Puneeth Rajkumar Death Anniversary: ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾಗಿ ಇಂದಿಗೆ ನಾಲ್ಕು ವರ್ಷವಾಗಿದೆ. ತಮ್ಮ 47ನೇ ವಯಸ್ಸಿನಲ್ಲಿ ಅಕಾಲಿಕವಾಗಿ ಹಠಾತ್ ನಿಧನರಾದಾಗ ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿತ್ತು.
ಅಕ್ಟೋಬರ್ 29, 2021ರಂದು ಅವರು ಬೆಳಗ್ಗೆ 11 ಗಂಟೆ ಸುಮಾರಿಗೆ ನಿಧನ ಹೊಂದಿದರು.
ಬರ್ತ್ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಪುನೀತ್
ಪುನೀತ್ ಆಪ್ತ ಹಾಗೂ ಸಂಗೀತ ಸಂಯೋಜಕ ಗುರುಕಿರಣ್ ಅವರಿಗೆ ಅಕ್ಟೋಬರ್ 28 ಬರ್ತ್ಡೇ. ಈ ಕಾರಣಕ್ಕೆ ಪುನೀತ್ ಅವರನ್ನು ಪಾರ್ಟಿಗೆ ಆಹ್ವಾನ ಮಾಡಿದ್ದರು. ಪುನೀತ್ ಅವರು ಈ ಪಾರ್ಟಿಗೆ ಬಂದ ಸೆಲೆಬ್ರಟಿಗಳು ಹಾಗೂ ಆಪ್ತರ ಜೊತೆ ಮಾತನಾಡಿ ಅಲ್ಲಿಂದ ಮನೆಗೆ ಬಂದಿದ್ದರು.
ಅಂದು ಏನಾಗಿತ್ತು?
2021ರ ಅಕ್ಟೋಬರ್ 29ರಂದು ಶಿವರಾಜ್ಕುಮಾರ್ ನಟನೆಯ, ಹರ್ಷ ನಿರ್ದೇಶನದ ‘ಭಜರಂಗಿ 2’ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾಗೆ ಮುಂಜಾನೆ 5 ಗಂಟೆಯಿಂದಲೇ ಶೋಗಳನ್ನು ಆಯೋಜನೆ ಮಾಡಲಾಯಿತು. ಈ ಚಿತ್ರಕ್ಕೆ ಪುನೀತ್ ರಾಜ್ಕುಮಾರ್ ಅವರು ಟ್ವಿಟರ್ ಮೂಲಕ ವಿಶ್ ಮಾಡಿದರು.
10 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ ಉಂಟಾಗಿತ್ತು. ಅವರನ್ನು ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಅವರು ನಿಧನ ಹೊಂದಿಯಾಗಿತ್ತು. 12 ಗಂಟೆ ವೇಳೆಗೆ ಅವರು ನಿಧನ ಹೊಂದಿದ್ದು ಖಚಿತವಾಗಿತ್ತು. ಆದರೆ, ಸರ್ಕಾರದವರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡ ಬಳಿಕವೇ ಈ ಸುದ್ದಿಯನ್ನು ಪ್ರಕಟಿಸಿದರು. ಅವರ ನಿಧನ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿತ್ತು.
ಪಿಆರ್ಕೆ ಜವಾಬ್ದಾರಿ
ಪುನೀತ್ ನಿಧನದ ಬಳಿಕ ಪಿಆರ್ಕೆ ಜವಾಬ್ದಾರಿ ಅಶ್ವಿನಿ ಅವರ ಹೆಗಲು ಏರಿದೆ. ಇದನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಪುನೀತ್ ನಿಧನದ ಬಳಿಕ ಪಿಆರ್ಕೆಯಿಂದ ‘ಒನ್ ಕಟ್ ಟೂ ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’, ‘ಗಂಧದಗುಡಿ’, ‘ಆಚಾರ್ ಆ್ಯಂಡ್ ಕೋ’, ‘ಒ2’ ಹಾಗೂ ‘ಎಕ್ಕ’ ಸಿನಿಮಾಗಳು ಬಂದಿವೆ. ಈ ಪೈಕಿ ಕೆಲವು ಕಥೆಗಳನ್ನು ಪುನೀತ್ ಅವರೇ ಫೈನಲ್ ಮಾಡಿದ್ದರೆ, ಇನ್ನೂ ಕೆಲವು ಅಶ್ವಿನಿ ಅವರು ಮಾಡಿದ್ದಾರೆ.
ಇಂದು ಕುಟುಂಬಸ್ಥರಿಂದ ಪೂಜೆ, ಸ್ಮರಣೆ
ಪುನೀತ್ ಅವರ ಸಮಾಧಿ ಕಂಠೀರವ ಸ್ಟುಡಿಯೊ ಬಳಿ ಇಂದು ಅವರ ಕುಟುಂಬಸ್ಥರು, ಸಮೀಪದ ಬಂಧುಗಳು, ಅಭಿಮಾನಿಗಳು ಪೂಜೆ ಸಲ್ಲಿಸುತ್ತಿದ್ದಾರೆ.