ಟಂಟ್​ಮ್ಯಾನ್ ಮೋಹನ್ ರಾಜ್  
ಸಿನಿಮಾ ಸುದ್ದಿ

ಶೂಟಿಂಗ್ ವೇಳೆ ದುರಂತ: ಸ್ಥಳದಲ್ಲಿಯೇ ಸ್ಟಂಟ್​ಮ್ಯಾನ್ ಮೋಹನ್ ರಾಜ್ ಸಾವು; ಅಪಘಾತದ ವಿಡಿಯೋ ವೈರಲ್

ತಮಿಳು ಸಿನಿಮಾದ ಸ್ಟಾರ್ ನಟ ಆರ್ಯ ಅವರ ಹೊಸ ಸಿನಿಮಾದ ಶೂಟಿಂಗ್​ನಲ್ಲಿ ಕಾರು ಸ್ಟಂಟ್​ ಮಾಡುವ ಸನ್ನಿವೇಶ ಇತ್ತು. ಇದಕ್ಕಾಗಿ ಸಾಹಸ ಕಲಾವಿದ ರಾಜು ಅವರಿಂದ ಕಾರು ಸ್ಟಂಟ್​ ಮಾಡಿಸಲಾಗುತ್ತಿತ್ತು.

ಚೆನ್ನೈ: ಕಾಲಿವುಡ್​ ಸ್ಟಾರ್​ ಆರ್ಯ ನಟನೆಯ ಹೊಸ ಸಿನಿಮಾದ ಶೂಟಿಂಗ್ ಮಾಡುವ ವೇಳೆ ಸ್ಟಂಟ್​ಮ್ಯಾನ್ ಒಬ್ಬರು ನಿಧನರಾಗಿದ್ದಾರೆ. ಶೂಟಿಂಗ್​ನಲ್ಲಿ ಕಾರು ಸ್ಟಂಟ್ ಮಾಡುವಾಗ ಈ ಅವಘಡ ನಡೆದಿದೆ ಎಂದು ಹೇಳಲಾಗಿದೆ.

ತಮಿಳು ಸಿನಿ ರಂಗದ ಸಾಹಸ ಕಲಾವಿದ ರಾಜು ಎನ್ನುವರು ಕೊನೆಯುಸಿರೆಳೆದಿದ್ದಾರೆ. ತಮಿಳು ಸಿನಿಮಾದ ಸ್ಟಾರ್ ನಟ ಆರ್ಯ ಅವರ ಹೊಸ ಸಿನಿಮಾದ ಶೂಟಿಂಗ್​ನಲ್ಲಿ ಕಾರು ಸ್ಟಂಟ್​ ಮಾಡುವ ಸನ್ನಿವೇಶ ಇತ್ತು. ಇದಕ್ಕಾಗಿ ಸಾಹಸ ಕಲಾವಿದ ರಾಜು ಅವರಿಂದ ಕಾರು ಸ್ಟಂಟ್​ ಮಾಡಿಸಲಾಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿ ಘಟನೆಯಲ್ಲಿ ಸ್ಟಂಟ್ ಮ್ಯಾನ್ ರಾಜು ಅವರು ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ತಮಿಳು ನಟ ವಿಶಾಲ್ ಅವರು ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ನಾನು, ರಾಜು ಸಾಕಷ್ಟು ಸಿನಿಮಾಗಳಲ್ಲಿ ಸ್ಟಂಟ್​ಗಳನ್ನು ಮಾಡಿದ್ದೇವೆ. ಅವರನ್ನು ಕಳೆದುಕೊಂಡಿರುವುದು ನಮಗೆ ತುಂಬಾ ದುಃಖ ತರಿಸಿದೆ. ಕಾರು ಉರುಳಿಸುವ ಸನ್ನಿವೇಶದ ಸ್ಟಂಟ್ ಮಾಡುವಾಗ ಈ ಘಟನೆ ನಡೆದಿದೆ. ತಮಿಳು ಸಿನಿ ರಂದಲ್ಲಿ ಕೆಲವು ವರ್ಷಗಳಿಂದ ರಾಜು ರಿಸ್ಕ್​ ತೆಗೆದುಕೊಂಡು ಸ್ಟಂಟ್​ಗಳನ್ನು ಮಾಡುತ್ತಿದ್ದರು. ಆದರೆ ಇಂದು ಕೆಚ್ಚೆದೆಯ ವ್ಯಕ್ತಿ ನಮ್ಮನ್ನು ಅಗಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ತಮಿಳು ಸಿನಿಮಾ ಶೂಟಿಂಗ್​ಗಳಲ್ಲಿ ಸ್ಟಂಟ್ ಮಾಡುತ್ತಿದ್ದ ರಾಜು ಎಲ್ಲರಿಗೂ ಪರಿಚಿತರಾಗಿದ್ದರು. ಪಾ.ರಂಜೀತ್ ನಿರ್ದೇಶನದಲ್ಲಿ ಆರ್ಯ ಅವರು ನಟಿಸುತ್ತಿರುವ ಹೊಸ ಸಿನಿಮಾದ ಶೂಟಿಂಗ್​ನಲ್ಲಿ ರಾಜು ಸ್ಟಂಟ್ ಮಾಡುವಾಗ ಇದು ನಡೆದಿದೆ ಎಂದು ಚಿತ್ರತಂಡ ಅಧಿಕೃತ ಹೇಳಿಕೆ ನೀಡಿದೆ. ಕಾರು ಎತ್ತರಕ್ಕೆ ಹಾರಬೇಕಾದ ಹೈ-ರಿಸ್ಕ್ ಆಕ್ಷನ್ ಸೀಕ್ವೆನ್ಸ್ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಪಘಾತಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ ನಡೆದ ಅವಘಡದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel