ಮ್ಯಾಂಗೋ ಪಚ್ಚ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಬಿಡುಗಡೆಗೆ ಸಿದ್ಧ; ಸಂಕ್ರಾಂತಿಯಂದು ತೆರೆಗೆ!

ಚಿತ್ರವು ಈಗಾಗಲೇ ತನ್ನ ಆಡಿಯೋ ಹಕ್ಕುಗಳನ್ನು ಸರೆಗಮ ಮ್ಯೂಸಿಕ್ ಲೇಬಲ್‌ಗೆ ₹1.2 ಕೋಟಿಗೆ ಮಾರಾಟ ಮಾಡುವ ಮೂಲಕ ಗಮನ ಸೆಳೆದಿದೆ.

ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಚೊಚ್ಚಲ ಚಿತ್ರ 'ಮ್ಯಾಂಗೋ ಪಚ್ಚ' ಬಿಡುಗಡೆಗೆ ಸಿದ್ಧವಾಗಿದ್ದು, ಜನವರಿ 15ರ ಸಂಕ್ರಾಂತಿ ಹಬ್ಬದಂದು ರಾಜ್ಯದಾದ್ಯಂತ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಚಿತ್ರದ ಟೀಸರ್ ಈಗಾಗಲೇ ವೀಕ್ಷಕರಲ್ಲಿ ಆಸಕ್ತಿಯನ್ನು ಹುಟ್ಟುಹಾಕಿದೆ. ಪ್ರಸಿದ್ಧ ನಿರ್ಮಾಪಕ ಮತ್ತು ವಿತರಕರಾದ ಸಂಜೀವ್ ಮತ್ತು ಕಿಚ್ಚ ಸುದೀಪ್ ನಂತರ, ಸಂಚಿತ್ ಸ್ಯಾಂಡಲ್‌ವುಡ್‌ನಲ್ಲಿ ನಟನಾಗಿ ತಮ್ಮ ಮೊದಲ ಹೆಜ್ಜೆಗಳನ್ನು ಇಡಲು ಸಜ್ಜಾಗಿದ್ದಾರೆ.

ಕುತೂಹಲಕಾರಿಯಾಗಿ, ಇತ್ತೀಚಿನ ವರ್ಷಗಳಲ್ಲಿ, ಸಂಕ್ರಾಂತಿ ಹಬ್ಬದಂದು ಇತರ ಭಾಷೆಗಳ ದೊಡ್ಡ ಬಜೆಟ್ ಚಿತ್ರಗಳು ಹೆಚ್ಚಾಗಿ ಬಿಡುಗಡೆಯಾಗುತ್ತವೆ. ಇದರಿಂದಾಗಿ ಸ್ಥಳೀಯ ಸಿನಿಮಾಗಳಿಗೆ ಸೀಮಿತ ಸ್ಥಳಾವಕಾಶವಿದೆ. 'ಮ್ಯಾಂಗೋ ಪಚ್ಚ' ಇದೀಗ ಸಂಕ್ರಾಂತಿಯಂದೇ ತೆರೆಕಾಣಲಿದ್ದು, ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಚಿತ್ರವು ಈಗಾಗಲೇ ತನ್ನ ಆಡಿಯೋ ಹಕ್ಕುಗಳನ್ನು ಸರೆಗಮ ಮ್ಯೂಸಿಕ್ ಲೇಬಲ್‌ಗೆ ₹1.2 ಕೋಟಿಗೆ ಮಾರಾಟ ಮಾಡುವ ಮೂಲಕ ಗಮನ ಸೆಳೆದಿದೆ.

ವಿವೇಕ್ ನಿರ್ದೇಶನದ ಮಾಂಗೋ ಪಚ್ಚ ಚಿತ್ರಕ್ಕೆ ಸುಪ್ರಿಯಾನ್ವಿ ಸ್ಟುಡಿಯೋಸ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಬೆಂಬಲ ನೀಡಿವೆ. ಮೈಸೂರಿನಲ್ಲಿ 2001 ರಿಂದ 2011 ರವರೆಗಿನ ಘಟನೆಗಳನ್ನು ಒಳಗೊಂಡಿರುವ ಕ್ರೈಮ್ ಥ್ರಿಲ್ಲರ್ ಇದಾಗಿದೆ. ನಗರದಲ್ಲಿಯೇ ಹೆಚ್ಚಾಗಿ ಚಿತ್ರೀಕರಿಸಲಾಗಿದ್ದು, ಮೈಸೂರಿನ ನೈಜ ಸುವಾಸನೆಯನ್ನು ಸೆರೆಹಿಡಿಯುತ್ತದೆ.

ಸಂಚಿತ್ ಅವರಿಗೆ ಜೋಡಿಯಾಗಿ ಕರಾವಳಿ ಬೆಡಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಇರದೊಂದಿಗೆ ಮಯೂರ್ ಪಟೇಲ್, ಭಾವನಾ, ಹಂಸಾ, ಹರಿಣಿ ಶ್ರೀಕಾಂತ್, ಜೈ ಗೋಪಿನಾಥ್ ಮತ್ತು ಪ್ರಶಾಂತ್ ಹಿರೇಮಠ್ ಸೇರಿದಂತೆ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಶೇಖರ್ ಚಂದ್ರ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ಸಂಯೋಜನೆ, ರವಿವರ್ಮ ಮತ್ತು ಸತೀಶ್ ಅವರು ಆ್ಯಕ್ಷನ್ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಇ ಹರ್ಷ ಅವರ ಕೊರಿಯೋಗ್ರಫಿ ಚಿತ್ರಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದೇಶ ಹಿಂಸಾಚಾರ: ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ: ICT ತೀರ್ಪು

INDI ಮೈತ್ರಿಕೂಟದಲ್ಲಿ ಭಾರಿ ಭಿನ್ನಮತ: ಸಾಕಪ್ಪಾ ಸಾಕು ಕಾಂಗ್ರೆಸ್, ರಾಹುಲ್ ಸಹವಾಸ; ಅಖಿಲೇಶ್ ನೇತೃತ್ವ ವಹಿಸಲಿ!: ಹೆಚ್ಚಾದ ಒತ್ತಡ

Delhi Blast: 'ವೈಟ್ ಕಾಲರ್' ಉಗ್ರ ಜಾಲ: ಹರಿಯಾಣದ ವೈದ್ಯೆ ಪ್ರಿಯಾಂಕಾ ಶರ್ಮಾ ವಿಚಾರಣೆ, ಯಾರು ಈಕೆ?

'IPL ನಲ್ಲಿ ನಾಯಕತ್ವದ ನಿರಂತರ ಪ್ರಶ್ನೆಯಿಂದಾಗಿ ನಾನು ಸ್ಪೆಷಲಿಸ್ಟ್ ಬ್ಯಾಟರ್ ಆದೆ': ಗೋಯೆಂಕಾ ಪ್ರಕರಣದ ಕುರಿತು ಕೊನೆಗೂ ಮೌನ ಮುರಿದ KL Rahul

6 ವರ್ಷಗಳ ನಂತರ ಭಾರತ - ಚೀನಾ ನಡುವೆ ಏರ್ ಇಂಡಿಯಾ ವಿಮಾನ ಸೇವೆ ಪುನರಾರಂಭ

SCROLL FOR NEXT