ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ರಸ್ಮಿಕಾ ಮಂದಣ್ಣ ಅವರ ಕಿಸ್ಸಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಇಬ್ಬರೂ ಚುಂಬಿಸುತ್ತಿರುವುದು ಕಾಣಿಸುತ್ತದೆ.
ಕೆಲವೊಂದು ಯು ಟ್ಯೂಬ್ ಚಾನೆಲ್ ನಲ್ಲಿಯೂ ಈ ವಿಡಿಯೋವನ್ನು ಫೋಸ್ಟ್ ಮಾಡಲಾಗಿದೆ. 'ರಶ್ಮಿಕಾ ಮಂದಣ್ಣಗೆ ಸಲ್ಮಾನ್ ಖಾನ್ ಕಿಸ್ ಮಾಡಿದರು ಎಂದು ಬರೆಯಲಾಗಿದೆ.
ಆದರೆ ಇದು ನಕಲಿ ವಿಡಿಯೋ ಎಂದು ಪರಿಶೀಲನೆಯಿಂದ ತಿಳಿದು ಬಂದಿದೆ. 'ಎಐ' ತಂತ್ರಜ್ಞಾನ ಬಳಸಿ ಈ ವಿಡಿಯೋ ರಚಿಸಲಾಗಿದೆ ಎಂದು ಎಂದು ದೃಢಪಟ್ಟಿದೆ.
ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅವರ 'ಸಿಕಂದರ್' ಸಿನಿಮಾದ ಪ್ರಚಾರದ ಸಂದರ್ಭದ ವಿಡಿಯೋ ಇದಾಗಿದೆ. ಇದರಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಇಬ್ಬರೂ ಉತ್ತರಿಸುತ್ತಿರುವುದನ್ನು ಕಾಣಬಹುದು. ಆದರೆ ಇದರಲ್ಲಿ ಕಿಸ್ ಮಾಡುವ ಯಾವುದೇ ದೃಶ್ಯ ಕಂಡುಬಂದಿಲ್ಲ.
ಅಂದಹಾಗೆ, ಎ.ಆರ್. ಮುರುಗದಾಸ್ ನಿರ್ದೇಶನದ ಮತ್ತು ಸಾಜಿದ್ ನಾಡಿಯಾಡ್‌ವಾಲಾ ನಿರ್ಮಿಸಿರುವ ಸಿಕಂದರ್ ಚಿತ್ರ ಮಾರ್ಚ್ 30 ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಇದರಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮತ್ತು ಸತ್ಯರಾಜ್ ಖಳನಾಯಕನಾಗಿ ನಟಿಸಿದ್ದಾರೆ. ಇನ್ಸ್‌ಪೆಕ್ಟರ್ ಪ್ರಕಾಶ್ ಪಾತ್ರದಲ್ಲಿ ಕಿಶೋರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.