ರಮ್ಯಾ ಕಣ್ಣೀರು 
ಸಿನಿಮಾ ಸುದ್ದಿ

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

ನಾಪತ್ತೆಯಾಗಿರುವ ನಾಯಿಗಳಿಗೆ ಏನಾಗಿರಬಹುದು ಎಂಬುದನ್ನು ಕಲ್ಪಿಸಿಕೊಂಡರೆ ನೋವಾಗುತ್ತದೆ. ಈ ರೀತಿ ಆಗಿದೆ ಎಂಬುದು ಗೊತ್ತಾಗಾದ ನನಗೆ ಆಘಾತ ಆಯಿತು ಎಂದು ರಮ್ಯಾ ಹೇಳಿದ್ದಾರೆ.

ಬೆಂಗಳೂರು: ಬೆಂಗಳೂರಿನ ಕಗ್ಗದಾಸಪುರದಲ್ಲಿ ಬೀದಿನಾಯಿಗಳ ನಾಪತ್ತೆ ಕುರಿತಂತೆ ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿಗಳ ಮೇಲಿನ ಹಿಂಸೆ ನೆನೆದು ರಮ್ಯಾ ರಸ್ತೆಯಲ್ಲೇ ಗಳಗಳನೆ ಅತ್ತಿದ್ದಾರೆ. ಫ್ರೀಡಂಪಾರ್ಕ್‌ನಲ್ಲಿ ಬೀದಿ ನಾಯಿಗಳ ಬಲವಂತದ ಸ್ಥಳಾಂತರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರಮ್ಯಾ ನಾಯಿಗಳನ್ನು ಚೀಲಗಳಲ್ಲಿ ಕಟ್ಟಿ ಸಾಗಿಸುತ್ತಿರುವುದು ಅಮಾನವೀಯ ಎಂದು ಹೇಳಿದರು.

ನಾಪತ್ತೆಯಾಗಿರುವ ನಾಯಿಗಳಿಗೆ ಏನಾಗಿರಬಹುದು ಎಂಬುದನ್ನು ಕಲ್ಪಿಸಿಕೊಂಡರೆ ನೋವಾಗುತ್ತದೆ. ಈ ರೀತಿ ಆಗಿದೆ ಎಂಬುದು ಗೊತ್ತಾಗಾದ ನನಗೆ ಆಘಾತ ಆಯಿತು ಎಂದು ರಮ್ಯಾ ಹೇಳಿದ್ದಾರೆ. ಸಂಸ್ಥೆಯೊಂದು ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದು ಏಪ್ರಿಲ್ 16ರಂದು ಮುಂದಿನ ವಿಚಾರಣೆ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!

ಮಹಾ ದುರಂತಕ್ಕೆ ರೋಚಕ ಟ್ವಿಸ್ಟ್: ಐಫೋನ್​ EMI ಅನ್ನೋದೇ ಕಟ್ಟು ಕಥೆ; ಬೆಟ್ಟದಿಂದ ಬಿದ್ದು ಪ್ರಾಣಬಿಟ್ಟ ಮೂವರ ಬಗ್ಗೆ ಸಂಬಂಧಿ ಸ್ಫೋಟಕ ಹೇಳಿಕೆ!

ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಹೋರಾಟಕ್ಕೆ CJP ಸಜ್ಜು; ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