Online Desk
ಸಿನಿಮಾ ಸುದ್ದಿ

ಸ್ಯಾಂಡಲ್​ವುಡ್​ನ ಲಕ್ಕಿ ಥಿಯೇಟರ್ ಊರ್ವಶಿ ನೆಲಸಮ: ಸುಪ್ರೀಂ ಆದೇಶ ಬೆನ್ನಲ್ಲೇ, ಡಾ.ರಾಜ್ ಉದ್ಘಾಟಿಸಿದ್ದ ಚಿತ್ರಮಂದಿರ ಇನ್ಮುಂದೆ ಕೇವಲ ನೆನಪು

ಬೆಂಗಳೂರಿನ ಸಿನಿ ಪ್ರೇಕ್ಷಕರ ಎದೆಯಲ್ಲಿ ದಶಕಗಳಿಂದ ಅಚ್ಚಳಿಯದೆ ಉಳಿದಿರುವ, ಅದೆಷ್ಟೋ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಪ್ರಸಿದ್ಧ ಊರ್ವಶಿ ಚಿತ್ರಮಂದಿರ ನೆಲಸಮ; ಸುಪ್ರೀಂ ಮಹತ್ವದ ಆದೇಶ ಬೆನ್ನಲ್ಲೇ 55 ವರ್ಷಗಳ ಭವ್ಯ ಇತಿಹಾಸದ ಊರ್ವಶಿ ಥಿಯೇಟರ್ ತೆರವು ಕಾರ್ಯ ಆರಂಭ.

ಬೆಂಗಳೂರು: ಬೆಂಗಳೂರಿನ ಸಿನಿ ಪ್ರಿಯರ ಪಾಲಿನ ಹೆಮ್ಮೆಯ ತಾಣ, ಸುಮಾರು 55 ವರ್ಷಗಳ ಭವ್ಯ ಇತಿಹಾಸವನ್ನು ತನ್ನೊಡಲಲ್ಲಿ ಹೊತ್ತಿದ್ದ ಐಕಾನಿಕ್ ಊರ್ವಶಿ ಚಿತ್ರಮಂದಿರ ಇನ್ಮುಂದೆ ನೆನಪು ಮಾತ್ರ. ವರನಟ ಡಾ. ರಾಜ್ ಕುಮಾರ್ ಅವರಿಂದಲೇ ಉದ್ಘಾಟನೆಗೊಂಡು, 5,000ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಕ್ಷಿಯಾಗಿದ್ದ ಈ ಅದ್ಭುತ ಚಿತ್ರಮಂದಿರವೀಗ ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಧರೆಗುರುಳುತ್ತಿದೆ. ಅದರಲ್ಲೂ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಇಲ್ಲಿಯೇ ಬಿಡುಗಡೆಯಾಗಲಿದೆ ಎಂದು ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಈ ಘಟನೆ ತೀವ್ರ ಆಘಾತವನ್ನುಂಟುಮಾಡಿದೆ. ಆ ಕುರಿತ ವರದಿ ಇಲ್ಲಿದೆ:

55 ವರ್ಷಗಳ ಭವ್ಯ ಇತಿಹಾಸ ಮತ್ತು ಹಿನ್ನೆಲೆ

ಊರ್ವಶಿ ಚಿತ್ರಮಂದಿರವು 1970ರಲ್ಲಿ ವರನಟ ಡಾ ರಾಜ್ ಕುಮಾರ್ ಅವರಿಂದ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿತ್ತು. ಸುಮಾರು 1,100 ಆಸನಗಳ ಬೃಹತ್ ಸಾಮರ್ಥ್ಯ ಹೊಂದಿದ್ದ ಈ ಏಕಪರದೆ ಚಿತ್ರಮಂದಿರವು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳ 5,000ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಾಕ್ಷಿಯಾಗಿತ್ತು. ಅದರಲ್ಲೂ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಎಕೆ 47 ಸಿನಿಮಾ ಇಲ್ಲೇ ಬರೋಬ್ಬರಿ 100 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡು ಸಿನಿರಂಗದಲ್ಲಿ ದೊಡ್ಡ ಇತಿಹಾಸವನ್ನೇ ನಿರ್ಮಿಸಿತ್ತು.

ನೆಲಸಮಗೊಳ್ಳುತ್ತಿರುವುದು ಯಾಕೆ?

1970 ರಲ್ಲಿ ಜಮೀನಿನ ಮೂಲ ಮಾಲೀಕರಾದ ಬಾಸೆಟ್ಟಿ ಟ್ರಸ್ಟ್ ಅವರಿಂದ ಶ್ರೀನಿವಾಸ ಎಂಟರ್‌ಪ್ರೈಸಸ್ ಸಂಸ್ಥೆಯು ಜಾಗವನ್ನು ಲೀಸ್‌ಗೆ ಪಡೆದು ಚಿತ್ರಮಂದಿರವನ್ನು ನಿರ್ಮಿಸಿತ್ತು. ಈ ಗುತ್ತಿಗೆಯ ಅವಧಿಯು 2018ರ ಏಪ್ರಿಲ್ 23 ರಂದೇ ಮುಕ್ತಾಯಗೊಂಡಿತ್ತು. ಹಾಗಾಗಿ, ನಿಯಮಗಳ ಪ್ರಕಾರ ಮುಂದುವರಿಸಲು ಮಾಲೀಕರ ಒಪ್ಪಿಗೆ ಬೇಕಿತ್ತು, ಆದರೆ ಟ್ರಸ್ಟ್ ಒಪ್ಪಿಗೆ ನೀಡದೆ ಜಾಗ ತೆರವುಗೊಳಿಸಲು ಕೋರಿ ನ್ಯಾಯಾಲಯದ ಮೊರೆ ಹೋಯಿತು. ಕೆಳ ನ್ಯಾಯಾಲಯದ ನಂತರ ಕರ್ನಾಟಕ ಹೈಕೋರ್ಟ್ ಜಾಗವನ್ನು ಮಾಲೀಕರಿಗೆ ಹಸ್ತಾಂತರಿಸಲು ಗಡುವು ನೀಡಿತ್ತು. ಇದನ್ನು ಪ್ರಶ್ನಿಸಿ ಚಿತ್ರಮಂದಿರದ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಕಾನೂನು ಪ್ರಕ್ರಿಯೆಯ ಬಳಿಕ ಜಾಗವನ್ನು ತೆರವುಗೊಳಿಸಿ ಮಾಲೀಕರಿಗೆ ಹಸ್ತಾಂತರಿಸುವಂತೆ ಆದೇಶಿಸಲಾಗಿದೆ.

ಮುಂದುವರೆದು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳ ಅನ್ವಯ, ಜಮೀನನ್ನು ಖಾಲಿ ಮಾಡಿ ಮೂಲ ಮಾಲೀಕರಿಗೆ ಒಪ್ಪಿಸಬೇಕಾಗಿರುವುದರಿಂದ ಚಿತ್ರಮಂದಿರದ ಆಸನಗಳು, ಧ್ವನಿವರ್ಧಕಗಳು, ಪ್ರೊಜೆಕ್ಟರ್ ಸೇರಿದಂತೆ ಆಂತರಿಕ ವಸ್ತುಗಳನ್ನು ತೆರವುಗೊಳಿಸಿ, ಕಟ್ಟಡವನ್ನು ಕೆಡವುವ ಕಾರ್ಯ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Basmati ಅಕ್ಕಿ ಭಾರತಕ್ಕೆ ಮಾತ್ರ ಸೀಮಿತವಲ್ಲ: ವಿಶೇಷ ಟ್ರೇಡ್‌ಮಾರ್ಕ್ ನೀಡಲು ಆಸ್ಟ್ರೇಲಿಯಾ ಕೋರ್ಟ್ ನಕಾರ, ರಫ್ತುದಾರರಲ್ಲಿ ಹೆಚ್ಚಿದ ಆತಂಕ

ಕೇರಳದ 19 ವರ್ಷದ ವಿದ್ಯಾರ್ಥಿನಿ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ; ಯಾರು ಈ ಅತಿಲೋಕ ಸುಂದರಿ?

ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ, ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್..!

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ಆಗಸ್ಟ್.31ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ವಾಲ್ಮೀಕಿ ನಿಗಮ ಹಗರಣ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ BJP ಬೃಹತ್ ಪ್ರತಿಭಟನೆ, ಅಶೋಕ್-ವಿಜಯೇಂದ್ರ ಸೇರಿ ಹಲವರು ಪೊಲೀಸರ ವಶಕ್ಕೆ..!