ವಿಜಯ್-ಚಕ್ರವರ್ತಿ ಚಂದ್ರಚೂಡ್ 
ಸಿನಿಮಾ ಸುದ್ದಿ

ಕೆಲ ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಸಪ್ಲೈ ಮಾಡ್ತಾರೆ: ಚಕ್ರವರ್ತಿ ಚಂದ್ರಚೂಡ್ ವಿರುದ್ಧ ನಿರ್ಮಾಪಕ ಸಂಘ ದೂರು

ಕೆಲ ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಸಪ್ಲೈ ಮಾಡುತ್ತಾರೆ ಎಂಬ ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ನೀಡಿದ ಹೇಳಿಯೊಂದು ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಕಾಂಡೋಮ್ ಸಪ್ಲೈ ಮಾಡುತ್ತಿದ್ದಾರೆ ಹೇಳಿಕೆ ಕೋಲಾಹಲ ಸೃಷ್ಟಿಸಿದೆ.

ಬೆಂಗಳೂರು: ಕೆಲ ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಸಪ್ಲೈ ಮಾಡುತ್ತಾರೆ ಎಂಬ ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ನೀಡಿದ ಹೇಳಿಯೊಂದು ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಕಾಂಡೋಮ್ ಸಪ್ಲೈ ಮಾಡುತ್ತಿದ್ದಾರೆ ಹೇಳಿಕೆ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಕನ್ನಡ ಸಿನಿಮಾ ನಿರ್ಮಾಪಕರ ಸಂಘ ತುರ್ತು ಸಭೆ ಕರೆದಿತ್ತು. ಚಕ್ರವರ್ತಿ ಚಂದ್ರಚೂಡ್ ವಿರುದ್ದ ದೂರು ದಾಖಲಿಸಲು ನಿರ್ಮಾಪಕರ ಸಂಘದ ಪದಾಧಿಕಾರಿಗಳು, ಸದಸ್ಯರು ಒಮ್ಮತದ ನಿರ್ಧಾರ ಸಭೆ ತೆಗೆದುಕೊಂಡಿದೆ.

ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ್ದ ಚಕ್ರವರ್ತಿ ಚಂದ್ರಚೂಡ್, ಕಾಂಡೋಮ್ ಸಪ್ಲೈ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಕನ್ನಡ ನಿರ್ಮಾಪಕರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಕನ್ನಡ ನಿರ್ಮಾಪಕರ ಸಂಘ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಚಕ್ರವರ್ತಿ ಚಂದ್ರಚೂಡ್ ಅಸಂಬದ್ಧ ಹೇಳಿಕೆ ನೀಡುವ ಮೂಲಕ ಗೊಂದಲ, ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ನಿರ್ಮಾಪಕರ ಸಂಘ ಆಕ್ರೋಶ ಹೊರಹಾಕಿದೆ.

ವಿವಾದದ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿದ ಚಂದ್ರಚೂಡ್

ನಾನು ಮಾತನಾಡಿರುವುದು ತಮಿಳು ಚಿತ್ರರಂಗದ ಬಗ್ಗೆ ಅಲ್ಲಿಯ ವಾತಾವರಣದ ಬಗ್ಗೆ ಅಲ್ಲಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಹೊರತು ಕನ್ನಡ ನಿರ್ಮಾಪಕರ ಬಗ್ಗೆ ಆಗಲಿ ಕನ್ನಡ ಚಿತ್ರರಂಗದ ಬಗ್ಗೆ ಅಲ್ಲವೇ ಅಲ್ಲ. ಅಲ್ಲದೆ "ಕಮೋಡ್ ಟು ಕಾಂಡೋಮ್ "ಅನ್ನುವ ಉಪಮೆಯನ್ನು ಬಳಸಿದ್ದೇನೆ ಅಷ್ಟೇ ವಿನಃ ಯಾವುದೇ ನಿರ್ಮಾಪಕರ ವಿರುದ್ಧ ಅಲ್ಲ. ಜೊತೆಗೆ ಒಬ್ಬ ಕನ್ನಡ ನಿರ್ಮಾಪಕ ತಮಿಳು ರಾಜಕೀಯಕ್ಕೆ ಹೇಗೆ ಸಿಲುಕಿದ್ದಾರೆ ಎಂಬ ಹಿನ್ನೆಲೆಯಲ್ಲೂ ಸಹ ದನಿ ಎತ್ತಿದ್ದೇನೆ.

ತಮಿಳು ಚಿತ್ರರಂಗದಲ್ಲಿಯೂ ಕೆಲಸ ಮಾಡಿದ ಅನುಭವ ಇರುವುದರಿಂದ ಅಲ್ಲಿ ನಾಯಕ ಕೇಂದ್ರೀತ ವಾತಾವರಣ ಹೇಗಿದೆ ಮತ್ತು ಅದರ ಪರಿಣಾಮಗಳನ್ನು ವಿವರಿಸಿದ್ದೇನೆ. ಅಖಾಡ videoದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳದೆ ಒಂದು ಭಾಗವನ್ನು ಮಾತ್ರ ಕತ್ತರಿಸಿ ವೈರಲ್ ಮಾಡುತ್ತಿರುವುದು ಈ ಪ್ರಮಾದ. ಯಾವುದೇ ನಿರ್ಮಾಪಕರು ಇದರಿಂದ ನೊಂದುಕೊಳ್ಳುವ ಅವಶ್ಯಕತೆಯೂ ಇಲ್ಲ ಎಂದು ಚಂದ್ರಚೂಡ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET paper leak: ಯುವಕರ ಭವಿಷ್ಯದ ಜೊತೆ ಆಟ, ತಕ್ಷಣ ಧರ್ಮೇಂದ್ರ ಪ್ರಧಾನ್ ವಜಾಗೊಳಿಸಿ: ರಾಹುಲ್ ಗಾಂಧಿ ಆಗ್ರಹ

ನಟ Jayam Ravi ವಿಚ್ಛೇದನ: ನಿರಾಕರಿಸಿದ್ದು ಯಾರು?, ಮದುವೆಯಾಗಿದ್ದು ಯಾರು? ಎಂಬುದನ್ನು ಸಾಬೀತು ಪಡಿಸುತ್ತೇನೆ: ಆರ್ತಿ ತಾಯಿ ಸುಜಾತ

IPL 2026: 2 ಓವರ್ ನಲ್ಲಿ ಪಂದ್ಯ ಕಳೆದುಕೊಂಡ GT, KKRಗೆ 29 ರನ್ ಗಳ ಭರ್ಜರಿ ಜಯ

IPL 2026: ಗಾಯದ ನಡುವೆಯೂ ಭರ್ಜರಿ ಬ್ಯಾಟಿಂಗ್, Sai Sudharsan ದಾಖಲೆ

'ಪ್ಲೀಸ್ ನಾಳೆ ಒಂದಿನ ಗೆಲ್ರಪ್ಪಾ': ಎದುರಾಳಿ RCB ಬೆನ್ನು ಬಿದ್ದ CSK ಫ್ಯಾನ್ಸ್! ಬೆಂಗಳೂರು ಗೆಲುವು ಚೆನ್ನೈಗೇಕೆ ಮುಖ್ಯ?

SCROLL FOR NEXT