ಸೈಮಾ ಪ್ರಶಸ್ತಿ  
ಸಿನಿಮಾ ಸುದ್ದಿ

SIIMA ಪ್ರಶಸ್ತಿ ಪ್ರಕಟ: ಸುದೀಪ್ ಅತ್ಯುತ್ತಮ ನಟ, ಉಪೇಂದ್ರ ಅತ್ಯುತ್ತಮ ನಿರ್ದೇಶಕ; ಪ್ರಶಸ್ತಿ ವಿಜೇತರ ವಿವರ ಹೀಗಿದೆ...

ನಿನ್ನೆ ರಾತ್ರಿ ದುಬೈಯಲ್ಲಿ ನೆರವೇರಿದ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿದ್ದು, 2024ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ.

ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2025 (SIIMA 2025) ರಲ್ಲಿ ಮ್ಯಾಕ್ಸ್’ ಸಿನಿಮಾ ನಟನೆಗೆ ಕಿಚ್ಚ ಸುದೀಪ್ (Sudeep) ಅವರಿಗೆ ಅತ್ಯುತ್ತಮ ನಟ ಅವಾರ್ಡ್ ದೊರೆತಿದೆ. ಉಪೇಂದ್ರ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಸಿಕ್ಕಿದೆ.

ನಿನ್ನೆ ರಾತ್ರಿ ದುಬೈಯಲ್ಲಿ ನೆರವೇರಿದ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿದ್ದು, 2024ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಅವರು ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು.

ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಇನ್ನು, ‘ಯುಐ’ ನಿರ್ದೇಶನಕ್ಕೆ ಉಪೇಂದ್ರ ಅವರು ಅತ್ಯುತ್ತಮ ನಿರ್ದೇಶಕ ಅವಾರ್ಡ್ ಪಡೆದಿದ್ದಾರೆ. ‘02’ ನಟನೆಗೆ ಆಶಿಕಾ ರಂಗನಾಥ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ‘ಭೀಮ’ ಸಿನಿಮಾ ನಟನೆಗೆ ದುನಿಯಾ ವಿಜಯ್​ಗೆ ಅತ್ಯುತ್ತಮ ನಟ (ಕ್ರಿಟಿಕ್ಸ್) ಅವಾರ್ಡ್ ದೊರೆತಿದೆ. ‘ಕೃಷ್ಣಂ ಪ್ರಣಯ ಸಖಿ’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿದೆ.

ಕನ್ನಡಕ್ಕೆ ಬಂದ ಇತರ ಪ್ರಶಸ್ತಿಗಳು ಇಂತಿದೆ

ಅತ್ಯುತ್ತಮ ಸಂಗೀತ ಸಂಯೋಜನೆ: ಬಿ. ಅಜನೀಶ್ ಲೋಕನಾಥ್ (ಮ್ಯಾಕ್ಸ್)

ಅತ್ಯುತ್ತಮ ಹಾಸ್ಯನಟ: ಜಾಕ್ ಸಿಂಗಂ (ಭೀಮ)

ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ: ಸಂದೀಪ್ ಸುಂಕದ್ (ಶಾಖಾಹಾರಿ)

ಅತ್ಯುತ್ತಮ ಚೊಚ್ಚಲ ನಟ- ಸಮರ್ಜಿತ್ ಲಂಕೇಶ್ (ಗೌರಿ)

ಭರವಸೆ ಮೂಡಿಸಿದ ಹೊಸ ಪ್ರತಿಭೆ- ಸನ್ಯಾ ಅಯ್ಯರ್ (ಗೌರಿ)

ಅತ್ಯುತ್ತಮ ಚೊಚ್ಚಲ ನಟಿ – ಅಂಕಿತಾ ಅಮರ್ (ಇಬ್ಬನಿ ತಬ್ಬಿದಾ ಇಳೆಯಲಿ)

ಅತ್ಯುತ್ತಮ ಸಾಂಗ್ ಡಿಸೈನ್- ಇಮ್ರಾನ್ ಎಸ್ ಸರ್ಧಾರಿಯಾ

ಅತ್ಯುತ್ತಮ ಛಾಯಾಗ್ರಹಣ: ಶ್ರೀವತ್ಸನ್ ಸೆಲ್ವರಾಜನ್ (ಇಬ್ಬನಿ ತಬ್ಬಿದ ಇಳೆಯಲಿ)

ಅತ್ಯುತ್ತಮ ಹಿನ್ನೆಲೆ ಗಾಯಕಿ – ಐಶ್ವರ್ಯ ರಂಗರಾಜನ್

ಅತ್ಯುತ್ತಮ ಗಾಯಕ – ಜಸ್ಕರನ್

ಅತ್ಯುತ್ತಮ ಚಿತ್ರ ಸಾಹಿತಿ - ಡಾ. ವಿ. ನಾಗೇಂದ್ರ ಪ್ರಸಾದ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026, qualifier 1: ಟಾಸ್ ಗೆದ್ದ GT ಬೌಲಿಂಗ್ ಆಯ್ಕೆ, ಕುತೂಹಲಕ್ಕೆ ಬ್ರೇಕ್, ವೆಂಕಟೇಶ್ ಅಯ್ಯರ್ ಗೆ ಸ್ಟಿಕ್ ಆದ RCB!

Bengaluru Rains: ಗುಡುಗು, ಸಿಡಿಲು ಸಹಿತ ಭಾರೀ ಮಳೆ; ಹಳಿ ಮೇಲೆ ಮರ ಬಿದ್ದು, ಮೆಟ್ರೋ ಸಂಚಾರ ವ್ಯತ್ಯಯ!

ಫೈನಲ್ ಫೈಟ್: ಸಿದ್ದರಾಮಯ್ಯ ಮನವೊಲಿಕೆಗೆ ರಾಹುಲ್ ಗಾಂಧಿ ಯತ್ನ; ಯತೀಂದ್ರಗೆ DCM ಸ್ಥಾನ, ರಾಜ್ಯಸಭೆ ಆಫರ್?

ಪಟ್ಟಕ್ಕಾಗಿ ಫೈನಲ್ ಫೈಟ್: ಮೂರು ಷರತ್ತುಗಳನ್ನು ಹೈಕಮಾಂಡ್ ಮುಂದಿಟ್ಟ ಡಿಕೆಶಿ; CM ಹುದ್ದೆಗಾಗಿ ಬಿಗಿಪಟ್ಟು!

SCROLL FOR NEXT