ನಾಯಿ ಇದೆ ಎಚ್ಚರಿಕೆ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಕಾಳಿ ಗೌಡ ನಿರ್ದೇಶನದ 'ನಾಯಿ ಇದೆ ಎಚ್ಚರಿಕೆ' ಚಿತ್ರ ಬಿಡುಗಡೆ ದಿನಾಂಕ ಘೋಷಣೆ

ಲಾಫಿಂಗ್ ಪೀಕಾಕ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಾವಣ್ಯ ಗಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನೃತ್ಯ ಸಂಯೋಜನೆಯನ್ನು ಕಾಳಿ ಗೌಡ ನಿರ್ವಹಿಸಿದ್ದಾರೆ.

ಥ್ರಿಲ್ಲರ್, ಹಾರರ್ ಮತ್ತು ಭಾವನೆಗಳ ಸಮ್ಮಿಶ್ರಣವಾಗಿರುವ 'ನಾಯಿ ಇದೆ ಎಚ್ಚರಿಕೆ!' ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಲೀಲಾ ಮೋಹನ್ ನಟನಾಗಿ ಇದೀಗ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುತ್ತಿದ್ದಾರೆ. ಈ ಚಿತ್ರವು ಜೀವನ ಮತ್ತು ಸಾವನ್ನು ಮೀರಿದ ನಾಯಿಯ ನಿಷ್ಠೆಯ ಕುರಿತು ಪ್ರೇಕ್ಷಕರಿಗೆ ಸಸ್ಪೆನ್ಸ್, ಭಾವನಾತ್ಮಕ ಮತ್ತು ಅರ್ಥಪೂರ್ಣ ಕಥೆಯನ್ನು ತೆರೆಮೇಲೆ ತರುತ್ತದೆ.

ಡಾ. ಲೀಲಾ ಮೋಹನ್ ಅವರು ಲೀಲಾ ಎಂಬ ವೈದ್ಯನ ಪಾತ್ರವನ್ನು ನಿರ್ವಹಿಸುತ್ತಾರೆ. ಈ ಚಿತ್ರವು ನಾಯಿ ಕಡಿತದ ಮಾನಸಿಕ ಮತ್ತು ಭಾವನಾತ್ಮಕ ಪರಿಣಾಮಗಳ ಕುರಿತು ಹೇಳುತ್ತದೆ. ಮಾನವರು ಮತ್ತು ಪ್ರಾಣಿಗಳ ನಡುವಿನ ಆಳವಾದ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವ ಕಾಳಿ ಗೌಡ ಅವರಿಗೆ ಇದು ಎರಡನೇ ಚಿತ್ರವಾಗಿದೆ.

ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಮಂಗಳೂರು ದಿನೇಶ್, ಪ್ರಭಿಕ್ ಮೊಗವೀರ್, ಬಾಲ ರಾಜವಾಡಿ, ದಿವ್ಯಾ, ಮಾನಸ, ಚಂದನ, ಕಾಮಿಡಿ ಜಗ್ಗಪ್ಪ, ಅನಿರುದ್ಧ್ ಮಹೇಶ್, ನಾಗೇಂದ್ರ ಅರಸ್, ಯುವ, ಶ್ರೀನಿ, ಸುನಿಲ್ ಮತ್ತು ಸ್ವತಃ ನಿರ್ದೇಶಕರು ಸೇರಿದಂತೆ ಇತರರು ನಟಿಸಿದ್ದಾರೆ.

ಲಾಫಿಂಗ್ ಪೀಕಾಕ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಾವಣ್ಯ ಗಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನೃತ್ಯ ಸಂಯೋಜನೆಯನ್ನು ಕಾಳಿ ಗೌಡ ನಿರ್ವಹಿಸಿದ್ದಾರೆ. ಎಜೆ ಕುಮಾರ್ ಛಾಯಾಗ್ರಹಣ ಮಾಡಿದರೆ, ಕಿಂಗ್ ಪ್ರೇಮ್ ಸಂಕಲನವನ್ನು ನಿರ್ವಹಿಸಿದ್ದಾರೆ.

ಎಲ್ಲ ಸಿದ್ಧತೆಗಳು ಪೂರ್ಣಗೊಂಡ ನಂತರ, ನಾಯಿ ಇದೆ ಎಚ್ಚರಿಕೆ ನವೆಂಬರ್ 28 ರಂದು ಕರ್ನಾಟಕದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ, ಭಾರತ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡಿವೆ, ಪರಸ್ಪರ ಸುಂಕ ಕಡಿತ: ಟ್ರಂಪ್ ಘೋಷಣೆ

"ಕಾದು ನೋಡಿ....": ಟ್ರಂಪ್ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದಾರೆ- ಕುತೂಹಲ ಮೂಡಿಸಿದ ಅಮೆರಿಕ ರಾಯಭಾರಿ ಹೇಳಿಕೆ

ಕೋವಿಡ್ ವೇಳೆ ಆಕ್ಸಿಜನ್ ಇಲ್ಲದೆ ಜನ ಪ್ರಾಣ ಬಿಟ್ಟಾಗ ಸಂವೇದನೆಯನ್ನೂ ICU ನಲ್ಲಿಟ್ಟಿದ್ರಾ? ಬಿಜೆಪಿಗೆ ಸಿದ್ದರಾಮಯ್ಯ ತರಾಟೆ!

ಟ್ರಂಪ್ ಕಣ್ಣು ಕುಕ್ಕಿದ ಇಂಡಿಯಾ ಗೇಟ್; ಅದಕ್ಕಿಂತಲೂ ಶ್ರೇಷ್ಠವಾದುದ್ದನ್ನು ನಿರ್ಮಿಸುತ್ತೇವೆ: ಅಧ್ಯಕ್ಷರ ಘೋಷಣೆ

ಸದನದಲ್ಲಿ 'CM ಕುರ್ಚಿ ಕಿತ್ತಾಟ' ಪ್ರತಿಧ್ವನಿ: ಸಿದ್ದರಾಮಯ್ಯ ಸೇರಿ 139 ಶಾಸಕರೂ ನನ್ನ ಬಲ ಎಂದ DCM ಡಿ.ಕೆ ಶಿವಕುಮಾರ್!

SCROLL FOR NEXT