ಯಾರಿಗೆ ಬೇಕು ಈ ಲೋಕ ಚಿತ್ರದಲ್ಲಿ ಪ್ರಿಯಾಂಕಾ ರೆವ್ರಿ 
ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು ವೃತ್ತಿಜೀವನದ ಒಂದು ದೊಡ್ಡ ಕ್ಷಣ; ಪ್ರಿಯಾಂಕಾ ರೆವ್ರಿ

ಚಿತ್ರದಲ್ಲಿ, ಪ್ರಿಯಾಂಕಾ ನಾಯಕನ ಪ್ರೇಯಸಿಯ ಪಾತ್ರವನ್ನು ನಿರ್ವಹಿಸುತ್ತಾರೆ. ಅವ್ಯವಸ್ಥೆಯ ನಡುವೆ ಶಾಂತತೆಯನ್ನು ತರುವ ಬಲವಾದ ಆದರೆ ಸೌಮ್ಯವಾದ ಪಾತ್ರ ಇದಾಗಿದೆ.

'ಪ್ರೇಮ ದೇಶಪು ಯುವರಾಣಿ' ಮತ್ತು 'ಲೀಗಲಿ ವೀರ್' ನಂತಹ ತೆಲುಗು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಪ್ರಿಯಾಂಕಾ ರೆವ್ರಿ ಇದೀಗ ಕನ್ನಡ ಸಿನಿಮಾ ಜಗತ್ತಿಗೆ ಕಾಲಿಡುತ್ತಿದ್ದಾರೆ. ನಟ ಆರ್ಯವರ್ಧನ್ ಜೊತೆ 'ಯಾರಿಗೆ ಬೇಕು ಈ ಲೋಕ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಲು ಪ್ರಿಯಾಂಕಾ ಸಜ್ಜಾಗಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ಗೌತಮ್ ವಿಗ್ ಅವರೊಂದಿಗೆ ಇತ್ತೀಚೆಗೆ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಂಡ ನಂತರ, ಪ್ರಿಯಾಂಕಾ ಇದೀಗ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

'ಕನ್ನಡ ಭಾಷೆಯ ಉಚ್ಚಾರಣೆ ತುಂಬಾ ಚೆನ್ನಾಗಿದೆ ಮತ್ತು ಅದು ಸಂಸ್ಕೃತ ಪದಗಳನ್ನು ಒಳಗೊಂಡಿರುವುದು ನನಗೆ ತುಂಬಾ ಇಷ್ಟವಾಯಿತು. ಸಂಸ್ಕೃತಿ, ಅಭಿವ್ಯಕ್ತಿಗಳು ಎಲ್ಲವೂ ನನಗೆ ಹೊಸದಾಗಿತ್ತು. ಆದರೆ, ಅದು ಅದನ್ನು ಇನ್ನಷ್ಟು ರೋಮಾಂಚನಗೊಳಿಸಿತು. ಇದು ಹೊಸ ಗಾಳಿಯನ್ನು ಉಸಿರಾಡಿದಂತೆ ಭಾಸವಾಯಿತು' ಎಂದರು.

ಆಡಿಷನ್ ಮೂಲಕವೇ ಈ ಪಾತ್ರಕ್ಕೆ ಆಯ್ಕೆಯಾಗಿರುವ ಪ್ರಿಯಾಂಕಾ, 'ನಾನು ನನ್ನ ಕೈಲಾದ ಎಲ್ಲ ಪ್ರಯತ್ನವನ್ನು ಮಾಡಿದ್ದೇನೆ. ತಯಾರಿ ಮಾಡಿಕೊಳ್ಳುವಾಗ ನಾನು ತುಂಬಾ ಬದ್ಧಳಾಗಿದ್ದೆ ಮತ್ತು ನಾನು ಆಯ್ಕೆಯಾಗಿದ್ದೇನೆ ಎಂದು ದೃಢೀಕರಿಸುವ ಕರೆ ಬಂದಾಗ, ನಾನು ತುಂಬಾ ಸಂತೋಷಪಟ್ಟೆ. ಇದು ನನ್ನ ವೃತ್ತಿಜೀವನದಲ್ಲಿ ಒಂದು ದೊಡ್ಡ ಕ್ಷಣದಂತೆ ಭಾಸವಾಯಿತು' ಎಂದು ಹೇಳಿದರು.

'ಯಾರಿಗೆ ಬೇಕು ಈ ಲೋಕ' ಚಿತ್ರವನ್ನು 'ಸಸ್ಪೆನ್ಸ್, ಡ್ರಾಮಾ ಮತ್ತು ರೊಮ್ಯಾನ್ಸ್‌ನ ರೋಮಾಂಚಕ ಮಿಶ್ರಣ' ಎಂದು ವಿವರಿಸಿದ ಪ್ರಿಯಾಂಕಾ, 'ಕಥೆಯು ಹಿಡಿತದ ವೇಗದಲ್ಲಿ ಚಲಿಸುತ್ತಲೇ ಇರುತ್ತದೆ. ಮುಂದೆ ಏನಾಗುತ್ತದೆ ಎಂದು ನೀವು ಯಾವಾಗಲೂ ಆಶ್ಚರ್ಯ ಪಡುತ್ತಿರುತ್ತೀರಿ. ಇದು ಭಾವನೆಗಳಿಂದ ತುಂಬಿರುತ್ತದೆ ಮತ್ತು ಆಶ್ಚರ್ಯಗಳಿಂದ ತುಂಬಿರುತ್ತದೆ' ಎಂದು ತಿಳಿಸಿದರು.

ಚಿತ್ರದಲ್ಲಿ, ಪ್ರಿಯಾಂಕಾ ನಾಯಕನ ಪ್ರೇಯಸಿಯ ಪಾತ್ರವನ್ನು ನಿರ್ವಹಿಸುತ್ತಾರೆ. ಅವ್ಯವಸ್ಥೆಯ ನಡುವೆ ಶಾಂತತೆಯನ್ನು ತರುವ ಬಲವಾದ ಆದರೆ ಸೌಮ್ಯವಾದ ಪಾತ್ರ ಇದಾಗಿದೆ. 'ಏನೇ ಇರಲಿ ಅವಳು ಅವನೊಂದಿಗೆ ನಿಲ್ಲುತ್ತಾಳೆ. ಅವಳು ಪ್ರೀತಿಪಾತ್ರಳು ಮತ್ತು ದಯೆಯುಳ್ಳವಳು ಮತ್ತು ಅವಳ ಉಪಸ್ಥಿತಿಯು ಕಥೆಗೆ ಗಮ್ಮತ್ತನ್ನು ತರುತ್ತದೆ' ಎಂದು ವಿವರಿಸಿದರು.

ಆರ್ಯವರ್ಧನ್ ಜೊತೆ ಕೆಲಸ ಮಾಡುವ ಬಗ್ಗೆ ಮಾತನಾಡಿದ ಪ್ರಿಯಾಂಕಾ, 'ಅವರೊಂದಿಗೆ ಕೆಲಸ ಮಾಡುವುದು ಸಂತೋಷವಾಗಿತ್ತು. ಮೋಜಿನ, ಸ್ನೇಹಪರ ಮತ್ತು ತುಂಬಾ ಬೆಂಬಲ ನೀಡುತ್ತಿದ್ದರು. ನಾನು ಇನ್ನೂ ಭಾಷೆಗೆ ಒಗ್ಗಿಕೊಳ್ಳುತ್ತಿದ್ದರಿಂದ, ಅವರು ನನ್ನ ವಾಕ್ಯಗಳಳ್ಲಿ ಆಗಾಗ್ಗೆ ನನಗೆ ಸಹಾಯ ಮಾಡುತ್ತಿದ್ದರು. ನಾವು ಸೆಟ್‌ನಲ್ಲಿ ಉತ್ತಮ ವಾತಾವರಣವನ್ನು ಹಂಚಿಕೊಂಡಿದ್ದೇವೆ' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದುಬೈ ಏರ್ ಶೋ ವೇಳೆ ದುರಂತ; ಭಾರತದ ತೇಜಸ್ ಯುದ್ಧ ವಿಮಾನ ಪತನ, ಬೆಂಕಿಯುಂಡೆಯಾಗಿ ಸ್ಫೋಟ, Video

ಹೈಕಮಾಂಡ್ ಎಂದೂ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಲ್ಲ; ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ

'ನಾನು ಇನ್ನು ಮುಂದೆ ಈ SIR ಕೆಲಸ ಮಾಡಲು ಸಾಧ್ಯವಿಲ್ಲ': ಕೆಲಸದ ಒತ್ತಡದಿಂದ ಗುಜರಾತ್ ಶಿಕ್ಷಕ ಆತ್ಮಹತ್ಯೆ

Karnataka Politics: 'ನನ್ ಹತ್ರ ಯಾವ್ ಬಣ್ಣನೂ ಇಲ್ಲ.. ನಾನು ಎಲ್ಲ 140 ಶಾಸಕರಿಗೂ ಅಧ್ಯಕ್ಷ': ಡಿಕೆ ಶಿವಕುಮಾರ್, Video

ಕೇರಳ, ಯುಪಿ, ಇತರ ರಾಜ್ಯಗಳಲ್ಲಿ SIR ವಿರುದ್ಧ ಹೊಸ ಅರ್ಜಿ: EC ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

SCROLL FOR NEXT