ಶಾಂತಿ ಕ್ರಾಂತಿ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಮದ್ರಾಸ್ ಪ್ರಸಾದ್‌ ಲ್ಯಾಬ್‌ ಅವಘಡದಲ್ಲಿ 'ಶಾಂತಿ ಕ್ರಾಂತಿ' ಮದರ್ ಪ್ರಿಂಟ್ ಬೆಂಕಿಗಾಹುತಿ: ಸದ್ಯಕ್ಕಂತೂ ರೀ-ರಿಲೀಸ್​ ಇಲ್ಲ; ಬಾಲಾಜಿ

ಇದೀಗ ಶಾಂತಿ ಕ್ರಾಂತಿ ಸಿನಿಮಾ ಮರುಬಿಡುಗಡೆ ಬಗ್ಗೆ ರವಿಚಂದ್ರನ್ ಸಹೋದರ ಬಾಲಾಜಿ ವೀರ ಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ. ಈ ವಿಡಿಯೊವನ್ನು ನಟ ರಘುರಾಮ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಮರುಬಿಡುಗಡೆ ಮಾಡಬೇಕೆಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಶುರುವಾಗಿತ್ತು.

ಇದೀಗ ಶಾಂತಿ ಕ್ರಾಂತಿ ಸಿನಿಮಾ ಮರುಬಿಡುಗಡೆ ಬಗ್ಗೆ ರವಿಚಂದ್ರನ್ ಸಹೋದರ ಬಾಲಾಜಿ ವೀರ ಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ. ಈ ವಿಡಿಯೊವನ್ನು ನಟ ರಘುರಾಮ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಶಾಂತಿ ಕ್ರಾಂತಿ ಮರುಬಿಡುಗಡೆ ಆಗಬೇಕು ಅಂತ ಟ್ರೆಂಡ್ ಶುರುವಾದ ತಕ್ಷಣವೇ ನಾನು ಮತ್ತು ಅಣ್ಣ ರವಿಚಂದ್ರನ್ ಈ ಬಗ್ಗೆ ಚರ್ಚಿಸಿದ್ದೇವೆ. ಶಾಂತಿ ಕ್ರಾಂತಿಯ ನೆಗೆಟಿವ್ (ರೀಲ್) ನಮ್ಮ ಬಳಿ ಇರುವುದು ಕರಗಿ ಹೋಗಿದೆ. ನೆಗೆಟಿವ್ ಇಲ್ಲದೆ ಸಿನಿಮಾವನ್ನು ಮರುಬಿಡುಗಡೆ ಮಾಡಲು ಸಾಧ್ಯವೇ ಇಲ್ಲ. ಶಾಂತಿ ಕ್ರಾಂತಿಯ ನೆಗೆಟಿವ್‌ಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಈಗಿನ ತಂತ್ರಜ್ಞಾನಕ್ಕೆ ಅಳವಡಿಸಲು ಅದರ ಮೇಲೆ ಕೆಲಸ ಮಾಡಬೇಕಾಗಿರುವುದರಿಂದ ಒಂದು ವರ್ಷದವರೆಗೆ ಸಮಯಾವಕಾಶ ಬೇಕು ಎಂದಿದ್ದಾರೆ.

ರವಿಚಂದ್ರನ್ ಕನಸಿನ ಕೂಸು 'ಶಾಂತಿ ಕ್ರಾಂತಿ' ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮಟ್ಟಿನಲ್ಲಿ ಗಮನ ಸೆಳೆದಿತ್ತು. 1991ರಲ್ಲಿ ಬಂದ ಈ ಚಿತ್ರದ ಮೂಲಕ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದರು ವಿ.ರವಿಚಂದ್ರನ್​​. ಅಂದು ಬಹುಕೋಟಿ ವೆಚ್ಚದಲ್ಲಿ, ಏಕಕಾಲಕ್ಕೆ 4 ಭಾಷೆಗಳಲ್ಲಿ ನಿರ್ಮಾಣಗೊಂಡಿತ್ತು.

