ಬೆಂಗಳೂರು: ಸ್ಟೀಮ್ ತೆಗೆದುಕೊಳ್ಳುವಾಗ ಬಿಸಿ ನೀರು ಬಿದ್ದು ನಟ, ನಿರೂಪಕ ಮಾಸ್ಟರ್ ಆನಂದ್ ಅವರ ಪತ್ನಿ ಯಶಸ್ವಿನಿ ಅವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಯಶಸ್ವಿನಿಯವರು, ಕಳೆದ ಶನಿವಾರ ಎಲ್ಲರಿಗೂ ನಾರ್ಮಲ್ ಡೇ ಆದರೆ, ನನಗೆ ಮಾತ್ರ ಬ್ಯಾಡ್ ಡೇ ಆಗಿತ್ತು ಎಂದು ಹೇಳಿದ್ದಾರೆ.
ಯಶಸ್ವಿನಿ ಅವರು ಹಾಟ್ ವಾಟರ್ ಸ್ಟೀಮ್ ತೆಗೆದುಕೊಳ್ಳುತ್ತಿದ್ದ ವೇಳೆ, ಮಿಸ್ಸಾಗಿ ಕಾಲಿಗೆ ಬಿಸಿ ನೀರು ಬಿದ್ದಿದೆ. ಬಳಿಕ ಉರಿ ತಾಳಲಾರದೆ ಯಶಸ್ವಿನಿಯವರು ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ವೈದ್ಯರು ಬ್ಯಾಂಡೇಜ್ ಮಾಡಿದ್ದು, ಮನೆಗೆ ಕಳುಹಿಸಿದ್ದಾರೆ. ಬಳಿಕ ಕಾಲುಗಳಲ್ಲಿ ದೊಡ್ಡ ದೊಡ್ಡ ಬೊಬ್ಬೆಗಳಾಗಿದ್ದು, ಪರಿಣಾಮ ಮತ್ತೆ ಆಸ್ಪತ್ರೆಗೆ ಹೋಗಿದ್ದಾರೆ. ಬಳಿಕ ಬಬಲ್ ಒಡೆದು ಸ್ಕಿನ್ ಔಟ್ ಮಾಡಿದ್ದಾರೆಂದು ಹೇಳಿಕೊಂಡಿದ್ದಾರೆ
ಘಟನೆ ವೇಳೆ ಮಾಸ್ಟರ್ ಆನಂದ್ ಅವರು ಮನೆಯಲ್ಲಿರಲಿಲ್ಲ. ಹಂಪಿ ಉತ್ಸವದಲ್ಲಿ ನಿರತರಾಗಿದ್ದರು. ಕಾರ್ಯಕ್ರಮದ ಬಳಿಕ ಮನೆಗೆ ಬಂದ ಮೇಲೆ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದರು. ಪತಿ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ನಾನಿನ್ನೂ ಚೇತರಿಸಿಕೊಂಡಿಲ್ಲ. ಬಹಳ ಹಿಂಸೆಯಾಗುತ್ತಿದೆ. ನನ್ನ ಗಂಡ ನನ್ನ ಜೊತೆ ಇರ್ತಾರೆ ಎಂದು ಖುಷಿಯೂ ಆಗುತ್ತಿದೆ ಎಂದು ಯಶಸ್ವಿನಿಯವರು ತಿಳಿಸಿದ್ದಾರೆ. ಇದೇ ವೇಳೆ ಕಾಲಿಗೆ ಗಾಯವಾಗಿರುವುದು ಹಾಗೂ ಬ್ಯಾಂಡೇಜ್ ಸುತ್ತಿರುವ ಫೋಟೋಗಳನ್ನು ಯಶಸ್ವಿನಿಯವರು ಹಂಚಿಕೊಂಡಿದ್ದಾರೆ.