ಎಸ್‌ಎಸ್ ಡೇವಿಡ್ 
ಸಿನಿಮಾ ಸುದ್ದಿ

ಕನ್ನಡ ಚಿತ್ರ ನಿರ್ದೇಶಕ, ಸಂಭಾಷಣೆಗಾರ ಎಸ್‌ಎಸ್ ಡೇವಿಡ್ ನಿಧನ; ನಟ ಸಾಯಿಕುಮಾರ್ ಸಂತಾಪ

ನಿರ್ದೇಶನ, ಚಿತ್ರಕಥೆ, ಸಂಭಾಷಣೆ ಮತ್ತು ವಿಶಿಷ್ಟ ಮ್ಯಾನರಿಸಂಗಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಡೇವಿಡ್, ಸಾಯಿಕುಮಾರ್ ನಟಿಸಿದ ಪ್ರಸಿದ್ಧ ಪೊಲೀಸ್ ಸ್ಟೋರಿ ಮತ್ತು ಅಗ್ನಿ ಐಪಿಎಸ್ ನಂತಹ ಚಿತ್ರಗಳಿಗೆ ಸಂಭಾಷಣೆಗಳನ್ನು ಬರೆದಿದ್ದಾರೆ.

ಬೆಂಗಳೂರು: ಕನ್ನಡದ ಖ್ಯಾತ ಬರಹಗಾರ-ನಿರ್ದೇಶಕ ಎಸ್ಎಸ್ ಡೇವಿಡ್ ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.

ಜೈ ಹಿಂದ್ (1998) ಮತ್ತು ಸುಪಾರಿ (2001) ಚಿತ್ರಗಳನ್ನು ನಿರ್ದೇಶಿಸಿದ್ದ ಡೇವಿಡ್, ಭಾನುವಾರ ಮೆಡಿಕಲ್ ಶಾಪ್‌ನಿಂದ ಮನೆಗೆ ಹಿಂತಿರುಗುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ರಾಜರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಂಜೆ 7.30ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ನಿರ್ದೇಶನದ ಹೊರತಾಗಿ, ಡೇವಿಡ್ ಅವರು ಪೊಲೀಸ್ ಸ್ಟೋರಿ (1996), ಅಗ್ನಿ ಐಪಿಎಸ್ (1997), ಧೈರ್ಯ (1997), ಸಿಂಹದ ಮರಿ (1997), ಹಾಯ್ ಬೆಂಗಳೂರು (1997), ಇಂಡಿಪೆಂಡೆನ್ಸ್‌ಡೆ (2000), ಮಂಡ್ಯ (2006), ತಿರುಪತಿ (2006) ಮತ್ತು ಪೊಲೀಸ್ ಸ್ಟೋರಿ 2 (2007) ಸೇರಿದಂತೆ ಹಲವಾರು ಕನ್ನಡ ಚಿತ್ರಗಳಿಗೆ ಚಿತ್ರಕಥೆಗಳನ್ನು ಬರೆದಿದ್ದಾರೆ.

ನಿರ್ದೇಶನ, ಚಿತ್ರಕಥೆ, ಸಂಭಾಷಣೆ ಮತ್ತು ವಿಶಿಷ್ಟ ಮ್ಯಾನರಿಸಂಗಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಡೇವಿಡ್, ಸಾಯಿಕುಮಾರ್ ನಟಿಸಿದ ಪ್ರಸಿದ್ಧ ಪೊಲೀಸ್ ಸ್ಟೋರಿ ಮತ್ತು ಅಗ್ನಿ ಐಪಿಎಸ್ ನಂತಹ ಚಿತ್ರಗಳಿಗೆ ಸಂಭಾಷಣೆಗಳನ್ನು ಬರೆದಿದ್ದಾರೆ.

ನಟ ಸಾಯಿ ಕುಮಾರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸಂತಾಪ ಸೂಚಿಸಿದ್ದಾರೆ. 'ತೀವ್ರವಾಗಿ ದುಃಖಿತನಾಗಿದ್ದೇನೆ. ನಿಮ್ಮ ಸಂಭಾಷಣೆಗಳ ಮೂಲಕ ನೀವು ಯಾವಾಗಲೂ ಜೀವಂತವಾಗಿರುತ್ತೀರಿ, ಡೇವಿಡ್. ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು... #RIP #SSDavid' ಎಂದು ಬರೆದಿದ್ದಾರೆ.

ಎಸ್‌ಎಸ್ ಡೇವಿಡ್ ಅವರ ನಿಧನಕ್ಕೆ ಹಲವಾರು ಕಲಾವಿದರು, ಸಾಹಸ ಕಲಾವಿದರು ಮತ್ತು ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Flood Relief: ಕರ್ನಾಟಕ, ಮಹಾರಾಷ್ಟ್ರಕ್ಕೆ ರೂ. 1,950 ಕೋಟಿ ಬಿಡುಗಡೆಗೆ ಕೇಂದ್ರದ ಅನುಮೋದನೆ!

ದೊಡ್ಡಬಳ್ಳಾಪುರ: "ಹೃದಯವಂತ ಆರ್.ಎಲ್.ಜಾಲಪ್ಪ ಜೀವನ‌ ಪಥ"; ಕೃತಿ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ!

ವಿಕೃತ ಮನಸ್ಥಿತಿ: ಪ್ರತಿಭಟನೆ ನಡೆಸುತ್ತಿದ್ದ ತನ್ನದೇ ಜನರ ಮೇಲೆ 'ಮಲ' ಸುರಿಸುವ AI ವಿಡಿಯೋ ಹರಿಬಿಟ್ಟ Donald Trump

ಮಂಗಳೂರು: Honeytrap ಯುವಕ ಆತ್ಮಹತ್ಯೆ; ಗೆಳತಿಯರು ಬಟ್ಟೆ ಬದಲಿಸುವ ವಿಡಿಯೋ ಸೆರೆಹಿಡಿದು ವೈರಲ್, ಯುವತಿ ಬಂಧನ!

"ನನಗೆ ಬೇಕಿರುವುದು ಅದೊಂದೆ...": ರಷ್ಯಾ-ಯುಕ್ರೇನ್ ಯುದ್ಧ ಕೊನೆಗೊಳಿಸಲು ಟ್ರಂಪ್ ಗೆ ಪುತಿನ್ ಷರತ್ತು; ಈಡೇರುತ್ತಾ 11 ವರ್ಷಗಳ ಗುರಿ?

SCROLL FOR NEXT