ಸಾರಾ ಮಹೇಶ್ 
ಸಿನಿಮಾ ಸುದ್ದಿ

'ರಾಜಕೀಯದಿಂದ ಸ್ಯಾಂಡಲ್‌ವುಡ್‌ನತ್ತ': ಜೆಡಿಎಸ್ ನಾಯಕ ಸಾರಾ ಮಹೇಶ್ ಚಿತ್ರ ನಿರ್ಮಾಣಕ್ಕೆ ಮುಂದು!

ಇನ್ನೂ ಹೆಸರಿಡದ ಈ ಚಿತ್ರವನ್ನು ಕಿರಣ್ ವಿಶ್ವನಾಥ್ ನಿರ್ದೇಶಿಸಲಿದ್ದಾರೆ. ಅವರು ಈ ಹಿಂದೆ ರನ್ನ ಮತ್ತು ವಿಕ್ಟರಿಯಂತಹ ವಾಣಿಜ್ಯಿಕವಾಗಿ ಯಶಸ್ವಿಯಾದ ಕನ್ನಡ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಮಾಜಿ ಸಚಿವ ಮತ್ತು ಜೆಡಿಎಸ್ ನಾಯಕ ಸಾರಾ ಮಹೇಶ್ ಕನ್ನಡ ಚಲನಚಿತ್ರ ನಿರ್ಮಾಣಕ್ಕೆ ಕಾಲಿಟ್ಟಿದ್ದಾರೆ. ಗೌರಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಅವರು, ತಾಜಾ ಪ್ರತಿಭೆಗಳು ಮತ್ತು ಪರಿಚಿತ ಮುಖಗಳ ಮಿಶ್ರಣವನ್ನು ಹೊಂದಿರುವ ತಮ್ಮ ಯೋಜನೆಯ ಕೆಲಸವನ್ನು ಸದ್ದಿಲ್ಲದೆ ಪ್ರಾರಂಭಿಸಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರವನ್ನು ಕಿರಣ್ ವಿಶ್ವನಾಥ್ ನಿರ್ದೇಶಿಸಲಿದ್ದಾರೆ. ಅವರು ಈ ಹಿಂದೆ ರನ್ನ ಮತ್ತು ವಿಕ್ಟರಿಯಂತಹ ವಾಣಿಜ್ಯಿಕವಾಗಿ ಯಶಸ್ವಿಯಾದ ಕನ್ನಡ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದೀಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುತ್ತಿದ್ದಾರೆ. ನಿರ್ದೇಶಕ ಮತ್ತು ನಿರ್ಮಾಪಕರಿಗೆ ಇದು ಚೊಚ್ಚಲ ಚಿತ್ರವಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಪ್ರಮೋಷನಲ್ ಟೀಸರ್ ಸಾರಾ ಮಹೇಶ್ ಅವರನ್ನು ನಿರ್ಮಾಪಕನಾಗಿ ಪರಿಚಯಿಸಿದೆ.

ನಾಯಕಿಯಾಗಿ ನಟಿ ಪ್ರಿಯಾಂಕಾ ಆಚಾರ್ ಅವರನ್ನು ಅಂತಿಮಗೊಳಿಸಲಾಗಿದೆ. ತರುಣ್ ಕಿಶೋರ್ ನಿರ್ಮಾಣದ ಏಳುಮಲೆ ಚಿತ್ರದಲ್ಲಿ ಕಾಣಿಸಿಕೊಂಡು ಖ್ಯಾತಿ ಪಡೆದ ಅವರು ಮೊದಲು ಅವರು ಜೀ ಕನ್ನಡದ ರಿಯಾಲಿಟಿ ಶೋ ಮಹಾನಟಿ ಮೂಲಕ ಜನಮನ್ನಣೆ ಗಳಿಸಿದರು. ಸದ್ಯ ನಾಯಕ ಯಾರೆಂಬುದನ್ನು ಚಿತ್ರತಂಡ ಅಂತಿಮಗೊಳಿಸಲಿಲ್ಲ. ಮುಂದಿನ ವಾರಗಳಲ್ಲಿ ಚಿತ್ರದ ಶೀರ್ಷಿಕೆ ಮತ್ತು ನಾಯಕ ಎರಡನ್ನೂ ಘೋಷಿಸಲು ಚಿತ್ರತಂಡ ಯೋಜಿಸಿದೆ.

1998ರ 'ಯಾರೇ ನೀನು ಚೆಲುವೆ' ಚಿತ್ರದ ಪಾತ್ರಕ್ಕಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ನಟಿ ಸಂಗೀತಾ ಮಾಧವನ್ ಕನ್ನಡ ಚಿತ್ರರಂಗಕ್ಕೆ ಈ ಚಿತ್ರದ ಮೂಲಕ ಮರಳುತ್ತಿದ್ದಾರೆ. ನಂತರ 'ಯಾರೇ ನೀ ಅಭಿಮಾನಿ' ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದ ಅವರು ಸಾರಾ ಮಹೇಶ್ ನಿರ್ಮಾಣದ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಹಸಸಿಂಹ, ಏಜೆಂಟ್ ಅಮರ್ ಚಿತ್ರ ಖ್ಯಾತಿಯ ನಿರ್ದೇಶಕ ಜೋ ಸೈಮನ್ ಹೃದಯಾಘಾತದಿಂದ ನಿಧನ

ಹೊಸ PMO ಕಚೇರಿ 'ಸೇವಾ ತೀರ್ಥ' ಕಟ್ಟಡಕ್ಕೆ ಪ್ರಧಾನಿ ಮೋದಿ ಸ್ಥಳಾಂತರ: ಮೊದಲ ದಿನವೇ ಹಲವು ಪ್ರಮುಖ ನಿರ್ಧಾರ!

5,000 ಕೊಟ್ಟರೂ ತಗೋಳಿ, ಆದರೆ ಅವರಿಗೆ ಶಿಳ್ಳೆ ಹೊಡೆದು ಹೇಳಿ': DMK ವಿರುದ್ಧ TVK ಮುಖ್ಯಸ್ಥ ವಿಜಯ್ ವಾಗ್ದಾಳಿ

ಚುನಾವಣೆ ಹೊಸ್ತಿಲಲ್ಲೇ TN ಮಹಿಳೆಯರಿಗೆ ಬಂಪರ್: 1.31 ಕೋಟಿ ಖಾತೆಗಳಿಗೆ 5 ಸಾವಿರ ಜಮೆ; ಮತ್ತೆ ಅಧಿಕಾರಕ್ಕೆ ಬಂದರೆ 2 ಸಾವಿರ - ಸಿಎಂ ಸ್ಟಾಲಿನ್

ನೆಹರು ಯಾಕೆ ಚೀನಾದೊಂದಿಗೆ 'ಪಂಚಶೀಲ' ಒಪ್ಪಂದ ಮಾಡಿಕೊಂಡ್ರು ಗೊತ್ತಾ? CDS ಅನಿಲ್ ಚೌಹಾಣ್ ಹೇಳಿದ್ದು ಹೀಗೆ..

SCROLL FOR NEXT