ನಾಗಣ್ಣ, ಉಪೇಂದ್ರ, ಸೂರಪ್ಪ ಬಾಬು 
ಸಿನಿಮಾ ಸುದ್ದಿ

'ಭಾರ್ಗವ' ಚಿತ್ರಕ್ಕಾಗಿ ಮತ್ತೆ ಒಂದಾದ ಉಪೇಂದ್ರ-ನಾಗಣ್ಣ! ಎರಡು ವಿಭಿನ್ನ ಶೆಡ್ ನಲ್ಲಿ ಉಪ್ಪಿ

ಕೋಟಿಗೊಬ್ಬ, ಕೋಟಿಗೊಬ್ಬ 2 ಮತ್ತು 3 ಚಿತ್ರಗಳಿಗೆ ಹೆಸರುವಾಸಿಯಾದ ರಾಮ್ ಬಾಬು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸೂರಪ್ಪ ಬಾಬು ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಇದು ಉಪೇಂದ್ರ ಜೊತೆಗಿನ ಅವರ ಮೊದಲ ಸಿನಿಮಾವಾಗಿದೆ.

ಈ ಹಿಂದೆ ಕುಟುಂಬ, ಗೋಕರ್ಣ, ದುಬೈ ಬಾಬು, ಮತ್ತು ಗೌರಮ್ಮ ಮುಂತಾದ ಗಮನಾರ್ಹ ಕೌಟುಂಬಿಕ ಚಿತ್ರಗಳನ್ನು ನೀಡಿದ ನಟ ಉಪೇಂದ್ರ ಮತ್ತು ನಿರ್ದೇಶಕ ನಾಗಣ್ಣ ಅವರ ಜೋಡಿ 'ಭಾರ್ಗವ' ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ. ಅಕ್ಷಯ ತೃತೀಯ ಸಂದರ್ಭದಲ್ಲಿ ಟೈಟಲ್ ಟೀಸರ್ ನೊಂದಿಗೆ ಹೊಸ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಲಾಯಿತು. ಚಿತ್ರಕ್ಕೆ a violent family man ಎಂಬ ಅಡಿಬರಹವಿದೆ.

ಕೋಟಿಗೊಬ್ಬ, ಕೋಟಿಗೊಬ್ಬ 2 ಮತ್ತು 3 ಚಿತ್ರಗಳಿಗೆ ಹೆಸರುವಾಸಿಯಾದ ರಾಮ್ ಬಾಬು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸೂರಪ್ಪ ಬಾಬು ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಇದು ಉಪೇಂದ್ರ ಜೊತೆಗಿನ ಅವರ ಮೊದಲ ಸಿನಿಮಾವಾಗಿದೆ. ಭಾರ್ಗವ ಚಿತ್ರಕ್ಕಾಗಿ ಕೆಲಸ ಮಾಡುತ್ತಿರುವ ಕಥೆಗಾರರನ್ನು ಒಟ್ಟುಗೊಡಿಸಿದ ಸೂರಪ್ಪ ಬಾಬು, ಇದು ಯಾವುದೇ ಸಿನಿಮಾಗಳಿಂದ ಪ್ರೇರಣೆ ಪಡೆದಿಲ್ಲ ಎಂದು ಖಚಿತಪಡಿಸಿದ್ದಾರೆ.

ಇದು ಸಂಪೂರ್ಣವಾಗಿ ಕನ್ನಡಿಗರಿಗಾಗಿ ಮತ್ತು ಇದು ಪ್ಯಾನ್-ಇಂಡಿಯಾ ಚಿತ್ರವಾಗಿರುವುದಿಲ್ಲ" ಎಂದು ಸೂರಪ್ಪ ಬಾಬು ಬಹಿರಂಗಪಡಿಸಿದರು. ಭಾರ್ಗವ ಎಂಬ ಹೆಸರನ್ನು ಸಾಮಾನ್ಯವಾಗಿ ಪೌರಾಣಿಕವಾಗಿ ಉಲ್ಲೇಖಿಸಲಾಗುತ್ತದೆ. ಭಾರ್ಗವ ಅಸ್ತ್ರ ಎಂದು ಕರೆಯಲ್ಪಡುವ ರಾಮನ ಬಿಲ್ಲು ದೈವಿಕ ಶಕ್ತಿಯ ಸಂಕೇತವಾಗಿದೆ. ಆದಾಗ್ಯೂ, ಈ ಚಿತ್ರದ ಅಡಿಬರಹವು ವಿಭಿನ್ನ ಕಥೆಯನ್ನು ಹೇಳುತ್ತದೆ.

ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ನಿರ್ದೇಶಕ ನಾಗಣ್ಣ, ಅಡಿಬರಹ, ಸಂಘರ್ಷವನ್ನು ಪ್ರತಿಬಿಂಬಿಸುತ್ತದೆ ಎಂದು ಬಹಿರಂಗಪಡಿಸಿದರು. ಹಿಂಸಾತ್ಮಕ ಕುಟುಂಬದ ಮನುಷ್ಯನ ವ್ಯತಿರಕ್ತ ಬದಲಾವಣೆಯ ಕಥೆ ಹೇಳಲಾಗುತ್ತಿದೆ ಎಂದು ತಿಳಿಸಿದರು.

ಅರ್ಜುನ್ ಜನ್ಯ ಅವರ ನಿರ್ದೇಶನದ ಚೊಚ್ಚಲ 45 ರಲ್ಲಿ ಮುಂದಿನ ಬಾರಿ ಕಾಣಿಸಿಕೊಳ್ಳಲಿರುವ ಉಪೇಂದ್ರ, ಭಾರ್ಗವ ಚಿತ್ರದಲ್ಲಿ ಎರಡು ವಿಭಿನ್ನ ಶೆಡ್ ಗಳ ಪಾತ್ರ ಮಾಡುತ್ತಿದ್ದಾರೆ. ಇದೊಂದು ಭಾವನೆ, ಹಾಸ್ಯಗಳ ತೀವ್ರತೆಯನ್ನೊಳಗೊಂಡ ಪಾತ್ರವಾಗಿದ್ದು, ಉಪೇಂದ್ರ ಅವರಿಗೆ ಹೊಸ ರೀತಿಯ ಪಾತ್ರ.

ಕಥೆಯು ಕುಟುಂಬದ ವ್ಯಕ್ತಿಯ ಸುತ್ತ ಸುತ್ತುತ್ತದೆಯಾದರೂ, ಆತ ಎದುರಿಸುವ ಸನ್ನಿವೇಶಗಳು ಮಿತಿಯನ್ನು ಮೀರಿ ಆತನನ್ನು ಸಂಘರ್ಷಕ್ಕೆ ತಳ್ಳುತ್ತವೆ ಎಂದು ನಿರ್ದೇಶಕರು ವಿವರಿಸಿದರು.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರಾಜರತ್ನಂ ಛಾಯಾಗ್ರಹಣ ಒದಗಿಸಲಿದ್ದಾರೆ. ಅವರು ಈ ಹಿಂದೆ ಕೋಟಿಗೊಬ್ಬ 2 ನಲ್ಲಿಯೂ ಕೆಲಸ ಮಾಡಿದ್ದಾರೆ. ಸ್ಕ್ರಿಪ್ಟ್ ಅಂತಿಮಗೊಂಡಿದ್ದು, ತಂಡವು ಪ್ರಸ್ತುತ ಪೂರ್ಣ ಪಾತ್ರವರ್ಗ ಆಯ್ಕೆ ಮಾಡುವಲ್ಲಿ ನಿರತವಾಗಿದೆ. ಹಿರಿಯ ನಟರಾದ ಅವಿನಾಶ್ ಮತ್ತು ರಂಗಾಯಣ ರಘು ಈಗಾಗಲೇ ಚಿತ್ರಕ್ಕೆ ಸೇರ್ಪಡೆಗೊಂಡಿದ್ದು, ನಾಯಕಿ ಹೆಸರು ಶೀಘ್ರದಲ್ಲೇ ಘೋಷಣೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT