‘ದಿ ಗರ್ಲ್ ಫ್ರೆಂಡ್’ (The Girlfriend) ಸಿನಿಮಾ ಸಕ್ಸಸ್ ಕಾರ್ಯಕ್ರಮ ನಿನ್ನೆ ಹೈದರಾಬಾದ್ ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ವಿಜಯ್ ದೇವರಕೊಂಡ, ರಶ್ಮಿಕಾ ಕೈಗೆ ಮುತ್ತು ಕೊಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.
ಕಳೆದ ಹಲವು ದಿನಗಳಿಂದ ಈ ಜೋಡಿಯ ವಿವಾಹದ ಸುದ್ದಿ ಹಬ್ಬಿದೆ. ದೇವರಕೊಂಡ ಸಾರ್ವಜನಿಕವಾಗಿ ರಶ್ಮಿಕಾರ ಕೈಗೆ ಮುತ್ತಿಟ್ಟರು. ಈ ದೃಶ್ಯವನ್ನು ನೋಡಿದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸಭಾಂಗಣದಲ್ಲಿ ನಗೆಗಡಲಲ್ಲಿ ತೇಲಾಡಿದರು. ಆ ಸಮಯದಲ್ಲಿ, ರಶ್ಮಿಕಾ ನಾಚಿ ನೀರಾದರು.
ಕೊನೆಗೂ ಸಾರ್ವಜನಿಕವಾಗಿ ಒಪ್ಪಿಕೊಂಡರಲ್ಲಾ ಎಂದು ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇತ್ತೀಚೆಗಷ್ಟೇ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಜೋಡಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.