ಸಾನ್ವಿ -ಸುದೀಪ್ 
ಸಿನಿಮಾ ಸುದ್ದಿ

ನನ್ನ ದೇಹ ಚರ್ಚೆಯ ವಿಷಯವಲ್ಲ: ಮಗಳು ಸಾನ್ವಿ ಹೇಳಿಕೆಗೆ ಸುದೀಪ್ ಕೊಟ್ಟ ಉತ್ತರವೇನು?

ನನ್ನ ದೇಹ ಚರ್ಚೆಯ ವಿಷಯವಲ್ಲ ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದ ಪುತ್ರಿ ಸಾನ್ವಿ ಹೇಳಿಕೆಯನ್ನು ಕಿಚ್ಚ ಸುದೀಪ್ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಕೆಟ್ಟ ಕಾಮೆಂಟ್ಸ್‌ ಮಾಡುವವರ ವಿರುದ್ಧವೂ ಗುಡುಗಿದ್ದಾರೆ.

ಮಾರ್ಕ್ ಸಿನಿಮಾದ ಪೈರಸಿ ವಿಚಾರಕ್ಕೆ ಕಿಚ್ಚ ಸುದೀಪ್ ಆಡಿದ ಮಾತು ಆ ನಂತರ ಹಲವು ಕವಲುಗಳಾಗಿ ಒಡೆದು ಏನೇನೋ ಆಗಿದೆ. ಸುದೀಪ್ ಅವರನ್ನು ಟಾರ್ಗೆಟ್ ಮಾಡಿರುವ ದರ್ಶನ್ ಅಭಿಮಾನಿಗಳು, ಅವರ ಪುತ್ರಿಯ ಬಗ್ಗೆಯೂ ಕೆಟ್ಟ ಕಮೆಂಟ್​​ಗಳನ್ನು ಮಾಡಿದ್ದಾರೆ.

ನನ್ನ ದೇಹ ಚರ್ಚೆಯ ವಿಷಯವಲ್ಲ ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದ ಪುತ್ರಿ ಸಾನ್ವಿ ಹೇಳಿಕೆಯನ್ನು ಕಿಚ್ಚ ಸುದೀಪ್ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಕೆಟ್ಟ ಕಾಮೆಂಟ್ಸ್‌ ಮಾಡುವವರ ವಿರುದ್ಧವೂ ಗುಡುಗಿದ್ದಾರೆ. ಬೆಂಗಳೂರಿನ ಕೆಜಿ ರಸ್ತೆಯ ಸಂತೋಷ್‌ ಚಿತ್ರಮಂದಿರಲ್ಲಿ ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಿದ ಬಳಿಕ ಸುದೀಪ್ ತಮ್ಮ ಅಭಿಪ್ರಾಯ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ನನ್ನ ದೇಹ ಇನ್ಯಾರದ್ದೋ ಚರ್ಚೆಯ ವಸ್ತುವಲ್ಲ, ನನಗೆ ನಿಮ್ಮ ಅಭಿಪ್ರಾಯ ಬೇಕಿದ್ದರೆ ಖಂಡಿತ ಕೇಳುತ್ತೇನೆʼ ಎಂದು ಸುದೀಪ್‌ ಪುತ್ರಿ ಇನ್‌ಸ್ಟಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಇದನ್ನ ಸಮರ್ಥಿಸಿಕೊಂಡಿರುವ ಸುದೀಪ್‌, ನನ್ನ ಮಗಳು ರಿಯಾಕ್ಟ್ ಮಾಡಿದ್ದು ತಪ್ಪಾ? ಯಾವುದೇ ಹೆಣ್ಣುಮಕ್ಕಳಾದ್ರೂ ಮಾತನಾಡ್ತಿದ್ರು ತಾನೆ..? ಹೆಣ್ಣಾಗಿ ಏನ್ ಮಾಡ್ಬೇಕು ಅದನ್ನೇ ಮಗಳು ಮಾಡಿದ್ದಾಳೆ ಎಂದಿದ್ದಾರೆ.

ಇದನ್ನು ಸುದೀಪ್ ಈಗಾಗಲೇ ಖಂಡಿಸಿದ್ದಾರೆ. ಅಲ್ಲದೆ, ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಸಹ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸುದೀಪ್ ಅವರು, ಸಾನ್ವಿ ಸುದೀಪ್ ಹಂಚಿಕೊಂಡಿರುವ ಪೋಸ್ಟ್ ಬಗ್ಗೆ ಮಾತನಾಡುತ್ತಾ, ‘ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ’ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಧೀಶರ ಮೇಲಿನ ದಾಳಿ ಖಂಡಿಸಿದ ಮಮತಾ; ರಾಷ್ಟ್ರಪತಿ ಆಳ್ವಿಕೆಗಾಗಿ ಬಿಜೆಪಿ 'ಸಂಚು' ಎಂದ ದೀದಿ

Dhurandhar 2 ಬಾಕ್ಸ್ ಆಫೀಸ್ ಆರ್ಭಟಕ್ಕೆ ಬೆದರಿದ 'ಭೂತ್ ಬಂಗ್ಲಾ'; ಬಿಡುಗಡೆ ಏಪ್ರಿಲ್ 16ಕ್ಕೆ ಮುಂದೂಡಿಕೆ

RDPR ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಆಹ್ವಾನ; ವೇತನ, ಅರ್ಜಿ ಸಲ್ಲಿಕೆ ಅಂತಿಮ ದಿನಾಂಕದ ಬಗ್ಗೆ ಇಲ್ಲಿದೆ ಮಾಹಿತಿ

ಯುಎಸ್ ನಿರ್ಬಂಧದ ಹೊರತಾಗಿ ಭಾರತಕ್ಕೆ ಪ್ರಯಾಣಿಸಿದ ತೈಲ ಟ್ಯಾಂಕರ್; ಮತ್ತೊಂದು ರಾಜತಾಂತ್ರಿಕ ಗೆಲುವು

ಅಸ್ಸಾಂ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ರಾಹುಲ್ ಗಾಂಧಿ ನೀಡಿದ ಭರವಸೆಗಳೇನು?

SCROLL FOR NEXT