

ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸ್ಟಾರ್ ಯಶ್, ಇದೀಗ ತಮ್ಮ ಗಡ್ಡದ ಕುರಿತು ಕುತೂಹಲಕಾರಿ
ಸಂಗತಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಇಂಡಿಯ ಟಿವಿಯ ಟಿವಿ ಶೋ ‘ಆಪ್ ಕಿ ಅದಾಲತ್’ನಲ್ಲಿ ತಮ್ಮ ಗಡ್ಡದ ಲುಕ್ ಸೇರಿದಂತೆ ತಮ್ಮ ಸಿನಿ ಜರ್ನಿ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಈ ಹಿಂದೆ ಕೆಜಿಎಫ್ ಚಿತ್ರಕ್ಕಾಗಿಯೇ ರಾಕಿಂಗ್ ಸ್ಟಾರ್ ಯಶ್ ಮೆಂಟೇನ್ ಮಾಡಿದ್ದ ಗಡ್ಡದ ಲುಕ್ ದೇಶಾದ್ಯಂತ ಒಂದು ಟ್ರೆಂಡ್ ಆಯಿತು. ಈ ಮೂಲಕ ಎಲ್ಲ ಯುವಕರು ಲಾಂಗ್ ಬಿಯರ್ಡ್ ಮೆಂಟೇನ್ ಮಾಡಿದ್ರು. ಜೊತೆಗೆ ಲಾಂಗ್ ಹೇರ್‌ನಲ್ಲೂ ಕಾಣಿಸಿಕೊಂಡಿದ್ದರು. ಈಗ ಅವರ ಮುಂದಿನ ಸಿನಿಮಾ ಟಾಕ್ಸಿಕ್ ((Toxic) ನಲ್ಲೂ ಗಡ್ಡದ ಲುಕ್‌ನಲ್ಲೇ ಕಾಣಿಸಿಕೊಂಡಿದ್ದಾರೆ.
‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ವೀಕ್ಷಕರೊಬ್ಬರು, ನೀವ್ಯಾಕೆ ಸದಾ ಗಡ್ಡ ಬಿಟ್ಟಿಕೊಂಡೇ ಇರುತ್ತೀರಿ? ಎಂದು ಕೇಳಿದ ಪ್ರಶ್ನೆಗೆ ಯಶ್ ತಮ್ಮ ರಂಗಭೂಮಿ ದಿನಗಳ ಅನುಭವವನ್ನು ನೆನಪಿಸಿಕೊಂಡು ಉತ್ತರಿಸಿದ್ದಾರೆ.
ನಾನು ರಂಗಭೂಮಿಗೆ ಸೇರಿದಾಗ ನನಗೆ ಕೇವಲ 17 ವರ್ಷ ವಯಸ್ಸು. ಆ ಸಮಯದಲ್ಲಿ ನಾನು ಯಾವುದೇ ವಿಷಯ ಹೇಳಲು ಹೋದರೂ ಅಲ್ಲಿದ್ದ ಹಿರಿಯರು ‘ನೀನಿನ್ನೂ ಚಿಕ್ಕವನು, ಸುಮ್ಮನಿರು’ ಎಂದು ನನ್ನ ಮಾತಿಗೆ ಮನ್ನಣೆ ನೀಡುತ್ತಿರಲಿಲ್ಲ. ನಾನು ಹೇಳುವ ಮಾತು ಸರಿಯಾಗಿದ್ದರೂ ವಯಸ್ಸನ್ನು ಮಾತ್ರ ಏಕೆ ಪರಿಗಣಿಸುತ್ತಾರೆ ಎಂದು ನನಗೆ ಅನಿಸುತ್ತಿತ್ತು. ನಾನು ಬೇಗ ದೊಡ್ಡವನಾಗಬೇಕು ಮತ್ತು ಹಿರಿಯನಂತೆ ಕಾಣಬೇಕು ಎಂದುಕೊಂಡೆ. ಗಡ್ಡ ಬಿಟ್ಟರೆ ದೊಡ್ಡವರಂತೆ ಕಾಣಬಹುದು ಎಂಬ ಕಾರಣಕ್ಕೆ ಅಂದಿನಿಂದಲೇ ಗಡ್ಡ ಬಿಡಲು ಶುರುಮಾಡಿದೆ ಎಂದು ಯಶ್ ಹಾಸ್ಯಭರಿತವಾಗಿ ವಿವರಿಸಿದ್ದಾರೆ.
ದೇಶದ ಅತ್ಯಂತ ಪ್ರಸಿದ್ಧ ಹಾಗೂ ದೀರ್ಘಾವಧಿಯ ಟಿವಿ ಟಾಕ್ ಶೋ ಎಂದೇ ಪ್ರಖ್ಯಾತಿ ಪಡೆದಿರುವ 'ಆಪ್ ಕಿ ಅದಾಲತ್' (Aap Ki Adalat) ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹಾಟ್‌ಸೀಟ್‌ನಲ್ಲಿ ಕೂತ ಮೊಟ್ಟಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ. ಹಿರಿಯ ಪತ್ರಕರ್ತ ರಜತ್ ಶರ್ಮಾ ನಡೆಸಿ ಕೊಡುವ 'ಆಪ್ ಕಿ ಅದಾಲತ್' ಕಳೆದ ಮೂರು ದಶಕಗಳಿಂದಲೂ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಮಾತ್ರವೇ ಈ ಹಾಟ್ ಸೀಟನಲ್ಲಿ ನಿಂತು ಕಠಿಣ ಪ್ರಶ್ನೆಗಳನ್ನು ಎದುರಿಸಿದ್ದಾರೆ.