು, ಪ್ರಜ್ವಲ್ ದೇವರಾಜ್ ಜೊತೆಗೆ ಕೆಲವು ಅದ್ಭುತವಾದ ಆಕ್ಷನ್ ಸೀಕ್ವೆನ್ಸ್‌ಗಳಿವೆ. ನನ್ನ ಪಾತ್ರ ಪ್ರಭಾವಶಾಲಿಯಾಗಿದೆ. ನನ್ನ ಪಾತ್ರವು ನೆರೆ ಮನೆಯ ವಿವಾಹಿತ ಮಹಿಳೆಗೆ ಹೋಲುತ್ತದೆ. 10 ಮಹಿಳೆಯರಲ್ಲಿ ಆರು ಮಂದಿ ಈ ಪಾತ್ರದಲ್ಲಿ ತಮ್ಮನ್ನು ಕಂಡುಕೊಳ್ಳುತ್ತಾರೆ ಎಂದು ಈ ಹಿಂದೆಯೇ ನಾನು ಹೇಳಿದ್ದೆ. ಇದೊಂದು ಅದ್ಬುತವಾದ ಪಾತ್ರವಾಗಿದೆ. ಮದುವೆಯ ನಂತರ ಆ ಭಾಗಗಳನ್ನು ಚಿತ್ರೀಕರಿಸುವುದು ಎಕ್ಸೈಟ್ ಆಗಿದೆ ಎಂದರು.

ಪಾತ್ರದ ಆಯ್ಕೆಯಲ್ಲಿ ತನ್ನ ಪತಿಯ ಮಾರ್ಗದರ್ಶನಕ್ಕೆ ಅಭಿನಂದನೆ ಸಲ್ಲಿಸಿದ ಸೋನಲ್, ಮದುವೆಗೂ ಮುನ್ನ ಸ್ಕ್ರೀಪ್ಟ್ ಆಯ್ಕೆಯಲ್ಲಿ ಇಂಡಸ್ತ್ರಿಯಲ್ಲಿ ನನಗೆ ಯಾರು ಮಾರ್ಗದರ್ಶಕರು ಇರಲಿಲ್ಲ. ಈಗ ತರುಣ್ ಪಾತ್ರಗಳ ಆಯ್ಕೆಯಲ್ಲಿ ಸೂಕ್ತ ಬೆಂಬಲ ನೀಡುತ್ತಾರೆ. ಮದುವೆಗೂ ಮುನ್ನ ಸಹಿ ಮಾಡಲಾದ ಚಿತ್ರಗಳನ್ನು ಪೂರ್ಣಗೊಳಿಸಿದ್ದೇನೆ. ಸ್ವಲ್ಪ ವಿರಾಮ ಪಡೆದುಕೊಂಡಿದ್ದೆ. ಆದರೆ ಈ ಮತ್ತೆ ಹೊಸ ಉತ್ಸಾಹದೊಂದಿಗೆ ಕಂಬ್ಯಾಕ್ ಆಗಿರುವುದಾಗಿ ತಿಳಿಸಿದರು.

ವಿನೋದ್ ಪ್ರಭಾಕರ್ ಜೊತೆಗಿನ 'ಮಾದೇವ' ಬಿಡುಗಡೆಗೆ ಕಾಯುತ್ತಿದ್ದೇನೆ. ರಾಕ್ಷಸ ನಂತರ ತಳವಾರಪೇಟೆಯ ಶೂಟಿಂಗ್ ಮುಕ್ತಾಯಗೊಳಿಸಿದ್ದೇನೆ. ಅಲ್ಲದೇ ಸರೋಜಿನಿ ನಾಯ್ಡು ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ. ಇತರ ಚಿತ್ರಗಳ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಸೋನಲ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT