ವಿನಯ್ ಗೌಡ, ಶ್ರೇಯಸ್ 
ಸಿನಿಮಾ ಸುದ್ದಿ

Biggboss Kannada ಅಗ್ನಿಪರೀಕ್ಷೆ: ಗೆಟ್ ಔಟ್, ಇದೆಲ್ಲಾ ಬೇಡ ಬ್ರೋ; ವಿನಯ್ ಗೌಡಗೆ ಸ್ಪರ್ಧಿ ತಿರುಗೇಟು, Video ವೈರಲ್!

'ಬಿಗ್ ಬಾಸ್ ಅಗ್ನಿಪರೀಕ್ಷೆ' ವೇದಿಕೆಯಲ್ಲಿ ಸ್ಪರ್ಧಿಯೊಬ್ಬರಿಗೆ 'ವೃತ್ತವೊಂದಕ್ಕೆ ಎಷ್ಟು ಸೈಡ್ಸ್ ಇರುತ್ತದೆ?' ಎಂದು ಕೇಳಿ ಜ್ಯೂರಿ ಸ್ಥಾನದಲ್ಲಿದ್ದ ವಿನಯ್ ಗೌಡ ನಗೇಪಾಟಲೀಗೆ ಗುರಿಯಾಗಿದ್ದರು. ಇದೀಗ ವೇದಿಕೆ ಮೇಲಿದ್ದ ಸ್ಪರ್ಧಿಯೊಬ್ಬರಿಗೆ ಗೆಟ್ ಔಟ್ ಎಂದು ಹೇಳಿದ ವಿನಯ್ ಗೌಡಗೆ...

'ಬಿಗ್ ಬಾಸ್ ಅಗ್ನಿಪರೀಕ್ಷೆ' ವೇದಿಕೆಯಲ್ಲಿ ಸ್ಪರ್ಧಿಯೊಬ್ಬರಿಗೆ 'ವೃತ್ತವೊಂದಕ್ಕೆ ಎಷ್ಟು ಸೈಡ್ಸ್ ಇರುತ್ತದೆ?' ಎಂದು ಕೇಳಿ ಜ್ಯೂರಿ ಸ್ಥಾನದಲ್ಲಿದ್ದ ವಿನಯ್ ಗೌಡ ನಗೇಪಾಟಲೀಗೆ ಗುರಿಯಾಗಿದ್ದರು. ಇದೀಗ ವೇದಿಕೆ ಮೇಲಿದ್ದ ಸ್ಪರ್ಧಿಯೊಬ್ಬರಿಗೆ ಗೆಟ್ ಔಟ್ ಎಂದು ಹೇಳಿದ ವಿನಯ್ ಗೌಡಗೆ ಸ್ಪರ್ಧಿ ತಿರುಗೇಟು ನೀಡಿರುವ ವಿಡಿಯೋ ವೈರಲ್ ಆಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 13ರ ಅಗ್ನಿಪರೀಕ್ಷೆ ವೇದಿಕೆಯಲ್ಲಿ ಸ್ಪರ್ಧಿ ಶ್ರೇಯಸ್ ಗೆ ಟಾಸ್ಕ್ ವೇಳೆ ವಿನಯ್ ಗೌಡ ʻಗೆಟ್ ಔಟ್ʼ ಎಂದು ಹೇಳಿದ್ದರು. ಇದಕ್ಕೆ ಆಕ್ರೋಶಗೊಂಡ ಶ್ರೇಯಸ್ ಕೂಡ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ. ಗೆಟ್‌ ಔಟ್‌ ಬೇಡ ಬ್ರೇ... ನಾನು ಇಲ್ಲಿ ಗೆಟ್‌ ಔಟ್‌ ಅನಿಸಿಕೊಳ್ಳೋದಕ್ಕೆ ಬಂದಿಲ್ಲ. ನನಗೂ ನಿಮಗೂ ಏನಾದರೂ ವಾದ-ವಿವಾದ ಆಗಿದ್ರೆ ಗೆಟ್‌ ಔಟ್‌ ಅನ್ಬಹುದು ಎಂದರು. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿನಯ್ ಗೌಡ ನಡವಳಿಕೆ ವಿರುದ್ಧ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ತೀರ್ಪುಗಾರ ಸ್ಥಾನದಲ್ಲಿ ಕುಳಿತಿರುವ ವಿನಯ್ ಗೌಡ ಅವರು ಮತ್ತಷ್ಟು ಸಂಯಮದಿಂದ ವರ್ತಿಸಬೇಕಿತ್ತು. ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರಂತಹ ದೊಡ್ಡ ಸ್ಟಾರ್ ಕೂಡಾ ಇಷ್ಟು ಅಗೌರವದಿಂದ ಮಾತನಾಡುವುದಿಲ್ಲ ಎಂದೆಲ್ಲಾ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ಪ್ರತಿಪಕ್ಷಗಳ ಪ್ರತಿಭಟನೆ, ಗದ್ದಲದ ನಡುವೆ ಯಾವುದೇ ಚರ್ಚೆಯಿಲ್ಲದೇ ವಿಧಾನ ಪರಿಷತ್ತಿನಲ್ಲಿ ಎರಡು ವಿಧೇಯಕಗಳು ಪಾಸ್

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ಕೊಲಂಬೊ ಟೆಸ್ಟ್‌ನಲ್ಲಿ ಭಾರತದ ಅಬ್ಬರ: 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್, ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ

ಬೆಂಗಳೂರಿನಲ್ಲಿ ಜಪಾನಿಗನ ಬಂಧನ: 19 ದಿನ ಜೈಲುವಾಸ, 7 ವರ್ಷಗಳ ಬಳಿಕ ಕರ್ನಾಟಕ ಸರ್ಕಾರದಿಂದ 75 ಸಾವಿರ ಪರಿಹಾರ!