ನಟ ಪ್ರಜ್ವಲ್ ದೇವರಾಜ್ ನಟಿಸಿರುವ ಬಹುನಿರೀಕ್ಷಿತ ಕರಾವಳಿ ಚಿತ್ರದಲ್ಲಿ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಕೂಡ ಮಹಾವೀರ ಎಂಬ ಪಾತ್ರದಲ್ಲಿ ನಟಿಸಿದ್ದು, ಇದೀಗ ಚಿತ್ರತಂಡ ಸುಶ್ಮಿತಾ ಭಟ್ ಅವರನ್ನು ಪ್ರಮುಖ ಪಾತ್ರಕ್ಕಾಗಿ ಕರೆತಂದಿದೆ. ಇದು ಕನ್ನಡ ಚಿತ್ರರಂಗದಲ್ಲಿ ಅವರ ಮೂರನೇ ಚಿತ್ರವಾಗಿದೆ.
ಸುಶ್ಮಿತಾ, ಈ ಚಿತ್ರದಲ್ಲಿ ಮಂಗಳೂರು ಮೂಲದ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಚಿತ್ರತಂಡ ಇದೀಗ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.
ಈ ಚಿತ್ರವನ್ನು ಒಪ್ಪಿಕೊಳ್ಳಲು ರಾಜ್ ಬಿ ಶೆಟ್ಟಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಪ್ರಮುಖ ಕಾರಣ ಎನ್ನುವ ಸುಶ್ಮಿತಾ, 'ನಾನು ಕಲಿಯಲು ಬಹಳಷ್ಟು ಇದೆ ಎಂದು ನನಗೆ ಅನಿಸಿತು. ನನ್ನ ಚಿತ್ರೀಕರಣದ ದಿನಗಳು ಹೆಚ್ಚು ಅಲ್ಲದಿದ್ದರೂ, ಅನುಭವ ಅರ್ಥಪೂರ್ಣವಾಗಿತ್ತು. ರಾಜ್ ಸೆಟ್‌ಗೆ ಬಲವಾದ ಗಮನ ಮತ್ತು ಸ್ಥಿರ ಶಕ್ತಿಯನ್ನು ತರುತ್ತಾರೆ. ಇದು ಕೆಲಸದ ವಾತಾವರಣವನ್ನು ಆಕರ್ಷಕ ಮತ್ತು ಆರಾಮದಾಯಕವಾಗಿಸುತ್ತದೆ' ಎಂದು ಅವರು ಹೇಳುತ್ತಾರೆ.
ಕರಾವಳಿ ಚಿತ್ರದಲ್ಲಿ ಸಂಪದಾ, ಮಿತ್ರ, ರಮೇಶ್ ಇಂದಿರಾ ಮತ್ತು ಶ್ರೀಧರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರವನ್ನು ಗುರುದತ್ತ ಗಾಣಿಗ ನಿರ್ದೇಶಿಸಿದ್ದು, ಗಾಣಿಗ ಫಿಲ್ಮ್ಸ್ ಮತ್ತು ವಿಕೆ ಫಿಲ್ಮ್ ಅಸೋಸಿಯೇಷನ್ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವ ಕರಾವಳಿ ಚಿತ್ರವು ಮಾನವರು ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಸುತ್ತ ಸುತ್ತುತ್ತದೆ. ಕರಾವಳಿ ಮತ್ತು ಒಳನಾಡಿನ ಪ್ರದೇಶಗಳ ನೈಜ ಘಟನೆಗಳನ್ನು ಆಧರಿಸಿದ ವಿಷಯವಾಗಿದೆ.
ಚಿತ್ರಕ್ಕೆ ಸಚಿನ್ ಬಸ್ರೂರ್ ಸಂಗೀತ ಸಂಯೋಜಿಸುತ್ತಿದ್ದಾರೆ ಮತ್ತು ಅಭಿಮನ್ಯು ಸದಾನಂದನ್ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ.