ತ್ರಿಶಾ ಕೃಷ್ಣನ್  
ಸಿನಿಮಾ ಸುದ್ದಿ

'ಸಿನಿಮಾ ರಂಗ ತೊರೆದಿದ್ದೇನೆ, ಶ್ರೀಮಂತ ಉದ್ಯಮಿಯನ್ನು ಮದುವೆಯಾಗಿದ್ದೇನೆ- ಎರಡು ವರ್ಷ ತುಂಬಿದ ನಾಲ್ಕು ಮಕ್ಕಳನ್ನು ಬೆಳೆಸುತ್ತಿದ್ದೇನೆ'!

ವಿಜಯ್ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಕೆಲವು ದಿನಗಳ ನಂತರ ತ್ರಿಶಾ ಮತ್ತು ವಿಜಯ್ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಸಮಯ ಕೂಡ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.

ನಟಿ ತ್ರಿಶಾ ಅವರ ಬಗ್ಗೆ ಕಳೆದ ಕೆಲವು ವಾರಗಳಿಂದ ಹಲವಾರು ಸುದ್ದಿಗಳು ಕೇಳಿ ಬರುತ್ತಲೇ ಇವೆ. ಸ್ಟಾರ್ ನಟಿಯಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಇಂದಿಗೂ ಬೇಡಿಕೆಯಲ್ಲಿರುವ ತಮಿಳು ಚೆಲುವೆ ಬಗ್ಗೆ ದಿನಕ್ಕೊಂದರಂತೆ ವದಂತಿಗಳು ಕೇಳಿ ಬರುತ್ತಲೇ ಇವೆ.

ಚೆನ್ನೈನಲ್ಲಿ ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಅವರ ಜೊತೆ ವಿವಾಹ ಆರತಕ್ಷತೆಯಲ್ಲಿ ಕಾಣಿಸಿಕೊಂಡಾಗಿನಿಂದಲೂ ತ್ರಿಶಾ ಕೃಷ್ಣನ್ ಸುದ್ದಿಯಲ್ಲಿದ್ದಾರೆ.

ವಿಜಯ್ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಕೆಲವು ದಿನಗಳ ನಂತರ ತ್ರಿಶಾ ಮತ್ತು ವಿಜಯ್ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಸಮಯ ಕೂಡ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.

ಈ ನಡುವೆ ನಟಿ ತ್ರಿಶಾ ನಟನೆಗೆ ನಿವೃತ್ತಿ ಘೋಷಿಸ್ತಾರೆ, ಮುಂದೆ ರಾಜಕೀಯಕ್ಕೆ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅಷ್ಟೇ ಏಕೆ ತ್ರಿಶಾ ಅವರು ಶ್ರೀಮಂತ ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಾರೆ ಎನ್ನಲಾಗಿತ್ತು.

ನಾನು ಸಿನಿಮಾ ರಂಗವನ್ನೇ ತೊರೆದಿದ್ದೇನೆ, ಶ್ರೀಮಂತ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದೇನೆ, ನಿನ್ನೆ ಎರಡು ವರ್ಷ ತುಂಬಿದ ನಾಲ್ಕು ಮಕ್ಕಳನ್ನು ಬೆಳೆಸುತ್ತಿದ್ದೇನೆ, ಇನ್ನೇನಾದರೂ ಸೇರಿಸಬೇಕೇ?
ತ್ರಿಶಾ ಕೃಷ್ಣನ್

ತಮ್ಮ ಕುರಿತಾಗಿ ಸಾಕಷ್ಟು ವದಂತಿಗಳು ಕೇಳಿ ಬರುತ್ತಿರುವುದರ ಹೊರತಾಗಿಯೂ ಕೂಡಾ ನಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಪ್ತರೊಂದಿಗೆ ಸುತ್ತಾಟ, ಸೆಲೆಬ್ರೇಷನ್, ಪಾರ್ಟಿ ಎಂದು ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ನಟಿ ಸೋಷಿಯಲ್ ಮೀಡಿಯಾ ವದಂತಿಗಳಿಂದ ಬೇಸತ್ತಿರುವ ಹಾಗೆ ಕಾಣಿಸುತ್ತದೆ. ನಟಿ ಈ ಸಂಬಂಧ ಇನ್​ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿದ್ದಾರೆ.

ನಾನು ಸಿನಿಮಾ ರಂಗವನ್ನೇ ತೊರೆದಿದ್ದೇನೆ, ಶ್ರೀಮಂತ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದೇನೆ, ನಿನ್ನೆ ಎರಡು ವರ್ಷ ತುಂಬಿದ ನಾಲ್ಕು ಮಕ್ಕಳನ್ನು ಬೆಳೆಸುತ್ತಿದ್ದೇನೆ, ಇನ್ನೇನಾದರೂ ಸೇರಿಸಬೇಕೇ ಅಥವಾ ಇಂದಿನ ಕಾದಂಬರಿಯ ಕೋಟಾ ಸಾಕೆ ಎಂದು ಬರೆದುಕೊಂಡಿದ್ದಾರೆ.

ತ್ರಿಶಾ ಅವರು ಸಿನಿಮಾ ಬಿಡುತ್ತಾರೆ ಎನ್ನುವ ವದಂತಿ ಸ್ವಲ್ಪ ಹಿಂದಿನಿಂದಲೇ ಇದೆ. ವಿಜಯ್ ಯಾವಾಗ ನಟನೆಗೆ ನಿವೃತ್ತಿ ಘೋಷಿಸಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರೋ, ಆಗಿನಿಂದ ತ್ರಿಶಾ ಅವರ ಸಿನಿಮಾ ನಿವೃತ್ತಿ ಸುದ್ದಿ ಮತ್ತಷ್ಟು ಚರ್ಚೆಯಾಗೋಕೆ ಶುರುವಾಯಿತು. ಅಷ್ಟೇ ಅಲ್ಲದೆ ನಟಿ ತುಂಬಾ ಹಿಂದೆ ನಾನು ಮುಂದೆ ಒಂದು ದಿನ ಸಿಎಂ ಆಗ್ತೀನಿ ಎಂದಿದ್ದ ವಿಡಿಯೋ ವೈರಲ್ ಆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಹೋರಾಟಕ್ಕೆ ಸಜ್ಜಾದ CJP; ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ: JDS ಶಾಸಕ ಹೆಚ್ ಡಿ ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು

ಸೀತಾಪುರದಲ್ಲಿ ವಿಚಿತ್ರ ಪ್ರಕರಣ: ಹಗಲು ಪ್ರೇಮಿ, ರಾತ್ರಿ ಗಂಡ ಬೇಕಂತೆ! ಇಬ್ಬರ ಜತೆ ಸಂಸಾರ ನಡೆಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ! Video

ಬೀದಿ ನಾಯಿಯ ಭೀಕರ ದಾಳಿ: ಮನೆಯಿಂದ ಹೊರಗೆ ಆಟವಾಡುತ್ತಿದ್ದ 5 ವರ್ಷದ ಬಾಲಕಿ ಗಂಭೀರ! Video