ಹರೀಶ್ ರಾಯ್ 
ಸಿನಿಮಾ ಸುದ್ದಿ

ಕೆಜಿಎಫ್‌ 'ಚಾಚಾ' ಖ್ಯಾತಿಯ ಹರೀಶ್ ರಾಯ್ ನಿಧನ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ

ಹರೀಶ್ ರಾಯ್ ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹರೀಶ್ ರಾಯ್ ಚಿಕಿತ್ಸೆಗೆ ಕೆಜಿಎಫ್ ಸಿನಿಮಾ ಹೀರೋ ಯಶ್ ಸೇರಿದಂತೆ ಅನೇಕರು ಆರ್ಥಿಕ ಸಹಾಯ ಹಸ್ತ ಚಾಚಿದ್ದರು.

ಬೆಂಗಳೂರು: ಕೆಜಿಎಫ್ ಖ್ಯಾತಿಯ ಹಿರಿಯ ನಟ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್‌ನಿಂದಾಗಿ ನಿಧನರಾಗಿದ್ದಾರೆ. 90ರ ದಶಕದಿಂದಲೂ ಸಕ್ರಿಯರಾಗಿದ್ದ ಅವರು, ಓಂ, ಕೆಜಿಎಫ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಖಳನಟನಾಗಿ ನಟಿಸಿದ್ದರು.

ಹರೀಶ್ ರಾಯ್ ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹರೀಶ್ ರಾಯ್ ಚಿಕಿತ್ಸೆಗೆ ಕೆಜಿಎಫ್ ಸಿನಿಮಾ ಹೀರೋ ಯಶ್ ಸೇರಿದಂತೆ ಅನೇಕರು ಆರ್ಥಿಕ ಸಹಾಯ ಹಸ್ತ ಚಾಚಿದ್ದರು. ಕ್ಯಾನ್ಸರ್ ಮಹಾಮಾರಿಯಿಂದ ಹರೀಶ್ ರಾಯ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಹರೀಶ್ ರಾಯ್ ವಿಧಿವಶರಾಗಿದ್ದಾರೆ.

90 ರ ದಶಕದಲ್ಲಿ ಹಲವು ಸಿನಿಮಾಗಳಲ್ಲಿ ಖಳ ನಾಯಕನ ಪಾತ್ರದಲ್ಲಿ ಹರೀಶ್ ರಾಯ್ ನಟಿಸಿದ್ದರು. ರಾಜ್ ಬಹದ್ದೂರ್, ನನ್ನ ಕನಸಿನ ಹೂವೆ,ಮೀಂದುಮ್ ಒರು ಕಾದಲ್ ಕಧೈ, ಜೋಡಿ ಹಕ್ಕಿ, ತಾಯವ್ವ, ಅಂಡರ್​ ವರ್ಲ್ಡ್, ನಲ್ಲ, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ,ಸೇರಿದಂತೆ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ಹರೀಶ್ ರಾಯ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ಸೀತಾಪುರದಲ್ಲಿ ವಿಚಿತ್ರ ಪ್ರಕರಣ: ಹಗಲು ಪ್ರೇಮಿ, ರಾತ್ರಿ ಗಂಡ ಬೇಕಂತೆ! ಇಬ್ಬರ ಜತೆ ಸಂಸಾರ ನಡೆಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ! Video

‘ಏನೇನ್ ಮಾಡ್ತಾರೋ ಗೊತ್ತಿಲ್ಲ’: Donald Trump ‘ಅನಿರೀಕ್ಷಿತ ವರ್ತನೆ’ ಬಗ್ಗೆ ಎಚ್ಚರಿಕೆ: ಮೋದಿ ಭೇಟಿ ಬಳಿಕ ಜಂಟಿ ಸುದ್ದಿಗೋಷ್ಠಿಗೆ ಭಾರತ ಹಿಂದೇಟು!

ಪ್ರತಿಪಕ್ಷಗಳ ಪ್ರತಿಭಟನೆ, ಗದ್ದಲದ ನಡುವೆ ಯಾವುದೇ ಚರ್ಚೆಯಿಲ್ಲದೇ ವಿಧಾನ ಪರಿಷತ್ತಿನಲ್ಲಿ ಎರಡು ವಿಧೇಯಕಗಳು ಪಾಸ್

Biggboss Kannada ಅಗ್ನಿಪರೀಕ್ಷೆ: ಗೆಟ್ ಔಟ್, ಇದೆಲ್ಲಾ ಬೇಡ ಬ್ರೋ; ವಿನಯ್ ಗೌಡಗೆ ಸ್ಪರ್ಧಿ ತಿರುಗೇಟು, Video ವೈರಲ್!