ಶಿವಣ್ಣ 131 ಚಿತ್ರತಂಡ - ನಟ ಶಿವರಾಜ್‌ಕುಮಾರ್ 
ಸಿನಿಮಾ ಸುದ್ದಿ

'ಶಿವಣ್ಣ 131' ಚಿತ್ರದ ಸೆಟ್‌ಗೆ ಮರಳಿದ ಶಿವರಾಜ್‌ಕುಮಾರ್; ಸಂತಸ ಹಂಚಿಕೊಂಡ ಕಾರ್ತಿಕ್ ಅದ್ವೈತ್!

ಶುಕ್ರವಾರ ನಡೆದ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುವ ಸಮಯದಲ್ಲಿ ಅಭಿಮಾನಿಗಳು ಮತ್ತು ಹಿತೈಷಿಗಳ ಅಪಾರ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ತಿಳಿಸಿದರು.

ತಮ್ಮ ಎನರ್ಜಿಯಿಂದಲೇ ಹೆಸರಾಗಿರುವ ನಟ ಶಿವರಾಜಕುಮಾರ್ ಇದೀಗ ತೆರೆಗೆ ಬರಲು ಸಿದ್ಧರಾಗಿದ್ದಾರೆ. ಮಿಯಾಮಿಯಲ್ಲಿ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ಹೊಸ ಹುರುಪಿನೊಂದಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ ಯೋಜನೆಗೆ ತಾತ್ಕಾಲಿಕವಾಗಿ ಶಿವಣ್ಣ 131 ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು, ಇಂದಿನಿಂದ ಚಿತ್ರೀಕರಣ ಪುನರಾರಂಭಿಸಲಿದ್ದಾರೆ.

ಶುಕ್ರವಾರ ನಡೆದ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುವ ಸಮಯದಲ್ಲಿ ಅಭಿಮಾನಿಗಳು ಮತ್ತು ಹಿತೈಷಿಗಳ ಅಪಾರ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ತಿಳಿಸಿದರು. 'ನಿಮ್ಮ ಎಲ್ಲ ಪ್ರಾರ್ಥನೆಗಳು ಮತ್ತು ಶುಭ ಹಾರೈಕೆಗಳು ನನ್ನನ್ನು ಇಲ್ಲಿಗೆ ಕರೆತಂದಿವೆ. ನಾನು ಅದೇ ಶಕ್ತಿ ಮತ್ತು ಹುರುಪಿನೊಂದಿಗೆ ಸೋಮವಾರದಂದು ಕೆಲಸವನ್ನು ಪ್ರಾರಂಭಿಸುತ್ತಿದ್ದೇನೆ' ಎಂದರು.

'ಶಿವಣ್ಣ 131' ಚಿತ್ರವನ್ನು ನಿರ್ದೇಶಿಸುತ್ತಿರುವ ಕಾರ್ತಿಕ್ ಅದ್ವೈತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 'ಬಲಿಷ್ಠವಾದ ಕಂಬ್ಯಾಕ್ ದೇವನಿಗೆ ತಿಳಿದಿರುವ ವಿಷಯಗಳಲ್ಲಿ ಒಂದಾಗಿದೆ. ಮತ್ತೆ ಸ್ವಾಗತ, ರಾಜ!' ಎಂದಿದ್ದಾರೆ.

ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿ, 'ಶಿವಣ್ಣ ಅವರು ಚಿಕಿತ್ಸೆಗಾಗಿ ವಿರಾಮ ತೆಗೆದುಕೊಳ್ಳುವ ಮೊದಲು, ನಾವು ಶೇ 25ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ. ಈಗ, ಅವರು ವಾಪಸ್ ಆಗುತ್ತಿದ್ದು, ಇನ್ನುಳಿದ ಚಿತ್ರೀಕರಣ ನಡೆಸಲು ಸಿದ್ಧರಿದ್ದೇವೆ. ಶಿವಣ್ಣ ಅವರು ಸೆಟ್‌ಗೆ ತುಂಬಾ ಎನರ್ಜಿಯನ್ನು ತರುತ್ತಾರೆ ಮತ್ತು ಅವರನ್ನು ಮರಳಿ ಪಡೆಯಲು ನಾನು ಉತ್ಸುಕನಾಗಿದ್ದೇನೆ. ನಾವು ಮಾತನಾಡುವ ಭಾಗಗಳ ಚಿತ್ರೀಕರಣವನ್ನು ಪ್ರಾರಂಭಿಸುತ್ತೇವೆ ಮತ್ತು ಅದು ತಿಂಗಳಾದ್ಯಂತ ಮುಂದುವರಿಯುತ್ತದೆ. ಕಳೆದ ಕೆಲ ತಿಂಗಳಿನಿಂದಲೂ ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಸೆಟ್‌ಗೆ ಅವರನ್ನು ಮತ್ತೆ ಸ್ವಾಗತಿಸಲು ಸಂತೋಷವಾಗಿದೆ' ಎಂದರು.

