ಏಳುಮಲೆ ಚಿತ್ರದ ಸ್ಟಿಲ್- ಟೈಟಲ್ ಅನಾವರಣಗೊಳಿಸಿದ ಶಿವರಾಜ್‌ಕುಮಾರ್- ನಿರ್ದೇಶಕ ಪ್ರೇಮ್ 
ಸಿನಿಮಾ ಸುದ್ದಿ

ತರುಣ್ ಕಿಶೋರ್ ಸುಧೀರ್ ನಿರ್ಮಾಣದ ಚಿತ್ರದ ಟೈಟಲ್ ಅನಾವರಣ; 'ಏಳುಮಲೆ'ಯಲ್ಲಿ ರಾಣಾಗೆ ಪ್ರಿಯಾಂಕಾ ಆಚಾರ್ ಜೋಡಿ

ನಟ ಶಿವರಾಜಕುಮಾರ್ ಮತ್ತು ನಿರ್ದೇಶಕ ಪ್ರೇಮ್ ಕನ್ನಡದ ಶೀರ್ಷಿಕೆಯನ್ನು ಅನಾವರಣಗೊಳಿಸಿದರು.

ಚೌಕ, ರಾಬರ್ಟ್ ಮತ್ತು ಕಾಟೇರ ಚಿತ್ರಗಳನ್ನು ನಿರ್ದೇಶಿಸಿದ್ದ ತರುಣ್ ಕಿಶೋರ್ ಸುಧೀರ್ ಇದೀಗ ತಮ್ಮ ತಮ್ಮ ಬ್ಯಾನರ್ 'ತರುಣ್ ಸುಧೀರ್ ಕ್ರಿಯೇಟಿವೇಜ್' ಅಡಿಯಲ್ಲಿ ಎರಡನೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಟ್ಲಾಂಟಾ ನಾಗೇಂದ್ರ ಕೂಡ ಚಿತ್ರದ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಪುನೀತ್ ರಂಗಸ್ವಾಮಿ ನಿರ್ದೇಶಿಸುತ್ತಿರುವ ಈ ತ್ರಿಭಾಷಾ ಚಿತ್ರವು ಸದ್ಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಇದೀಗ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರತಂಡ ಸಿನಿಮಾಗೆ 'ಏಳುಮಲೆ' ಎಂದು ಹೆಸರಿಟ್ಟಿದ್ದಾರೆ.

ನಟ ಶಿವರಾಜಕುಮಾರ್ ಮತ್ತು ನಿರ್ದೇಶಕ ಪ್ರೇಮ್ ಕನ್ನಡದ ಶೀರ್ಷಿಕೆಯನ್ನು ಅನಾವರಣಗೊಳಿಸಿದರೆ, ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಮತ್ತು ಚಲನಚಿತ್ರ ನಿರ್ಮಾಪಕ ಪುರಿ ಜಗನ್ನಾಥ್ ಕ್ರಮವಾಗಿ ತಮಿಳು ಮತ್ತು ತೆಲುಗು ಶೀರ್ಷಿಕೆಗಳನ್ನು ಬಹಿರಂಗಪಡಿಸಿದರು.

'ಶಿವಣ್ಣ ಮತ್ತು ನಿರ್ದೇಶಕ ಪ್ರೇಮ್ ಏಳುಮಲೆಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಶಿವಣ್ಣ ಅವರು ಕೋಲುಮಂಡೆ ಜಂಗಮದೇವ ಎಂಬ ಗೀತೆಯ ಮೂಲಕ ಪ್ರೇಕ್ಷಕರಿಗೆ ಈ ಪ್ರದೇಶವನ್ನು ಪರಿಚಯಿಸಿದರು ಮತ್ತು ಜೋಗಿ ಚಿತ್ರದಲ್ಲಿ ಪ್ರೇಮ್ ಅವರ ಸಾಹಿತ್ಯವು ಏಳುಮಲೆ ಜಂಗಮ ದೇವಾ ಮುಂತಾದ ಉಲ್ಲೇಖಗಳನ್ನು ಹೊಂದಿದೆ' ಎಂದು ತರುಣ್ ಹೇಳಿದರು.

ಏಳುಮಲೆ ಚಿತ್ರವು 2000ರ ದಶಕದ ಆರಂಭದಲ್ಲಿ ನಡೆದ ನಿಜ ಜೀವನದ ಕಥೆಯನ್ನು ಆಧರಿಸಿದೆ. 'ಏಳುಮಲೆ ಎಂಬ ಹೆಸರು ಈ ಪ್ರದೇಶದ ಭೌಗೋಳಿಕತೆ ಮತ್ತು ಸಂಸ್ಕೃತಿಯಲ್ಲಿ ಬೇರೂರಿದೆ. ಇದು ಎರಡು ರಾಜ್ಯಗಳ ನಡುವಿನ ಆಧ್ಯಾತ್ಮಿಕ ಮತ್ತು ಭೌಗೋಳಿಕ ಗಡಿಯನ್ನು ರೂಪಿಸುವ ಏಳು ಬೆಟ್ಟಗಳನ್ನು ಸೂಚಿಸುತ್ತದೆ. ಇದು ಡಾ. ರಾಜ್‌ಕುಮಾರ್ ಜನಿಸಿದ ಸ್ಥಳ, ಚಾಮರಾಜನಗರವೂ ​ಆಗಿದೆ' ಎಂದು ಅವರು ಹೇಳಿದರು.

