ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್ ನಲ್ಲಿ ರಚಿತಾ ರಾಮ್ 
ಸಿನಿಮಾ ಸುದ್ದಿ

ಹೆಲ್ಮೆಟ್ ಧರಿಸದೆ ಬುಲೆಟ್ ಸವಾರಿ, ಸಂಚಾರ ನಿಯಮ ಉಲ್ಲಂಘನೆ: ನಟಿ ರಚಿತಾ ರಾಮ್ ವಿರುದ್ಧ ಸಾರ್ವಜನಿಕರ ಆಕ್ರೋಶ!

ವೈರಲ್ ಆಗಿರುವ ವಿಡಿಯೋದಲ್ಲಿ ನಟಿ ರಚಿತಾ ರಾಮ್, ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ನ ಹಿಂಬದಿಯಲ್ಲಿ ಕುಳಿತುಕೊಂಡಿದ್ದಾರೆ. ಬೈಕ್ ಓಡಿಸುತ್ತಿರುವ ಯುವತಿಯೂ ಸಹ ಹೆಲ್ಮೆಟ್ ಧರಿಸಿಲ್ಲ.

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಚಿತಾ ರಾಮ್ ಇತ್ತೀಚಿಗೆ ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್ ನ ಹಿಂಬದಿಯಲ್ಲಿ ಕುಳಿತು ಸಂಚರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ನಟಿ ರಚಿತಾ ರಾಮ್, ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ನ ಹಿಂಬದಿಯಲ್ಲಿ ಕುಳಿತುಕೊಂಡಿದ್ದಾರೆ. ಬೈಕ್ ಓಡಿಸುತ್ತಿರುವ ಯುವತಿಯೂ ಸಹ ಹೆಲ್ಮೆಟ್ ಧರಿಸಿಲ್ಲ. ಬೈಕ್ ಓಡಿಸುತ್ತಿರುವ ಯುವತಿಯ ವಯಸ್ಸಿನ ಬಗ್ಗೆಯೂ ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಆ ಯುವತಿ ಅಪ್ರಾಪ್ತ ವಯಸ್ಕಳೇ ಅಥವಾ ಪರವಾನಗಿ ಹೊಂದಿದ್ದಾರೆಯೇ ಎಂಬ ಬಗ್ಗೆ ವಿಡಿಯೋದಲ್ಲಿ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಹೆಲ್ಮೆಟ್ ಧರಿಸದಿರುವುದು ಸ್ಪಷ್ಟವಾಗಿ ಸಂಚಾರ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲ್ಪಟ್ಟಿದೆ.

ವೈರಲ್ ವಿಡಿಯೋ ಯಾವ ದಿನಾಂಕದಂದು ಚಿತ್ರೀಕರಣಗೊಂಡಿದೆ ಎಂಬ ಬಗ್ಗೆ ನಟಿ ಅಥವಾ ಸಂಬಂಧಪಟ್ಟವರು ಅಧಿಕೃತ ಮಾಹಿತಿ ನೀಡಿಲ್ಲ .ಇಲ್ಲಿಯವರೆಗೆ ನಟಿ ರಚಿತಾ ರಾಮ್ ಈ ವಿಡಿಯೋ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದು ಯಾವುದಾದರೂ ಚಿತ್ರದ ಪ್ರಚಾರದ ಭಾಗವೋ ಅಥವಾ ವೈಯಕ್ತಿಕ ಸಂಚಾರವೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇದು ಸ್ಪಷ್ಟ ಸಂಚಾರ ನಿಯಮ ಉಲ್ಲಂಘನೆಯಾಗಿದ್ದು, ಬೆಂಗಳೂರು ಸಂಚಾರ ನಿಯಮಗಳ ಪ್ರಕಾರ, ದ್ವಿಚಕ್ರ ವಾಹನ ಸವಾರ ಅಥವಾ ಹಿಂಬದಿ ಸವಾರ ಹೆಲ್ಮೆಟ್ ಧರಿಸದಿದ್ದರೆ ಕನಿಷ್ಠ 500 ರೂಪಾಯಿ ದಂಡ ವಿಧಿಸುವ ಅವಕಾಶವಿದೆ. ಪ್ರಭಾವಿ ವ್ಯಕ್ತಿಗಳು ಅಥವಾ ಜನಪ್ರಿಯ ನಟ-ನಟಿಯರು ನಿಯಮಗಳನ್ನು ಪಾಲಿಸಿದಾಗ ಅದು ಸಮಾಜದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೌಂಟರ್; ನಾಮಪತ್ರ ಸಲ್ಲಿಸಿದ BJP ಅಭ್ಯರ್ಥಿ; ಸ್ಪೀಕರ್ ಚುನಾವಣೆ ಬಹಿಷ್ಕಾರ

ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ಸಮರ್ಥಿಸಿಕೊಂಡ CM; ಡಿಕೆಶಿ ಹೇಳಿದ್ದೇನು?

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ! ಸಿಗದ ಜನಬೆಂಬಲ, ಬಹುತೇಕ ಕಡೆ ಸಹಜ ಜನಜೀವನ

AIನಿಂದ ಕೆಲಸ ಕಳೆದುಕೊಳ್ಳುವ ಆತಂಕದ ನಡುವೆ ಮಾರ್ಕ್ ಜುಕರ್ ಬರ್ಗ್ ಹೊಸ ಭವಿಷ್ಯವಾಣಿ! ಏನಿದು?

‘ಅಂಕಲ್, ಪವರ್ ಆಫ್ ಮಾಡಿ’: ಮಹಿಳಾ ಸಿಬ್ಬಂದಿ ಜೀವ ಉಳಿಸಿದ 5ನೇ ತರಗತಿ ಬಾಲಕನ ಸಮಯಪ್ರಜ್ಞೆ! video