ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ರಿಷಭ್ ಶೆಟ್ಟಿ 
ಸಿನಿಮಾ ಸುದ್ದಿ

ಬಿಡುಗಡೆಗೂ ಮುನ್ನವೇ ಕಾಂತಾರ: ಚಾಪ್ಟರ್ 1 ದಾಖಲೆ; 2,500ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪೇಯ್ಡ್ ಪ್ರೀಮಿಯರ್!

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರವನ್ನು ಭಾರತ ಮತ್ತು ವಿದೇಶಗಳಲ್ಲಿ ಬಹು ಭಾಷೆಗಳಲ್ಲಿ 2,500ಕ್ಕೂ ಹೆಚ್ಚು ಪರದೆಗಳಲ್ಲಿ ಪೇಯ್ಡ್ ಪ್ರೀಮಿಯರ್ ಮಾಡಲು ಯೋಜಿಸಲಾಗಿದೆ.

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ: ಚಾಪ್ಟರ್ 1 ಇದೀಗ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಅಧಿಕೃತವಾಗಿ ಬಿಡುಗಡೆಯಾಗಲಿದ್ದರೂ, ಅಕ್ಟೋಬರ್ 1 ರ ಸಂಜೆ ಪೇಯ್ಡ್ ಪ್ರೀಮಿಯರ್‌ಗಳೊಂದಿಗೆ ದಾಖಲೆಯ ಆರಂಭಿಕ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರವನ್ನು ಭಾರತ ಮತ್ತು ವಿದೇಶಗಳಲ್ಲಿ ಬಹು ಭಾಷೆಗಳಲ್ಲಿ 2,500ಕ್ಕೂ ಹೆಚ್ಚು ಪರದೆಗಳಲ್ಲಿ ಪೇಯ್ಡ್ ಪ್ರೀಮಿಯರ್ ಮಾಡಲು ಯೋಜಿಸಲಾಗಿದೆ. ಇದು ಕನ್ನಡ ಚಿತ್ರವೊಂದಕ್ಕೆ ಇದುವರೆಗಿನ ಅತಿದೊಡ್ಡ ಪ್ರೀಮಿಯರ್‌ಗಳಲ್ಲಿ ಒಂದಾಗಿದ್ದು, ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಬಂಗಾಳಿ ಮತ್ತು ಇಂಗ್ಲಿಷ್ ಸೇರಿದಂತೆ 7ಕ್ಕೂ ಹೆಚ್ಚು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ. ಈ ಕ್ರಮವು ಆರಂಭಿಕ ಸಂಚಲನವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ದೇಶೀಯ ಮಾರುಕಟ್ಟೆಗಳನ್ನು ಮೀರಿ, ಚೀನಾ ಹೊರತುಪಡಿಸಿ, ಪ್ರಪಂಚದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಕಾಂತಾರ ಚಿತ್ರ ತೆರೆಕಂಡ ಬಳಿಕ ಎಲ್ಲ ಕಡೆಯಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂತಾರ: ಚಾಪ್ಟರ್ 1 ಅನ್ನು ನಿರ್ಮಿಸಲಾಗಿದ್ದು, ರಿಷಬ್ ಶೆಟ್ಟಿ ಮತ್ತೊಮ್ಮೆ ಮುಂಚೂಣಿಯಲ್ಲಿ ಮುನ್ನಡೆಸುತ್ತಿದ್ದಾರೆ. ಕಾಂತಾರ ಚಿತ್ರವನ್ನು ಇದು ಮೀರಿಸುತ್ತದೆಯೇ ಎಂಬ ನಿರೀಕ್ಷೆಗಳು ಹೆಚ್ಚಾಗಿವೆ.

ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ, ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರ ಮತ್ತು ಡಿಜಿಟಲ್ ಹಕ್ಕುಗಳನ್ನು ಈಗಾಗಲೇ ಅಮೆಜಾನ್ ಪ್ರೈಮ್ ವಿಡಿಯೋ ₹125 ಕೋಟಿಗೆ ಪಡೆದುಕೊಂಡಿದೆ. ಈ ಮೂಲಕ ಇದು ಕನ್ನಡದ ಅತ್ಯಂತ ಮೌಲ್ಯಯುತ ಚಿತ್ರಗಳಲ್ಲಿ ಒಂದು ಎಂಬ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಭಾರತ ಮತ್ತು ವಿದೇಶಗಳಾದ್ಯಂತ ದೊಡ್ಡ ನಿರ್ಮಾಣ ಸಂಸ್ಥೆಗಳು ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿವೆ.

ಇದರ ಹೊರತಾಗಿಯೂ, ಅಕ್ಟೋಬರ್ 1 ರಂದು ನಡೆಯುವ ಪ್ರೀಮಿಯರ್‌ಗಳು ಕೂಡ ಹೆಗ್ಗುರುತಾಗುವ ಸಾಧ್ಯತೆಯಿದೆ. ಪೇಯ್ಡ್ ಪ್ರದರ್ಶನಗಳು ಸಾಮಾನ್ಯವಾಗಿ ಭಾರತದಾದ್ಯಂತ ಪ್ರದರ್ಶನಗೊಳ್ಳುವ ದೊಡ್ಡ ಬ್ಲಾಕ್‌ಬಸ್ಟರ್ ಚಲನಚಿತ್ರಗಳಿಗೆ ಮಾತ್ರ ನಡೆಯುತ್ತವೆ. ಆದರೆ ಈ ಬಾರಿ, ಬಿಡುಗಡೆಗೂ ಮೊದಲೇ, ಅನೇಕ ಶೋಗಳು ಈಗಾಗಲೇ ಮಾರಾಟವಾಗುತ್ತಿವೆ. ಆದ್ದರಿಂದ, ಟಿಕೆಟ್‌ಗಳ ಬೇಡಿಕೆ ಹಿಂದೆಂದಿಗಿಂತಲೂ ಹೆಚ್ಚಾಗಿರುತ್ತದೆ- ಬಹುಶಃ ದಾಖಲೆಗಳನ್ನು ಮುರಿಯಬಹುದು ಎಂದು ತಜ್ಞರು ಭಾವಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort Blast: ಮೃತರ ಸಂಖ್ಯೆ 12ಕ್ಕೆ ಏರಿಕೆ; ಕಾರು ಸ್ಪೋಟಿಸಿದ್ದು ಉಮರ್ ನಬಿ​, DNA ಪರೀಕ್ಷೆಯಲ್ಲಿ ಬಹಿರಂಗ..!

Delhi Red Fort Blast: ಒಂದೇ ಕಡೆ ಅಲ್ಲ, 26/11 ಮುಂಬೈ ಮಾದರಿ ಸರಣಿ ದಾಳಿಗೆ ಸಂಚು ರೂಪಿಸಿದ್ದ ರಕ್ಕಸರು, ವಿಫಲಗೊಂಡಿದ್ದು ಹೇಗೆ?

ಗೃಹ ಸಚಿವ ಪರಮೇಶ್ವರ್ ಬಗ್ಗೆ ನಿಂದನೆ: ಚಿಕ್ಕಮಗಳೂರಿನಲ್ಲಿ ಬಿಜೆಪಿ ಯುವ ಮುಖಂಡ ಬಂಧನ, ಅಷ್ಟಕ್ಕೂ ಸಂತೋಷ್ ಕೊಟ್ಯಾನ್ ಹೇಳಿದ್ದೇನು?

ನರೇಗಾ ಗುತ್ತಿಗೆ ಕಾರ್ಮಿಕರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿ ಆಗಿಲ್ಲ: ಅಧಿಕಾರಿಗಳು ಹೇಳುವುದೇನು?

ಮೈಸೂರು ನಗರಕ್ಕೆ ಮತ್ತೊಂದು ಹೆಮ್ಮೆ: ಭಾರತದ ಮೊದಲ ರೇಷ್ಮೆ ಮ್ಯೂಸಿಯಂ ಸ್ಥಾಪನೆ

SCROLL FOR NEXT