ಮೋಹನ್ ಲಾಲ್ ಅವರು ಆರಂಭದಿಂದಲೂ ನಿರೂಪಣೆ ಮಾಡುತ್ತಿರುವ ಬಿಗ್ ಬಾಸ್ ಮಲಯಾಳಂನ ಏಳನೇ ಸೀಸನ್, ಇತ್ತೀಚಿನ ಟೆಲಿವಿಷನ್ ವೀಕ್ಷಕರ ರೇಟಿಂಗ್‌ಗಳ (TVR) ಪ್ರಕಾರ, ಫ್ರಾಂಚೈಸಿಯ ಎಲ್ಲ ಭಾರತೀಯ ಆವೃತ್ತಿಗಳ ಬಿಗ್ ಬಾಸ್‌ಗಿಂತ ಮುಂಚೂಣಿಯಲ್ಲಿದೆ. ಈ ಕಾರ್ಯಕ್ರಮವು 12.1 ಟಿವಿಆರ್ ದಾಖಲಿಸಿದ್ದು, ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಆವೃತ್ತಿಗಳನ್ನು ಹಿಂದಿಕ್ಕಿದೆ.
ನಾಗಾರ್ಜುನ ನಿರೂಪಣೆಯ ಬಿಗ್ ಬಾಸ್ ತೆಲುಗು ಸೀಸನ್ 9 ಸದ್ಯ 11.1 ರೇಟಿಂಗ್ ಹೊಂದಿದೆ. ಕಿಚ್ಚ ಸುದೀಪ್ ಹೋಸ್ಟ್ ಮಾಡುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 12, ವಾರದ ದಿನಗಳಲ್ಲಿ 7.4 ಮತ್ತು ವಾರಾಂತ್ಯದಲ್ಲಿ 10.9 ರೇಟಿಂಗ್ ಹೊಂದಿದೆ. ಈಗ 9ನೇ ಸೀಸನ್‌ನಲ್ಲಿ ವಿಜಯ್ ಸೇತುಪತಿ ನೇತೃತ್ವದ ಬಿಗ್ ಬಾಸ್ ತಮಿಳು 5.61 ರೇಟಿಂಗ್ ಹೊಂದಿದೆ. ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಹಿಂದಿ ಸೀಸನ್ 19, ಸದ್ಯ ವಾರಾಂತ್ಯದಲ್ಲಿ 1.3 ರಿಂದ ಸ್ವಲ್ಪ ಏರಿಕೆಯ ನಂತರ 1.8 ರೇಟಿಂಗ್‌ನೊಂದಿಗೆ ಅತ್ಯಂತ ಕಡಿಮೆ ರೇಟಿಂಗ್ ಹೊಂದಿದೆ.
ಎಲ್ಲ ಭಾಷೆಗಳಲ್ಲಿ, ಬಿಗ್ ಬಾಸ್ ಮಲಯಾಳಂ ಅನ್ನು ಹೆಚ್ಚು ಜನ ವೀಕ್ಷಿಸಿದ್ದಾರೆ. ಸದ್ಯಕ್ಕೆ, ಮೋಹನ್ ಲಾಲ್ ನಿರೂಪಣೆ ಮಾಡಿರುವ ಮಲಯಾಳಂ ಆವೃತ್ತಿಯು ದೇಶದಲ್ಲಿ ಅತ್ಯಂತ ಬಲಿಷ್ಠ ಪ್ರದರ್ಶನ ನೀಡುವ ಕಾರ್ಯಕ್ರಮವಾಗಿದೆ.
ಮೋಹನ್ ಲಾಲ್ ಮಲಯಾಳಂನಲ್ಲಿ L2: ಎಂಪುರಾನ್ ಮತ್ತು ತುಡರುಮ್ ಚಿತ್ರಗಳೊಂದಿಗೆ ಸತತ ಯಶಸ್ಸನ್ನು ಕಂಡಿದ್ದಾರೆ. ಚೋಟಾ ಮುಂಬೈ ಮತ್ತು ರಾವಣಪ್ರಭು ಚಿತ್ರಗಳ ಮರುಬಿಡುಗಡೆಗಳು ಸಹ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಈ ವರ್ಷದ ಆರಂಭದಲ್ಲಿ, ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಮನ್ನಣೆಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ರೇಟಿಂಗ್‌ಗಳನ್ನು ಮೀರಿ ಬಿಗ್ ಬಾಸ್‌ನ ಮಲಯಾಳಂ ಆವೃತ್ತಿಯು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸೆಪ್ಟೆಂಬರ್‌ನಲ್ಲಿ, ಮನೆಯೊಳಗೆ ಬಹಿರಂಗವಾಗಿ ಸಲಿಂಗಕಾಮಿಗಳ ವಿರುದ್ಧ ನೀಡಿದ ಹೇಳಿಕೆಗಳ ಕುರಿತು ಮೋಹನ್ ಲಾಲ್ ವೈಲ್ಡ್‌ಕಾರ್ಡ್ ಸ್ಪರ್ಧಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದು ವೈರಲ್ ಆಗಿತ್ತು. ಮಲಯಾಳಂ ಆವೃತ್ತಿಯಲ್ಲಿ ಮೊದಲ ಬಹಿರಂಗ LGBTQ+ ದಂಪತಿಗಳಾದ ಅಧಿಲಾ ನಸರಿನ್ ಮತ್ತು ಫಾತಿಮಾ ನೂರಾ ಅವರನ್ನು ಬೆಂಬಲಿಸಿದ್ದರು. ಈ ದಂಪತಿ ಯಾರಿಗೂ ಯಾವುದೇ ಸಮರ್ಥನೆಯನ್ನು ನೀಡಬೇಕಾಗಿಲ್ಲ ಮತ್ತು ಅಂತಹ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದರು. ಇದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿತು ಮತ್ತು ನಿರೂಪಕರು ಈ ಬಗ್ಗೆ ಸ್ಪಷ್ಟವಾದ ಸಾರ್ವಜನಿಕ ನಿಲುವನ್ನು ತೆಗೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತವಾಗಿತ್ತು.