ಏಳುಮಲೆ ಚಿತ್ರವು ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಮಲೆ ಮಹದೇಶ್ವರ ಬೆಟ್ಟದ ಹಿನ್ನೆಲೆಯಲ್ಲಿ ತೆರೆದುಕೊಳ್ಳುತ್ತದೆ. ಈ ಚಿತ್ರವು ಕರ್ನಾಟಕದ ಚಾಮರಾಜನಗರದ ಹುಡುಗ ಮತ್ತು ತಮಿಳುನಾಡಿನ ಸೇಲಂ ಜಿಲ್ಲೆಯ ಹುಡುಗಿಯ ನಡುವಿನ ಪ್ರೇಮಕಥೆಯನ್ನು ಒಳಗೊಂಡಿದೆ.

ಚಿತ್ರದಲ್ಲಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ನಟ ರಾಣಾ ಮತ್ತು ಮಹಾನಟಿ ವಿಜೇತೆ ಪ್ರಿಯಾಂಕಾ ಆಚಾರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಜಗಪತಿ ಬಾಬು, ನಟ ಕಿಶೋರ್ ಪೊಲೀಸ್ ಪಾತ್ರದಲ್ಲಿ ಮತ್ತು ಹಿರಿಯ ನಟ ಟಿಎಸ್ ನಾಗಾಭರಣ ಕೂಡ ಇದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಗ್ಗಪ್ಪ ಕೂಡ ನಟಿಸಿದ್ದಾರೆ.

'ನಿರ್ದೇಶಕ ಪುನೀತ್ ರಂಗಸ್ವಾಮಿ ಈ ಹಿಂದೆ ಕಾಟೇರ ಚಿತ್ರದಲ್ಲಿ ನಮ್ಮೊಂದಿಗೆ ಕೆಲಸ ಮಾಡಿದ್ದರು. ಅವರು ಏಳುಮಲೆ ಕಥೆಯೊಂದಿಗೆ ನನ್ನ ಬಳಿಗೆ ಬಂದಾಗ, ಕಥೆ ಇಷ್ಟವಾಯಿತು. ಆರಂಭದಲ್ಲಿ, ನಾನು ಅದನ್ನು ನಿರ್ಮಿಸುತ್ತೇನೆ ಎಂದು ಅವರಿಗೆ ಹೇಳಲಿಲ್ಲ. ಆದರೆ, ಅವರ ಏಕೈಕ ವಿನಂತಿಯೆಂದರೆ ಯಾರು ನಟಿಸಿದರೂ ನಾನು ಅವರನ್ನು ಸಂಪೂರ್ಣವಾಗಿ ಬೆಂಬಲಿಸಬೇಕು ಎಂಬುದಾಗಿತ್ತು. ನಾನು ಅವರ ಸಾಮರ್ಥ್ಯವನ್ನು ನೋಡಿದೆ ಮತ್ತು ಅವರನ್ನು ಬೆಂಬಲಿಸಲು ನಿರ್ಧರಿಸಿದೆ. ಆಗಸ್ಟ್ ವೇಳೆಗೆ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇತರ ದೊಡ್ಡ ಚಿತ್ರಗಳ ಬಿಡುಗಡೆ ದಿನಾಂಕವನ್ನು ಆಧರಿಸಿ, ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದೇವೆ' ಎಂದು ತರುಣ್ ಹೇಳಿದರು.

ಈ ಚಿತ್ರಕ್ಕೆ ಡಿ ಇಮಾನ್ ಸಂಗೀತ ನೀಡಿದ್ದು, ಅದ್ವೈತ ಗುರುಮೂರ್ತಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಏಳುಮಲೆ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ವಶಪಡಿಸಿಕೊಂಡಿದ್ದ ತೈಲ ಟ್ಯಾಂಕರ್ ನಲ್ಲಿ ಮೂವರು ಭಾರತೀಯರೂ ಇದ್ದರು!

'ಧೈರ್ಯ ಇದ್ದರೆ ಈಗ ಮುಟ್ಟಿ..': ಅಮೆರಿಕಕ್ಕೆ ರಷ್ಯಾ ಸವಾಲು; ಅಣ್ವಸ್ತ್ರ ನೌಕೆಗಳ ನಿಯೋಜನೆ, US ಹಡುಗುಗಳ ಮುಳುಗಿಸಲು ಕರೆ!

RCB ಅಭಿಮಾನಿಗಳಿಗೆ ತೀವ್ರ ನಿರಾಸೆ: ಚಿನ್ನಸ್ವಾಮಿಗಿಲ್ಲ IPL ಭಾಗ್ಯ?, ಹೊಸ ತವರು ಮೈದಾನ ಬಹುತೇಕ ಫಿಕ್ಸ್!

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಈಗ ಮಹಾರಾಷ್ಟ್ರ ಚುನಾವಣೆಯಲ್ಲಿ ಸ್ಪರ್ಧೆ!

ನಟಿ ಜಯಮಾಲ, ಸಾ.ರಾ ಗೋವಿಂದುಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ; ಎಂ.ಎಸ್ ಸತ್ಯುಗೆ ಪುಟ್ಟಣ್ಣ ಕಣಗಾಲ್ ಅವಾರ್ಡ್

SCROLL FOR NEXT