ಸ್ವಪ್ನ ಮಂಟಪ ಚಿತ್ರದ ಸ್ಟಿಲ್ - ಚಿತ್ರತಂಡ 
ಸಿನಿಮಾ ಸುದ್ದಿ

ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಸ್ವಪ್ನ ಮಂಟಪ' ಬಿಡುಗಡೆ ದಿನಾಂಕ ಘೋಷಣೆ

ಬರಗೂರು ಅವರ 25 ವರ್ಷಗಳ ಹಳೆಯ ಕಾದಂಬರಿಯನ್ನು ಆಧರಿಸಿದ ಸ್ವಪ್ನ ಮಂಟಪವು ಸಾಂಪ್ರದಾಯಿಕ ರಚನೆಗಳ ಸಂರಕ್ಷಣೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಹಲವಾರು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದ, ಖ್ಯಾತ ಬರಹಗಾರ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಸ್ವಪ್ನ ಮಂಟಪ ಇದೀಗ ಬಿಡುಗಡೆಗೆ ಸಿದ್ಧವಾಗಿದ್ದು, ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಜುಲೈ 25 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮತ್ತು ರಂಜನಿ ರಾಘವನ್ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಮಲೆ ಮಹದೇಶ್ವರ ಎಂಟರ್‌ಪ್ರೈಸಸ್ ಅಡಿಯಲ್ಲಿ ಎಎಂ ಬಾಬು ಚಿತ್ರವನ್ನು ನಿರ್ಮಿಸಿದ್ದು, ಮಾರ್ಸ್ ಸುರೇಶ್ ವಿತರಣೆ ಮಾಡಿದ್ದಾರೆ.

ಬರಗೂರು ಅವರ 25 ವರ್ಷಗಳ ಹಳೆಯ ಕಾದಂಬರಿಯನ್ನು ಆಧರಿಸಿದ ಸ್ವಪ್ನ ಮಂಟಪವು ಸಾಂಪ್ರದಾಯಿಕ ರಚನೆಗಳ ಸಂರಕ್ಷಣೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಐತಿಹಾಸಿಕವಾಗಿ, ರಾಜರು ತಮ್ಮ ಎರಡನೇ ಪತ್ನಿಯರಿಗಾಗಿ 'ಸ್ವಪ್ನ ಮಂಟಪ'ಗಳನ್ನು ನಿರ್ಮಿಸಿದರು. ದುರುಪಯೋಗಕ್ಕೆ ಒಳಗಾದ ಹಳ್ಳಿಯೊಂದರಲ್ಲಿ ನಿರ್ಮಿಸಲಾದ ಅಂತಹ ಒಂದು ರಚನೆಯನ್ನು ಉಳಿಸಲು ಹೇಗೆ ಜಾಗೃತಿ ಮೂಡಿಸಲಾಗುತ್ತದೆ ಎಂಬುದನ್ನು ಈ ಚಿತ್ರವು ವಿವರಿಸುತ್ತದೆ.

ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಬರಗೂರು ರಾಮಚಂದ್ರಪ್ಪ ಅವರು, ಪ್ರಾಯೋಗಿಕ ಸಿನಿಮಾಗಳನ್ನು ಬೆಂಬಲಿಸಬೇಕು. ಟಿಕೆಟ್ ಬೆಲೆ ₹100 ಕ್ಕೆ ಸೀಮಿತಗೊಳಿಸಿ, ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ 150 ಆಸನಗಳ ಚಿತ್ರಮಂದಿರಗಳನ್ನು ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸಿದರು. ಈ ಸಂಬಂಧ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಬರಗೂರು ಅವರೊಂದಿಗೆ ಕೆಲಸ ಮಾಡುವ ತಮ್ಮ ಬಹುದಿನಗಳ ಆಸೆ ಇದೀಗ ಈಡೇರಿದೆ ಎಂದ ನಟ ವಿಜಯ್ ರಾಘವೇಂದ್ರ, ಚಿತ್ರದಲ್ಲಿ ಒಂದು ಹಾಡನ್ನು ಹಾಡಿರುವುದಾಗಿಯೂ ಬಹಿರಂಗಪಡಿಸಿದ್ದಾರೆ. ಚಿತ್ರಕ್ಕೆ ಶಮಿತಾ ಮಲ್ನಾಡ್ ಅವರ ಸಂಗೀತ, ನಾಗರಾಜ್ ಅಡವಾನಿ ಅವರ ಛಾಯಾಗ್ರಹಣ ಮತ್ತು ಸುರೇಶ್ ಯು ಅವರ ಸಂಕಲನವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

SCROLL FOR NEXT