ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಟನೆಯ ಮುದ್ದು ರಾಕ್ಷಸಿ ಸಿನಿಮಾ ಜೂನ್ ನಲ್ಲಿ ರಿಲೀಸ್ ಆಗಲಿದೆ. ನಿಜ ಜೀವನಲ್ಲಿ ವಿಚ್ಛೇದನ ಪಡೆದ ನಂತರ ಇಬ್ಬರನ್ನು ಒಂದಾಗಿಸಿ ಉಳಿದ ಭಾಗಗಳ ಚಿತ್ರೀಕರಣ ಪೂರ್ಣಗೊಳಿಸಲು ನಿರ್ಮಾಪಕರು ಯಶಸ್ವಿಯಾಗಿದ್ದಾರೆ.
ನಿಜ ಜೀವನದ ವಿಚ್ಛೇದನದ ನಂತರ ಅಪೂರ್ಣವಾಗಿ ಉಳಿದ ಭಾವನಾತ್ಮಕ ದೃಶ್ಯಗಳನ್ನು ಚಿತ್ರೀಕರಣದ ಅಂತಿಮ ಹಂತಗಳಲ್ಲಿ ಚಿತ್ರೀಕರಿಸಲಾಯಿತು. ‘ಮುದ್ದು ರಾಕ್ಷಸಿ’ ಚಿತ್ರದ ದೃಶ್ಯವೊಂದರ ಚಿತ್ರೀಕರಣದಲ್ಲಿ ಅವರಿಬ್ಬರು ತಬ್ಬಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಎಮೋಷನಲ್ ಆಗಿ ನಿವೇದಿತಾ ಗೌಡ ಅವರು ಕಣ್ಣೀರು ಹಾಕಿದರು.
ಸಿನಿಮಾ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ನಿರ್ದೇಶಕ ಪುನೀತ್ ಶ್ರೀನಿವಾಸ್, ಶೂಟಿಂಗ್ ಉದ್ದಕ್ಕೂ ಇಬ್ಬರೂ ನಟರ ವೃತ್ತಿಪರತೆಯನ್ನು ಶ್ಲಾಘಿಸಿದರು. ದೂರವಾದ ನಂತರವೂ, ಅವರು ಸೆಟ್‌ನಲ್ಲಿ ಸಂಪೂರ್ಣವಾಗಿ ವೃತ್ತಿಪರರಾಗಿದ್ದರು. ಅವರಿಬ್ಬರಲ್ಲಿ ಯಾವುದೇ ಒತ್ತಡದ ಲಕ್ಷಣಗಳಿಲ್ಲ, ಮತ್ತು ಅವರು ಮನಪೂರ್ತಿ ಒಟ್ಟಿಗೆ ಕೆಲಸ ಮಾಡಿದರು ಎಂದು ಪುನೀತ್ ಹೇಳಿದರು.
ಉಳಿದ ಭಾಗಗಳ ಶೂಟಿಂಗ್ ಮುಗಿಸಲು ನಾವು ಅವರನ್ನು ಸಂಪರ್ಕಿಸಿದಾಗ, ಇಬ್ಬರೂ ಹಿಂಜರಿಕೆಯಿಲ್ಲದೆ ಒಪ್ಪಿಕೊಂಡರು. ನಮಗೆ ಕೇವಲ ಒಂದು ದಿನದ ಚಿತ್ರೀಕರಣ ಮಾತ್ರ ಉಳಿದಿದ್ದು ಜೂನ್‌ನಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಥೆ ಮತ್ತು ಚಿತ್ರಕಥೆಯನ್ನು ಬರೆದ ಪುನೀತ್, ಬೆಂಗಳೂರು ಮತ್ತು ಸುತ್ತಮುತ್ತ ಶೂಟಿಂಗ್ ನಡೆದಿದೆ. ಈ ಚಿತ್ರವು ರೋಮ್ಯಾನ್ಸ್ ಮತ್ತು ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿದೆ, ಎಂ.ಎಸ್. ತ್ಯಾಗರಾಜ್ ಅವರ ಸಂಗೀತ ಸಂಯೋಜನೆ ಮತ್ತು ಎ. ಕರುಣಾಕರ್ ಅವರ ಛಾಯಾಗ್ರಹಣವಿದೆ.