ಧುರಂಧರ್ 2 ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

Dhurandhar 2 ಆರ್ಭಟಕ್ಕೆ ಬೆದರಿದ ಮತ್ತೊಂದು ಸಿನಿಮಾ; 'ಡಕಾಯಿತ್' ಬಿಡುಗಡೆ ಮುಂದೂಡಿಕೆ

ಈ ಮುಂಚೆ ಧುರಂಧರ್ 2 ಕಾರಣದಿಂದ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಭೂತ್ ಬಂಗ್ಲಾ ಚಿತ್ರದ ನಿರ್ಮಾಪಕರು, ತಮ್ಮ ಸಿನಿಮಾ ಬಿಡುಗಡೆಯನ್ನು ಒಂದು ವಾರ ಮುಂದೂಡಿದ್ದರು.

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೆಂಜ್' ಚಿತ್ರದ ಬಾಕ್ಸ್ ಆಫೀಸ್ ಆರ್ಭಟಕ್ಕೆ ಬೆದರಿದ ಮತ್ತೊಂದು ಸಿನಿಮಾ 'ಡಕಾಯಿತ್' ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

ಈ ಮುಂಚೆ ಧುರಂಧರ್ 2 ಕಾರಣದಿಂದ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಭೂತ್ ಬಂಗ್ಲಾ ಚಿತ್ರದ ನಿರ್ಮಾಪಕರು, ತಮ್ಮ ಸಿನಿಮಾ ಬಿಡುಗಡೆಯನ್ನು ಒಂದು ವಾರ ಮುಂದೂಡಿದ್ದರು.

ಇದೀಗ ದಕ್ಷಿಣ ಭಾರತದ ನಟ ಅಡವಿ ಶೇಷ್ ಅವರು ಶನಿವಾರ ತಮ್ಮ ದ್ವಿಭಾಷಾ ಚಿತ್ರ "ಡಕಾಯಿತ್" ಬಿಡುಗಡೆಯನ್ನು ಮುಂದೂಡಬೇಕಾಗಿದೆ ಎಂದು ಹೇಳಿದ್ದಾರೆ.

ಆದಿತ್ಯ ಧರ್ ಅವರ "ಧುರಂಧರ್: ದಿ ರಿವೆಂಜ್" ಚಿತ್ರವು ಭಾರಿ ಪ್ರಮಾಣದಲ್ಲಿ ಚಿತ್ರಮಂದಿರಗಳನ್ನು ಅಕ್ರಮಿಸಿಕೊಂಡಿದೆ. ಹೀಗಾಗಿ ತಮ್ಮ ಸಿನಿಮಾ ಬಿಡುಗಡೆ ಮುಂದೂಡುತ್ತಿರುವುದಾಗಿ ತಿಳಿಸಿದ್ದಾರೆ.

ಶೇಷ್ ಅವರ ಚಿತ್ರವು ಮಾರ್ಚ್ 19 ರಂದು "ಧುರಂಧರ್ 2" ಜೊತೆ ಪೈಪೋಟಿ ನಡೆಸಲು ನಿರ್ಧರಿಸಿತ್ತು. ಆದರೆ ಚಿತ್ರದ ತಂಡವು ಚಿತ್ರವನ್ನು ಏಪ್ರಿಲ್ 10ಕ್ಕೆ ಮುಂದೂಡಿತು.

"ನಾವು ನಮ್ಮ ಸಿನಿಮಾವನ್ನು ಮಾರ್ಚ್ 19 ರಂದೇ ಬಿಡುಗಡೆ ಮಾಡಬೇಕಿತ್ತು ಮತ್ತು ದಕ್ಷಿಣದಲ್ಲಿ ತೆಲುಗು ಹೊಸ ವರ್ಷವಾದ ಯುಗಾದಿ ಸಂದರ್ಭ ಒಳ್ಳೆಯದಾಗಿತ್ತು. ಆದರೆ ನನ್ನ ಸ್ನೇಹಿತ ಆದಿತ್ಯ ಧರ್ ಅವರ "ಧುರಂಧರ್" ಕಾರಣದಿಂದಾಗಿ ನಾವು ಬಿಡುಗಡೆ ಮಾಡಲಿಲ್ಲ ಎಂದಿದ್ದಾರೆ.

"ನಾವು ಸರಿಯಾದ ಪ್ರದರ್ಶನವನ್ನು ಕಂಡುಕೊಳ್ಳಬೇಕೆಂದು ಭಾವಿಸಿದ್ದೇವೆ. ಹೀಗಾಗಿ ಏಪ್ರಿಲ್ 10ರ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ಅಡವಿ ಶೇಷ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ 927 ಕೋಟಿ ವಂಚನೆ ಆರೋಪ: ಓಜೋನ್ ಅರ್ಬಾನಾ CMD ವಾಸುದೇವನ್ ಬಂಧನ!

Asian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ, 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!

'ಒಂದೇ ಒಂದು ಪೋಸ್ಟ್ ಕೂಡ ಮಾಡಿಲ್ಲ: ಸ್ಮಿತ್ ಮಚ್ಚರ್ ವಿಚಾರದಲ್ಲಿ ರಾಹುಲ್ ಗಾಂಧಿಯ ಮೌನವನ್ನು ಪ್ರಶ್ನಿಸಿದ ಕಿಶನ್ ರೆಡ್ಡಿ!

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ Biggboss ಮಾಜಿ ಸ್ಪರ್ಧಿ ಜಾಹ್ನವಿ ನೇಮಕ!