ರಿಷಬ್ ಶೆಟ್ಟಿ, ಜೂನಿಯರ್ ಎನ್ ಟಿಆರ್  
ಸಿನಿಮಾ ಸುದ್ದಿ

Jr NTR ನನಗೆ ಇನ್ನೊಬ್ಬ ತಾಯಿಯಿಂದ ಬಂದ ಸಹೋದರ, ಕನ್ನಡ ನನ್ನ ಹೃದಯದ ಭಾಷೆ: Rishab Shetty

ಈ ಚಿತ್ರದ ಪ್ರೀ ರೀಲೀಸ್ ಈವೆಂಟ್ ಹೈದರಾಬಾದ್‌ನಲ್ಲಿ ನಿನ್ನೆ ನೆರವೇರಿದ್ದು ಸಮಾರಂಭದಲ್ಲಿ ಎನ್​ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಿ ಬಾಲ್ಯದಿನಗಳನ್ನು ನೆನಪಿಸಿಕೊಂಡರು.

ದಸರಾ ಹಬ್ಬದ ಸಮಯದಲ್ಲಿ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ರಿಲೀಸ್ ಆಗುತ್ತಿದೆ. ರಿಷಬ್ ಶೆಟ್ಟಿ ಅವರೇ ನಿರ್ದೇಶಿಸುತ್ತಿರುವ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು ಅಕ್ಟೋಬರ್ 2ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಈ ಚಿತ್ರದ ಪ್ರೀ ರೀಲೀಸ್ ಈವೆಂಟ್ ಹೈದರಾಬಾದ್‌ನಲ್ಲಿ ನಿನ್ನೆ ನೆರವೇರಿದ್ದು ಸಮಾರಂಭದಲ್ಲಿ ಎನ್​ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಿ ಬಾಲ್ಯದಿನಗಳನ್ನು ನೆನಪಿಸಿಕೊಂಡರು.

ಈ ಸಮಾರಂಭದಲ್ಲಿ ಮಾತನಾಡಿದ ತಾರಕ್, ತಾನು ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಈ ಚಿತ್ರ ನಿರ್ಮಾಣವಾಗುತ್ತದೆ ಎಂದು ಭಾವಿಸಿರಲಿಲ್ಲ ಎಂದು ಹೇಳಿದರು. ಕುತೂಹಲಕಾರಿ ಸಂಗತಿ ಹೇಳಿದ ಜೂನಿಯರ್ ಎನ್ ಟಿಆರ್, ‘ನಾನು ಸುಮಾರು ಮೂರು ವರ್ಷದವನಿದ್ದಾಗ ನಮ್ಮ ತಾಯಿ ಊರು ಹಳ್ಳಿ ಕುಂದಾಪುರದ ಬಳಿ ಇದೆ ಎಂದು ನನ್ನ ಅಜ್ಜಿ ನನಗೆ ಹೇಳುತ್ತಿದ್ದರು.

ಅವರು ಅದಕ್ಕೆ ಸಂಬಂಧಿಸಿದ ಕಥೆಗಳನ್ನು ನನಗೆ ಹೇಳುತ್ತಿದ್ದರು. ನನಗೆ ಅವೆಲ್ಲವೂ ಇಷ್ಟವಾಯಿತು. ನನಗೆ ಹಲವು ಅನುಮಾನಗಳಿದ್ದವು, ಉದಾಹರಣೆಗೆ, ಇದು ನಿಜವಾಗಿಯೂ ಸಂಭವಿಸುತ್ತದೆಯೇ ಎಂದು ಕೇಳಿಕೊಳ್ಳುತ್ತಿದೆ’ ಗುಳಿಕ ಮತ್ತು ಪಂಜುರ್ಲಿಯ ಬಗ್ಗೆ ತಿಳಿದುಕೊಳ್ಳಲು ನಾನು ಬಯಸುತ್ತಿದ್ದೆ.

ನಾನು ಬಾಲ್ಯದಲ್ಲಿ ಕೇಳಿದ ಕಥೆಗಳನ್ನು ಆಧರಿಸಿ ನಿರ್ದೇಶಕರು ಚಿತ್ರ ಮಾಡುತ್ತಾರೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನನ್ನ ಸಹೋದರ ರಿಷಬ್ ಶೆಟ್ಟಿ ಅದನ್ನು ಸಾಧ್ಯವಾಗಿಸಿದರು. ನನ್ನ ಬಾಲ್ಯದಲ್ಲಿ ನಾನು ಕೇಳಿದ ಕಥೆಗಳನ್ನು ಈಗ ಪರದೆಯ ಮೇಲೆ ನೋಡಿ ನನಗೆ ಆಶ್ಚರ್ಯವಾಗಿದೆ. ನಾನು ಅದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಎಂದರು.

ಇನ್ನು ಹೈದರಾಬಾದ್ ಕಾರ್ಯಕ್ರಮದಲ್ಲಿ ಕನ್ನಡದಲ್ಲಿಯೇ ಮಾತನಾಡಿದ ರಿಷಬ್ ಶೆಟ್ಟಿ, ತಾರಕ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ನನನಗೆ ಅವರ ಬೆಂಬಲ, ಶಕ್ತಿ ಶಾಶ್ವತ, ಅವರು, ಇನ್ನೊಬ್ಬ ತಾಯಿಯಿಂದ ಬಂದ ಸಹೋದರ ಎಂದು ಹೊಗಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ರಾಹುಲ್ ಗಾಂಧಿ ಎದೆಗೆ ಗುಂಡು ಹೊಡೆಯುತ್ತೇವೆ': ಕೇರಳ BJP ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ; ಅಮಿತ್ ಶಾಗೆ ಪತ್ರ ಬರೆದ ಕಾಂಗ್ರೆಸ್, ಕ್ರಮಕ್ಕೆ ಆಗ್ರಹ

ದೇವಾಲಯದ ಹೊರಗೆ ಹಿಂದೂಯೇತರರು ಪ್ರಸಾದ ಮಾರಾಟ ಮಾಡುವುದು ಕಂಡರೆ ಹೊಡೆಯಿರಿ: ಪ್ರಜ್ಞಾ ಠಾಕೂರ್

ಮೈಸೂರಿನಲ್ಲಿ ವರ್ಜಿನ್ ಸೆಕ್ಸ್ ದಂಧೆ ಬಯಲು; ಋತುಮತಿಯಾದ ಬಾಲಕಿಯರೇ ಟಾರ್ಗೆಟ್!

Asia Cup 2025: ಸೋಲು ಬೆನ್ನಲ್ಲೇ ಟ್ರೋಫಿಯೊಂದಿಗೆ ಮೈದಾನ ತೊರೆದ ಪಾಕ್ ಸಚಿವ; ACCಯಿಂದ ನಖ್ವಿ ವಜಾಗೊಳಿಸುವಂತೆ BCCI ಒತ್ತಡ!

ಮೈಸೂರಿಗೆ ಹೋಗುವ ಪ್ರಯಾಣಿಕರ ಗಮನಕ್ಕೆ: ದಸರಾ ಪ್ರಯುಕ್ತ KSRTC ಬಸ್ ದರ ಏರಿಕೆ!

SCROLL FOR NEXT