ಮಾಲಿವುಡ್ ಸಿನಿಮಾರಂಗದ ದಿಗ್ಗಜ ನಟ ಮಮ್ಮುಟ್ಟಿ ಅವರ ಆರೋಗ್ಯದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಹಿರಿಯ ನಟ ಮಮ್ಮುಟ್ಟಿ ಅವರಿಗೆ 73 ವರ್ಷವಾದರೂ ಸಿನಿಮಾಗಳ ವಿಚಾರದಲ್ಲಿ ಅವರು ಒಂದಲ್ಲ ಒಂದು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಮಮ್ಮುಟ್ಟಿ ಅವರ ಸಿನಿಮಾಗಳು ಇಂದಿಗೂ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗಳಿಕೆ ಕಾಣುತ್ತದೆ. ಮಮ್ಮುಟ್ಟಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಚಿತ್ರರಂಗದಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎನ್ನುವ ಮಾತೊಂದು ಮಾಲಿವುಡ್‌ನಲ್ಲಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ.
ಇದನ್ನು ಕೇಳಿ ಮಮ್ಮುಟ್ಟಿ ಅವರ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಮಮ್ಮುಟ್ಟಿ ಅವರ ತಂಡ ಸ್ಪಷ್ಟನೆ ನೀಡಿದೆ. ಇದು ಸುಳ್ಳು ಸುದ್ದಿ. ಅವರು ರಂಜಾನ್ ಉಪವಾಸ ಇರುವುದರಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.
ಆ ಕಾರಣದಿಂದಾಗಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲ. ವಿರಾಮದ ನಂತರ ಅವರು ಮೋಹನ್ ಲಾಲ್ ಜೊತೆ ಮಹೇಶ್ ನಾರಾಯಣನ್ ಅವರ ಚಿತ್ರದ ಚಿತ್ರೀಕರಣಕ್ಕೆ ಹಿಂತಿರುಗುತ್ತಾರೆ ಎಂದು ನಟನ ತಂಡ ಹೇಳಿದೆ.