ಬಿಗ್ ಬಾಸ್ ಮಾಜಿ ಸ್ಪರ್ಧಿ ರಂಜಿತ್ (Bigg Boss Ranjith) ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಜಗಳ ನಡೆದಿದೆ. ರಂಜಿತ್ ಪತ್ನಿ ಹಾಗೂ ಸಹೋದರಿ ನಡುವೆ ಮಾತಿನ ಚಕಮಕಿ ನಡೆದಿದ್ದು ಮೊಬೈಲ್ನಲ್ಲಿ ವಿಡಿಯೋ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗಳು ವೈರಲ್ ಆಗಿವೆ. ಮಾನ ಮರ್ಯಾದೆ ಇಲ್ಲದೇ ದ್ರಾಕ್ಷಿ, ಗೋಡಂಬಿ ತಿಂತೀಯಾ ಎಂದು ರಂಜಿತ್ ಪತ್ನಿ ಮತ್ತು ರಂಜಿತ್ ಅಕ್ಕ ಬೈಯ್ದುಕೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಚಪ್ಪರ್, ಭಿಕಾರಿ ಎಂದೆಲ್ಲ ಮಾತುಗಳು ಆಡಿದ್ದಾರೆ. ಮಾತಿನ ಮೂಲಕ ಬಗೆಹರಿಸಿಕೊಳ್ಳಬೇಕಾಗಿದ್ದ ವಿಷಯ ಈಗ ಬೀದಿಗೆ ಬಂದಿದೆ. ರಂಜಿತ್ ಕುಟುಂಬದ ಸದಸ್ಯರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.