ಚಿತ್ರದ ಸ್ಟಿಲ್  
ಸಿನಿಮಾ ಸುದ್ದಿ

ಮೋಹನ್ ಲಾಲ್ ರ 'L2: Empuraan' ಚಿತ್ರ ಬಿಡುಗಡೆ: ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆ

ಕೆಲವು ಬಲಪಂಥೀಯ ಸೋಷಿಯಲ್ ಮೀಡಿಯಾ ನಿರ್ವಾಹಕರು ಅಸಮಾಧಾನ ವ್ಯಕ್ತಪಡಿಸಿದ್ದು, ನಿರ್ದೇಶಕ ಪೃಥ್ವಿರಾಜ್ ಅವರು ಮೋಹನ್ ಲಾಲ್ ಮತ್ತು ಅವರ ಅಭಿಮಾನಿಗಳನ್ನು ವಂಚಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಬಹುನಿರೀಕ್ಷಿತ ಚಿತ್ರ 'L2: ಎಂಪುರಾನ್' ಚಿತ್ರ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕೆಲವು ವೀಕ್ಷಕರು ಇದನ್ನು ಬಲಪಂಥೀಯ ಸಿದ್ಧಾಂತಗಳನ್ನು ಅವಹೇಳನ ಮಾಡುವ ರಾಜಕೀಯ ಒಳನೋಟವನ್ನು ಹೊಂದಿದೆ ಎಂದು ಬಣ್ಣಿಸಿದ್ದಾರೆ.

ಕೆಲವು ಬಲಪಂಥೀಯ ಸೋಷಿಯಲ್ ಮೀಡಿಯಾ ನಿರ್ವಾಹಕರು ಅಸಮಾಧಾನ ವ್ಯಕ್ತಪಡಿಸಿದ್ದು, ನಿರ್ದೇಶಕ ಪೃಥ್ವಿರಾಜ್ ಅವರು ಮೋಹನ್ ಲಾಲ್ ಮತ್ತು ಅವರ ಅಭಿಮಾನಿಗಳನ್ನು ವಂಚಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಸನಾತನ ಧರ್ಮ'ದ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪೃಥ್ವಿರಾಜ್ ಅವರು ಮೋಹನ್ ಲಾಲ್ ಮತ್ತು ಅವರ ಅಭಿಮಾನಿಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೋಹನ್ ಲಾಲ್ ನಟಿಸಿದ ಇತ್ತೀಚಿನ 'ಎಂಪುರಾನ್' ಚಿತ್ರವು ಬಹಿರಂಗವಾಗಿ ಹಿಂದೂ ವಿರೋಧಿ ಚಿತ್ರವಾಗಿದ್ದು, ಭಾರತ ಸೇರಿದಂತೆ ಉಪಖಂಡದಾದ್ಯಂತ ನಡೆಯುತ್ತಿರುವ ಹಿಂದೂಗಳ ನರಮೇಧದ ನಡುವೆ ಹಿಂದೂಗಳನ್ನು ಖಳನಾಯಕರನ್ನಾಗಿ ಚಿತ್ರೀಕರಿಸಿದೆ ಎಂದು ಹಿಂದೂ ಸೇವಾ ಕೇಂದ್ರದ ಸ್ಥಾಪಕ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA)ದೊಂದಿಗೆ ಗುರುತಿಸಿಕೊಂಡ ವ್ಯಕ್ತಿ ಪ್ರತೀಶ್ ವಿಶ್ವನಾಥ್, ಚಲನಚಿತ್ರ ನಿರ್ಮಾಪಕರು ರಹಸ್ಯ ಅಜೆಂಡಾ ಹೊಂದಿದ್ದಾರೆಂದು ಆರೋಪಿಸಿದ್ದಾರೆ.

ಎಡಪಂಥೀಯ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಗಳು, ಪೃಥ್ವಿರಾಜ್ ಅವರು ಸತ್ಯವಾದ ಕಥೆಯನ್ನು ಹೇಳುವ ಧೈರ್ಯ ತೋರಿಸಿದ್ದಾರೆ ಎಂದು ಹೊಗಳಲು ಪ್ರಾರಂಭಿಸಿದರು.

ಮಾಜಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮತ್ತು ಪೊಲಿಟ್‌ಬ್ಯೂರೋ ಸದಸ್ಯ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ, ಚಲನಚಿತ್ರ ನಿರ್ಮಾಪಕರು ಸಾಕಷ್ಟು ಬಜೆಟ್ ನೊಂದಿಗೆ ಸತ್ಯವನ್ನು ಬಹಿರಂಗಪಡಿಸಲು ಪ್ರಯತ್ನಿಸಿದ್ದಕ್ಕಾಗಿ ಅಭಿನಂದನೆಗೆ ಅರ್ಹರು ಎಂದು ಪೋಸ್ಟ್ ಮಾಡಿದ್ದಾರೆ.

ಕೆಲವು ಎಡಪಂಥೀಯ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಗಳು ಸಂಯಮವನ್ನು ವಹಿಸಿ, ಬಲಪಂಥೀಯ ಮತ್ತು ಬಿಜೆಪಿಯ ಬಗ್ಗೆ ಚಿತ್ರದ ಟೀಕೆಯ ಹೊರತಾಗಿಯೂ, ಅದು ಅವರ ಸಿದ್ಧಾಂತವನ್ನು ಸೂಕ್ಷ್ಮವಾಗಿ ಪ್ರಚಾರ ಮಾಡುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT