ರಜನಿಕಾಂತ್ (FILE Photo | PTI)
ಸಿನಿಮಾ ಸುದ್ದಿ

ಪಹಲ್ಗಾಮ್ ದಾಳಿ 'ಅನಾಗರಿಕ'; ಫೈಟರ್ ಮೋದಿಯಿಂದ ಕಾಶ್ಮೀರದಲ್ಲಿ ಮತ್ತೆ ಶಾಂತಿ ಸ್ಥಾಪನೆ: ರಜನಿಕಾಂತ್

World Audio Visual ಮತ್ತು Entertainment Sum (WAVES) ಬಾಲಿವುಡ್ ಮತ್ತು ದಕ್ಷಿಣ ಚಿತ್ರರಂಗದ ತಾರೆಯರು ಹಾಗೂ ಉದ್ಯಮದ ನಾಯಕರು ಮತ್ತು ರಾಜಕೀಯ ವ್ಯಕ್ತಿಗಳನ್ನು ಒಂದೇ ವೇದಿಕೆಗೆ ತರುತ್ತದೆ.

ಮುಂಬೈ: ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು 'ಅನಾಗರಿಕ ಮತ್ತು ಕರುಣೆರಹಿತ' ಎಂದು ಕರೆದ ಹಿರಿಯ ನಟ ರಜನಿಕಾಂತ್, ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ಶಾಂತಿಯನ್ನು ತಂದೇ ತರುವ ಹೋರಾಟಗಾರ ಎಂದು ಗುರುವಾರ ಹೇಳಿದ್ದಾರೆ.

'ಜಾಗತಿಕ ಶ್ರವಣ–ದೃಶ್ಯ ಮನರಂಜನೆ ಶೃಂಗ–2025' ಉದ್ಘಾಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರವು ಮನರಂಜನಾ ಉದ್ಯಮದ ಮೇಲೆ ಗಮನ ಕೇಂದ್ರೀಕರಿಸಿದೆ ಎಂಬ 'ಅನಗತ್ಯ ಟೀಕೆ'ಯಿಂದಾಗಿ ನಾಲ್ಕು ದಿನಗಳ ಈ ಕಾರ್ಯಕ್ರಮವನ್ನು ಮುಂದೂಡಬಹುದು ಎಂದು ಅನೇಕ ಜನರು ಹೇಳಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿಜಿ ಅವರಿಂದಾಗಿ ಈ ಕಾರ್ಯಕ್ರಮ ಖಂಡಿತವಾಗಿಯೂ ನಡೆಯುತ್ತದೆ ಎಂದು ನನಗೆ ವಿಶ್ವಾಸವಿತ್ತು ಎಂದರು.

World Audio Visual ಮತ್ತು Entertainment Sum (WAVES) ಬಾಲಿವುಡ್ ಮತ್ತು ದಕ್ಷಿಣ ಚಿತ್ರರಂಗದ ತಾರೆಯರು ಹಾಗೂ ಉದ್ಯಮದ ನಾಯಕರು ಮತ್ತು ರಾಜಕೀಯ ವ್ಯಕ್ತಿಗಳನ್ನು ಒಂದೇ ವೇದಿಕೆಗೆ ತರುತ್ತದೆ.

'ಪ್ರಧಾನಿ ಮೋದಿ ಒಬ್ಬ ಹೋರಾಟಗಾರ. ಅವರು ಯಾವುದೇ ಸವಾಲನ್ನು ಎದುರಿಸುತ್ತಾರೆ. ಅವರು ಅದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ ಮತ್ತು ಕಳೆದ ಒಂದು ದಶಕದಲ್ಲಿ ನಾವು ಅದನ್ನು ನೋಡುತ್ತಿದ್ದೇವೆ. ಕಾಶ್ಮೀರದ ಪರಿಸ್ಥಿತಿಯನ್ನು ಕೂಡ ಅವರು 'ಧೈರ್ಯದಿಂದ ಮತ್ತು ಆಕರ್ಷಕವಾಗಿ' ನಿಭಾಯಿಸುತ್ತಾರೆ' ಎಂದು ಹೇಳಿದರು.

'ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತಾರೆ ಮತ್ತು ನಮ್ಮ ದೇಶಕ್ಕೆ ಕೀರ್ತಿ ತರುತ್ತಾರೆ. ನಾನು ಇಲ್ಲಿರುವುದಕ್ಕೆ ತುಂಬಾ ಸಂತೋಷವಾಗಿದ್ದೇನೆ ಮತ್ತು WAVES ಕಾರ್ಯಕ್ರಮದ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ. ಕೇಂದ್ರ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು' ಎಂದು ರಜನಿಕಾಂತ್ ಹೇಳಿದರು.

WAVES ಚಲನಚಿತ್ರಗಳು, OTT ವೇದಿಕೆಗಳು, ಗೇಮಿಂಗ್, ಕಾಮಿಕ್ಸ್, ಡಿಜಿಟಲ್ ಮಾಧ್ಯಮ, AI, AVGC-XR, ಬ್ರಾಡ್‌ಕಾಸ್ಟಿಂಗ್ ಮತ್ತು ಉದಯೋನ್ಮುಖ ತಂತ್ರಜ್ಞಾನವನ್ನು ಒಂದೇ ವೇದಿಕೆಯಡಿ ತರುತ್ತದೆ. 2029ರ ಹೊತ್ತಿಗೆ ಭಾರತದ ಮನರಂಜನಾ ಉದ್ಯಮದ ಮಾರುಕಟ್ಟೆಯನ್ನು 50 ಶತಕೋಟಿ ಡಾಲರ್‌ಗೆ ವಿಸ್ತರಿಸುವ ಗುರಿಯನ್ನು 'ವೇವ್ಸ್' ಹೊಂದಿದೆ.

ಈ ಶೃಂಗಸಭೆಯು, ಜಾಗತಿಕ ಮನರಂಜನಾ ಆರ್ಥಿಕತೆಯಲ್ಲಿ ಭಾರತದ ಹೆಜ್ಜೆಗುರುತನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT