ನಿರಂಜನ್-ದರ್ಶನ್ 
ಸಿನಿಮಾ ಸುದ್ದಿ

ಬಾರ್‌ನಲ್ಲಿ ಗಲಾಟೆ: ನಟ ದರ್ಶನ್ ಜೊತೆ ಅಭಿನಯಿಸಿದ್ದ ನಿರಂಜನ್ ಮೇಲೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ!

ನಟ ದರ್ಶನ್ ಅಭಿನಯದ ಒಡೆಯ ಚಿತ್ರದಲ್ಲಿ ಅಭಿನಯಿಸಿದ್ದ ನಟ ನಿರಂಜನ್ ಮೇಲೆ ಬಾರ್‌ನಲ್ಲಿ ನಡೆದ ಗಲಾಟೆಯಲ್ಲಿ ಬಿಯರ್ ‌ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ‌. ಘಟನೆ ಮಾರ್ಚ್ 28ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು: ನಟ ದರ್ಶನ್ ಅಭಿನಯದ ಒಡೆಯ ಚಿತ್ರದಲ್ಲಿ ಅಭಿನಯಿಸಿದ್ದ ನಟ ನಿರಂಜನ್ ಮೇಲೆ ಬಾರ್‌ನಲ್ಲಿ ನಡೆದ ಗಲಾಟೆಯಲ್ಲಿ ಬಿಯರ್ ‌ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ‌. ಘಟನೆ ಮಾರ್ಚ್ 28ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಸ್ನೇಹಿತ ಯಶಸ್ ಸೂರ್ಯ ಅವರ ಮನೆಗೆ ಹೋಗಿದ್ದ ನಿರಂಜನ್ ನಂತರ ಉತ್ತರಹಳ್ಳಿ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಬಾಯಾರಿಕೆ ಆಗಿ ನೀರು ಕುಡಿಯಲು ಮಂತ್ರಿ ಅಲೈನ್ಸ್ ಬಳಿಯ ಬಾರ್ ಗೆ ಹೋಗಿದ್ದಾಗ ವ್ಯಕ್ತಿಯೋರ್ವ ನಿರಂಜನ್ ಅವರನ್ನು ತಳ್ಳಿದ್ದಾರೆ. ಈ ವೇಳೆ ಗಲಾಟೆಯಾಗಿದೆ.

ನಂತರ ಹೊರಗೆ ಇನೊವಾ ಕಾರಿನಲ್ಲಿದ್ದ ನಾಲ್ಕು ಜನರು ಒಳಗೆ ಬಂದು ನನ್ನ ಜೊತೆಯಲ್ಲಿ ಜಗಳ ತೆಗೆದರು. ಇಬ್ಬರು ಕೈಯಿಂದ ನನಗೆ ಹೊಡೆದರು. ಇಬ್ಬರು ಬಿಯರ್ ಬಾಟಲ್ ನಿಂದ ತನ್ನ ತಲೆಯ ಮೇಲೆ ಹೊಡೆದರು ಎಂದು ನಿರಂಜನ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಲಾಕ್ ಅಪ್ ಡೆತ್ ಕೇಸ್; ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ!

ಕೊಡಗು: ಅನ್ನ, ಆಹಾರವಿಲ್ಲದೇ 4 ದಿನ ಕಾಡಿನಲ್ಲಿ ಕೇರಳಂ ಮಹಿಳೆ ಬದುಕುಳಿದಿದ್ದೇಗೆ? ಅನುಮಾನಗಳಿಗೆ ತಜ್ಞರು ಹೇಳೋದೇನು?

ಬೆಂಗಳೂರು ವಾಹನ ಸವಾರರೇ ಎಚ್ಚರ; ನಾಳೆಯಿಂದಲೇ ಟೋಯಿಂಗ್ ಆರಂಭ

ಅದು ಪೈಲಟ್ ರಕ್ಷಣಾ ಕಾರ್ಯಾಚರಣೆ ಅಲ್ಲ, ಯುರೇನಿಯಂ ಕಳ್ಳತನದ ಯತ್ನ, ಅದೂ ವಿಫಲವಾಗಿದೆ: ಅಮೆರಿಕ ವಿರುದ್ಧ ಇರಾನ್ ಆರೋಪ

ಭಾರತೀಯ ಸೇನೆಗೆ 'ದಿವ್ಯಾಸ್ತ್ರ' ಬಲ: ಆಧುನಿಕ ಯುದ್ಧಕ್ಕಾಗಿ AI ಆಧಾರಿತ, ಕಡಿಮೆ ವೆಚ್ಚದ ಡ್ರೋನ್ ಅಭಿವೃದ್ಧಿ; ಇದರ ವಿಶೇಷತೆ ಏನು?

SCROLL FOR NEXT