ಈಶ್ವರಿ ಸಂಸ್ಥೆಯ ಸಂಸ್ಥಾಪಕರಾದ ವೀರಸ್ವಾಮಿ ನಿಧನದ ನಂತರ, ಅವರು ನಿರ್ಮಿಸಿದ ಪ್ರಸಿದ್ಧ ಚಿತ್ರಗಳ ಎಲ್ಲ ರೀತಿಯ ಹಕ್ಕುಗಳು ಅಧಿಕೃತವಾಗಿ ಅವರ ಪುತ್ರ ವಿ.ಬಾಲಾಜಿ ಅವರ ಹೆಸರಿನಲ್ಲೇ ಇವೆ. ನಾಗರಹಾವು, ಚಕ್ರವ್ಯೂಹದಿಂದ ಹಿಡಿದು ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ರಾಮಾಚಾರಿ ಸೇರಿ ಹಲವು ಸಿನಿಮಾಗಳ ಸಂಪೂರ್ಣ ಮಾಲೀಕತ್ವ ಮತ್ತು ರೈಟ್ಸ್ ಕಾನೂನು ಬದ್ಧವಾಗಿ ಬಾಲಾಜಿ ಅವರ ಬಳಿ ಇದೆ.

ಶಾಂತಿ ಕ್ರಾಂತಿ ಸಿನಿಮಾದ ಮದರ್‌ ಪ್ರಿಂಟ್‌ ಮದರಾಸಿನ ಪ್ರಸಾದ್‌ ಲ್ಯಾಬ್‌ನಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಅಗ್ನಿಗೆ ಆಹುತಿಯಾಗಿದೆ. ಹೀಗಾಗಿ ಶಾಂತಿ ಕ್ರಾಂತಿ ಸಿನಿಮಾದ ಮೂಲ ಪ್ರಿಂಟ್‌ನ ತುಣುಕು ಕೂಡಾ ಈಗ ಲಭ್ಯವಿಲ್ಲ. ಸದ್ಯ ಟಿವಿ ರೈಟ್ಸ್‌ಗೆ ಕೊಟ್ಟಿರುವ ಹೆಚ್​ಡಿ ಗುಣಮಟ್ಟವಷ್ಟೇ ಉಳಿದಿದೆ. ಇದನ್ನು ತೆಗೆದುಕೊಂಡು, 4K, 8K ಕ್ವಾಲಿಟಿಯಲ್ಲಿ ರಿಲೀಸ್‌ ಮಾಡೋದು ದೊಡ್ಡ ಸವಾಲಾಗಿದೆ. ಸದ್ಯಕ್ಕಂತೂ ರೀ-ರಿಲೀಸ್​ ಮಾಡೋಕ್ಕಾಗಲ್ಲ. ಸೋರ್ಸ್​​ ಹುಡುಕಾಟದಲ್ಲಿದ್ದೇವೆ. ಸಿಗುತ್ತಿದ್ದಂತೆ ಮರು ಬಿಡುಗಡೆ ಮಾಡುತ್ತೇವೆ ಎಂಬುದನ್ನು ನಿಮಗೆ ತಿಳಿಸುತ್ತೇವೆ ಎಂದು ಬಾಲಾಜಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರೂರ್ ಕಾಲ್ತುಳಿತ ಸಂತ್ರಸ್ತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ; ‘ಸರ್ಕಾರದ ನೀತಿಯನ್ನು ಪ್ರಶ್ನಿಸಲು ನೀವ್ಯಾರು?’: ಹೈಕೋರ್ಟ್ ಆದೇಶಕ್ಕೆ 'ಸುಪ್ರೀಂ' ತಡೆ

‘ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ವಿಚಾರ’: ಬಾರ್ ಕೌನ್ಸಿಲ್‌ಗೆ ಸುಪ್ರೀಂ ಕೋರ್ಟ್ ಸಿಜೆಐ ಸೂರ್ಯಕಾಂತ್ ತರಾಟೆ

ಸ್ವಾತಂತ್ರ್ಯೋತ್ಸವದ ಸಂಭ್ರಮದ ಮೇಲೆ ಉಗ್ರರ ಕರಿನೆರಳು: ದೆಹಲಿ ಹೈಕೋರ್ಟ್-ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ, ಹೆಚ್ಚಿದ ಆತಂಕ..!

ಉತ್ತರಾಖಂಡ: ಚಮೋಲಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ; 7 ಕಾರ್ಮಿಕರು ಸಾವು, 14 ಜನರಿಗೆ ಗಾಯ, 22 ಮಂದಿ ರಕ್ಷಣೆ-Video

ಆಸಿಸ್ ನೆಲದಲ್ಲಿ ಇತಿಹಾಸ ನಿರ್ಮಿಸಿದ ಬಾಂಗ್ಲಾ ಬ್ಯಾಟರ್; ಭರ್ಜರಿ ಶತಕ ಸಿಡಿಸಿ Tanzid Tamim ಹೊಸ ದಾಖಲೆ!