ಶಿವರಾಜಕುಮಾರ್ ಅವರು ಚಿತ್ರದಲ್ಲಿ ದೇವ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಪಾತ್ರ ಈ ಮೊದಲು ಮಾಡಿದ್ದಕ್ಕಿಂತ ಭಿನ್ನವಾಗಿದೆ. ಭುವನೇಶ್ವರಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎಸ್‌ಎನ್ ರೆಡ್ಡಿ ಮತ್ತು ಸುಧೀರ್ ಪಿ ನಿರ್ಮಿಸಿರುವ ಈ ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್‌ ಜೊತೆಗೆ ತೆರೆಮೇಲೆ ನವೀನ್ ಶಂಕರ್ ಪ್ರತಿಸ್ಪರ್ಧಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮಾಧುಸ್ವಾಮಿ ಮತ್ತು ಹಲವಾರು ಇತರ ನಟರು ನಟಿಸಿದ್ದು, ಅವರ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ವಿಕ್ರಮ್ ವೇದ, ಆರ್‌ಡಿಎಕ್ಸ್ ಮತ್ತು ಕೈತಿ ಚಿತ್ರಕ್ಕೆ ಹೆಸರಾದ ಸ್ಯಾಮ್ ಸಿಎಸ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಇದು ಕನ್ನಡದ ಚೊಚ್ಚಲ ಚಿತ್ರವಾಗಿದೆ. ದೀಪು ಎಸ್ ಕುಮಾರ್ ಅವರ ಸಂಕಲನ, ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನವಿದೆ. ಈ ಹಿಂದೆ ಟಗರು ಮತ್ತು ಘೋಸ್ಟ್ ಚಿತ್ರಗಳಲ್ಲಿ ಶಿವರಾಜಕುಮಾರ್ ಅವರೊಂದಿಗೆ ಕೆಲಸ ಮಾಡಿದ್ದ ಡಿಒಪಿ ಮಹೇಂದ್ರ ಸಿಂಹ ಅವರು ಈ ಯೋಜನೆಗೆ ಛಾಯಾಗ್ರಾಹಕರಾಗಿ ಮರಳಿದ್ದಾರೆ.

ರಾಮ್ ಚರಣ್ ನಟನೆಯ 'ಆರ್‌ಸಿ 16' ಚಿತ್ರದಲ್ಲಿ ಶಿವಣ್ಣ

ಶಿವರಾಜಕುಮಾರ್ ಎರಡು ಪ್ರಮುಖ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಅವರು ರಾಮ್ ಚರಣ್ ಅವರ ಮುಂಬರುವ ಚಿತ್ರದ ಸೆಟ್‌ಗಳಿಗೆ ಸೇರಿಕೊಳ್ಳಲಿದ್ದಾರೆ. ಚಿತ್ರಕ್ಕೆ ತಾತ್ಕಾಲಿಕವಾಗಿ 'ಆರ್‌ಸಿ 16' ಎಂದು ಶೀರ್ಷಿಕೆ ಇಡಲಾಗಿದೆ. ಚಿತ್ರಕ್ಕೆ ಬುಚ್ಚಿ ಬಾಬು ಸನಾ ಅವರ ನಿರ್ದೇಶನದ ಈ ಚಿತ್ರವು ಕ್ರೀಡಾ ನಾಟಕವಾಗಿದ್ದು, ಶಿವರಾಜಕುಮಾರ್ ಅದರಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT