ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಐಶ್ವರ್ಯಾ ರಾಜೇಶ್ ಜೊತೆ ನಟಿಸಿರುವ 'ಮಫ್ತಿ ಪೊಲೀಸ್' ಚಿತ್ರದ ಮೂಲಕ ಮತ್ತೆ ಬಿಗ್ ಸ್ಕ್ರೀನ್ ಗೆ ಮರಳಲು ಸಜ್ಜಾಗಿದ್ದಾರೆ. ದಿನೇಶ್ ಲೆಚ್ಚುಮನನ್ ಚೊಚ್ಚಲ ನಿರ್ದೇಶನದ ಮತ್ತು ಜಿ.ಎಸ್. ಆರ್ಟ್ಸ್ ಬ್ಯಾನರ್ ನಲ್ಲಿ ಜಿ. ಅರುಲ್ ಕುಮಾರ್ ನಿರ್ಮಿಸಿರುವ ಈ ಚಿತ್ರವು ನವೆಂಬರ್ 21 ರಂದು ವಿಶ್ವಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದೆ.
ರಿಲೀಸ್ ಡೇಟ್ ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲಿ ಅರ್ಜುನ್ ಕೋಪದಲ್ಲಿರುವಂತೆ ಕಾಣಿಸುತ್ತದೆ. ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಹಿಂದೆಯೇ ಬಿಡುಗಡೆಯಾದ ಟೀಸರ್ ಆಕರ್ಷಕ ದೃಶ್ಯಗಳು ಮತ್ತು ಭಾವನಾತ್ಮಕ ಅಂಶಗಳಿಂದ ಜನರಲ್ಲಿ ಸಿನಿಮಾ ಬಗ್ಗೆ ಭರವಸೆ ನೀಡಿತ್ತು. ಅರ್ಜುನ್ ಅವರ ಕಮ್ ಬ್ಯಾಂಕ್ ಮತ್ತು ಐಶ್ವರ್ಯಾ ರಾಜೇಶ್ ಅವರ ಪರಿಣಾಮಕಾರಿ ಅಭಿನಯ ಪ್ರಮುಖ ಹೈಲೈಟ್‌ಗಳಾಗುವ ನಿರೀಕ್ಷೆಯಿದೆ.
ಈ ಚಿತ್ರದಲ್ಲಿ ಅಭಿರಾಮಿ (ಬಿಗ್ ಬಾಸ್ ಖ್ಯಾತಿ) ರಾಮ್‌ಕುಮಾರ್, ಜಿ.ಕೆ. ರೆಡ್ಡಿ ಮತ್ತಿತರರು ನಟಿಸಿದ್ದಾರೆ. ಶರವಣನ್ ಅಭಿಮನ್ಯು ಛಾಯಾಗ್ರಹಣ ಒದಗಿಸಿದ್ದು, ಆಶಿವಗನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಲಾರೆನ್ಸ್ ಕಿಶೋರ್ ಅವರ ಸಂಕಲನವಿದೆ. 'ಮಫ್ತಿ ಪೊಲೀಸ್' ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.