ಅಯೋಗ್ಯ 2 ಚಿತ್ರದ ಪೋಸ್ಟರ್ - ಅಭಿಷೇಕ್ ಅಂಬರೀಶ್ 
ಸಿನಿಮಾ ಸುದ್ದಿ

ಈ 'ಅಯೋಗ್ಯ'ನ ಬಗ್ಗೆ ಮಾತನಾಡೋದು ಬೇಡ: ಮುಂದಿನ ಚಿತ್ರದ ಕುರಿತು ಕೇಳಿದ್ದಕ್ಕೆ ಅಭಿಷೇಕ್ ಅಂಬರೀಶ್ ಉತ್ತರ

ದಿವಂಗತ ನಟ ಅಂಬರೀಶ್ ಮತ್ತು ನಟಿ ಸುಮಲತಾ ಅವರ ಪುತ್ರ ಅಭಿಷೇಕ್, 2019ರಲ್ಲಿ 'ಅಮರ್' ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು ಮತ್ತು ನಂತರ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' (2023) ಚಿತ್ರದಲ್ಲಿ ನಟಿಸಿದರು.

ಅಭಿಷೇಕ್ ಅಂಬರೀಶ್ ತಮ್ಮ ಮುಂದಿನ ಚಿತ್ರದ ಕುರಿತು ಯಾವುದೇ ಮಾಹಿತಿ ನೀಡದಿದ್ದರೂ, 'ಅಯೋಗ್ಯ 2' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು, ಪ್ರೇಕ್ಷಕರು ನಗೆಕಡಲಲ್ಲಿ ತೇಲುವಂತೆ ಮಾಡಿದರು.

ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' (2023) ಚಿತ್ರದ ನಂತರ ಬೆಳ್ಳಿಪರದೆಯಿಂದ ದೂರವಿದ್ದ ಈ ನಟನಿಗೆ, ಕಾರ್ಯಕ್ರಮದ ಸಂವಾದದ ವೇಳೆ ಅವರ ಮುಂದಿನ ಚಿತ್ರದ ಕುರಿತು ಪ್ರಶ್ನೆಯೊಂದು ಎದುರಾಯಿತು. ಆದರೆ, ತಮ್ಮ ಯೋಜನೆಗಳ ಬಗ್ಗೆ ಏನನ್ನೂ ಬಹಿರಂಗಪಡಿಸುವ ಬದಲು, ಅಭಿಷೇಕ್ ಚುಟುಕಾದ ಹಾಗೂ ಹಾಸ್ಯಭರಿತ ಮಾತಿನ ಮೂಲಕ ಪ್ರತಿಕ್ರಿಯೆ ನೀಡಿದರು.

'ನಾವು ಇಲ್ಲಿ 'ಅಯೋಗ್ಯ 2' ಬಗ್ಗೆ ಮಾತನಾಡಲು ಬಂದಿದ್ದೇವೆ. ಈ 'ಅಯೋಗ್ಯ'ನ ಬಗ್ಗೆ ಮಾತನಾಡೋದು ಬೇಡ' ಎಂದು ಅವರು ತಮ್ಮನ್ನೇ ಉದ್ದೇಶಿಸಿ ಹೇಳಿದರು. ಅವರ ಈ ಮಾತಿಗೆ ಪ್ರೇಕ್ಷಕರಿಂದ ಭಾರಿ ಕರತಾಡನ, ಶಿಳ್ಳೆ ಮತ್ತು ನಗೆಯ ಅಲೆ ವ್ಯಕ್ತವಾಯಿತು; ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿವೆ.

ದಿವಂಗತ ನಟ ಅಂಬರೀಶ್ ಮತ್ತು ನಟಿ ಸುಮಲತಾ ಅವರ ಪುತ್ರ ಅಭಿಷೇಕ್, 2019ರಲ್ಲಿ 'ಅಮರ್' ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು ಮತ್ತು ನಂತರ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' (2023) ಚಿತ್ರದಲ್ಲಿ ನಟಿಸಿದರು. ಅಂದಿನಿಂದ ಅವರು ಯಾವುದೇ ಚಿತ್ರದಲ್ಲಿ ಕಾಣಿಸಿಲ್ಲ. 2023ರಲ್ಲಿ 'ಫಸ್ಟ್-ಲುಕ್' ಪೋಸ್ಟರ್ ಬಿಡುಗಡೆಯೊಂದಿಗೆ ಅವರ ಮುಂದಿನ ಚಿತ್ರವಾಗಿ 'ಕಾಳಿ'ಯನ್ನು ಘೋಷಿಸಲಾಗಿತ್ತು; ಹಾಗೆಯೇ ನಿರ್ದೇಶಕ ಮಹೇಶ್ ಕುಮಾರ್ ಅವರೊಂದಿಗಿನ ಸಹಯೋಗದ ಬಗ್ಗೆಯೂ ವ್ಯಾಪಕ ಚರ್ಚೆ ನಡೆದಿತ್ತಾದರೂ, ಆ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ.

ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ನಟಿಸಿರುವ 'ಅಯೋಗ್ಯ 2' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಭಿಷೇಕ್ ಅವರನ್ನು ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ..!

TMC ಹೆಸರು-ಚಿಹ್ನೆ ಫ್ರೀಜ್; ಚುನಾವಣಾ ಆಯೋಗದ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ಆಕ್ಷೇಪ, ತುರ್ತು ವಿಚಾರಣೆಗೆ ಸುಪ್ರೀಂ ಒಪ್ಪಿಗೆ..!

ಕೊನೆಗೂ ಸುರಿದ ಮಳೆರಾಯ, ನಿಟ್ಟಿಸಿರುವ ಬಿಟ್ಟ ರಾಯಲಸೀಮೆ; 43.5 ಮಿ.ಮೀ ಮಳೆ! ಹವಾಮಾನ ಇಲಾಖೆ ಹೇಳಿದ್ದೇನು?

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ: ಷರತ್ತು ಒಪ್ಪದ ಹೊರತು ಹಾರ್ಮುಜ್ ಜಲಸಂಧಿ ತರೆಯಲ್ಲ ಎಂದ ಇರಾನ್; ದಿಗ್ಬಂಧನ ಮತ್ತಷ್ಟು ಬಿಗಿಗೊಳಿಸಿದ ಅಮೆರಿಕ..!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ‘ದೊಡ್ಡ ಘಟನೆ ನಡೆಯಲಿದೆ’ ಎಂದ ಟ್ರಂಪ್; ಇರಾನ್ ವಿರುದ್ಧ ಅಮೆರಿಕಾ ನಡೆಸಿರುವ ಗೇಮ್‌ಪ್ಲ್ಯಾನ್ ಏನು..?