ಬಿಗ್ ಬಾಸ್ ಗೆದ್ದ ಕಲ್ಯಾಣ್ ಪಡಾಳ 
ಸಿನಿಮಾ ಸುದ್ದಿ

'ಬಿಗ್ ಬಾಸ್ ತೆಲುಗು ಸೀಸನ್ 9' ಗೆದ್ದ ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಜರ್ನಿಯೇ ರೋಚಕ..!

ವಿಜಯನಗರಂ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಕಲ್ಯಾಣ್, ಬಿಗ್ ಬಾಸ್ ತೆಲುಗು ಟ್ರೋಫಿ ಗೆದ್ದ ಅತ್ಯಂತ ಕಿರಿಯ ಮತ್ತು ಮೊದಲ ಸಾಮಾನ್ಯ ವ್ಯಕ್ತಿಯಾಗಿದ್ದಾರೆ.

ವಿಜಯನಗರಂ: ಕೇಂದ್ರ ಮೀಸಲು ಪೊಲೀಸ್ ಪಡೆ(CRPF)ಯ ಕಾನ್‌ಸ್ಟೆಬಲ್, 23 ವರ್ಷದ ಕಲ್ಯಾಣ್ ಪಡಾಳ ಅವರು ತಮ್ಮ ದೃಢನಿಶ್ಚಯ, ಶಿಸ್ತು, ಅಚಲ ನಂಬಿಕೆ ಮತ್ತು ದೃಢ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯದಿಂದ 'ಬಿಗ್ ಬಾಸ್ ತೆಲುಗು ಸೀಸನ್ 9' ವಿಜೇತರಾಗಿ ಆಯ್ಕೆಯಾಗಿದ್ದಾರೆ.

ವಿಜಯನಗರಂ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಕಲ್ಯಾಣ್, ಬಿಗ್ ಬಾಸ್ ತೆಲುಗು ಟ್ರೋಫಿ ಗೆದ್ದ ಅತ್ಯಂತ ಕಿರಿಯ ಮತ್ತು ಮೊದಲ ಸಾಮಾನ್ಯ ವ್ಯಕ್ತಿಯಾಗಿದ್ದಾರೆ.

ಸಿಆರ್‌ಪಿಎಫ್ ಕಾನ್‌ಸ್ಟೆಬಲ್‌ನಿಂದ ಬಿಗ್ ಬಾಸ್ ವಿಜೇತರಾಗಿರುವ ಕಲ್ಯಾಣ್ ಅವರ ಜರ್ನಿಯೇ ರೋಚಕವಾಗಿದ್ದು, 'ಕ್ಯಾಟರ್‌ಪಿಲ್ಲರ್‌ನಿಂದ ಚಿಟ್ಟೆ'ಯಾಗಿ ಪರಿವರ್ತನೆಯಂತಿದೆ. ಕಲ್ಯಾಣ್ ಬಾಲ್ಯದಿಂದಲೂ ಸಿನಿಮಾದ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ ಅವರ ಕುಟುಂಬದ ಆರ್ಥಿಕ ಸ್ಥಿತಿಯು ಅವರನ್ನು 2022 ರಲ್ಲಿ ಸಿಆರ್‌ಪಿಎಫ್‌ ಸೇರಲು ಕಾರಣವಾಯಿತು. ಇದು ರಾಷ್ಟ್ರ ಸೇವೆ ಸಲ್ಲಿಸುವ ಅವರ ಕನಸನ್ನು ನನಸಾಗಿಸಿತು. ನಂತರ 'ಅಗ್ನಿ ಪರೀಕ್ಷಾ' ಆಯ್ಕೆ ಪ್ರಕ್ರಿಯೆಯ ಮೂಲಕ ಬಿಗ್ ಬಾಸ್‌ನಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡರು. ಇದಕ್ಕಾಗಿ ಅವರು ತಮ್ಮ ಸಿಆರ್‌ಪಿಎಫ್ ಕರ್ತವ್ಯಗಳಿಂದ ಸಾಂದರ್ಭಿಕ ರಜೆ(ಸಿಎಲ್) ಪಡೆದಿದ್ದಾರೆ.

ಕಲ್ಯಾಣ್ ತಮ್ಮ ಆಟದ ಮೇಲೆ ಗಮನಹರಿಸಿದ್ದಕ್ಕಾಗಿ ಮತ್ತು ಬಿಗ್ ಬಾಸ್ ಮನೆಯಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿದ್ದರಿಂದ ಹೆಚ್ಚು ಪ್ರಶಂಸೆ ಗಳಿಸಿದರು. ಅವರ ಶಿಸ್ತು, ನಮ್ರತೆ ಮತ್ತು ಭಾವನಾತ್ಮಕ ಶಕ್ತಿ, ಪ್ರೇಕ್ಷಕರ ಬೆಂಬಲ ಬಿಗ್ ಬಾಸ್ ಗೆಲ್ಲಲು ಸಹಾಯ ಮಾಡಿತು. ತನುಜಾ ಪುಟ್ಟಸ್ವಾಮಿ ಮತ್ತು ಡೆಮನ್ ಪವನ್ ಅವರು ರನ್ನರ್-ಅಪ್ ಆಗಿದ್ದಾರೆ.

ಕಲ್ಯಾಣ್ ಅವರ ತಂದೆ ಲಕ್ಷ್ಮಣರಾವ್, ಗ್ರಾಮದಲ್ಲಿ ಪ್ಯಾನ್‌ಶಾಪ್ ನಡೆಸುವ ಮೂಲಕ ತಮ್ಮ ಕುಟುಂಬ ನೋಡಿಕೊಳ್ಳುತ್ತಿದ್ದಾರೆ. ಕಲ್ಯಾಣ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗುಡಿಲೋವಾದಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು NTR ಟ್ರಸ್ಟ್ ಮೂಲಕ ರಾಮಚಂದ್ರಪುರಂನಲ್ಲಿ ಪೂರ್ಣಗೊಳಿಸಿದರು. ಅವರು ಚಿಕ್ಕ ವಯಸ್ಸಿನಿಂದಲೇ ಫಿಟ್‌ನೆಸ್‌ನತ್ತ ಹೆಚ್ಚು ಗಮನಹರಿಸಿದರು ಮತ್ತು CRPF ಸೇರಿದರು.

TNIE ಜೊತೆ ಮಾತನಾಡಿದ ಕಲ್ಯಾಣ್ ಅವರ ತಂದೆ ಲಕ್ಷ್ಮಣರಾವ್, "ಕಲ್ಯಾಣ್ ಅವರಿಗೆ ಬಾಲ್ಯದಿಂದಲೂ ನಟನೆಯ ಬಗ್ಗೆ ಅಪಾರ ಆಸಕ್ತಿ ಇತ್ತು. ಅವನು ಸಿನಿಮಾದಲ್ಲಿ ಅಭಿನಯಿಸಲು ಪ್ರಯತ್ನಿಸಬಹುದೇ ಎಂದು ನನ್ನನ್ನು ಕೇಳಿದ. ಆದರೆ ನಮ್ಮ ಆರ್ಥಿಕ ಸ್ಥಿತಿಯಿಂದಾಗಿ ನಾನು ಬೇಡ ಅಂತ ಹೇಳಿದೆ. ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಕುಟುಂಬಕ್ಕೆ ಸಹಾಯ ಮಾಡಲು ಸಶಸ್ತ್ರ ಪಡೆಗಳಿಗೆ ಸೇರುವಂತೆ ಸೂಚಿಸಿದೆ. ನನ್ನ ಸೂಚನೆ ಪಾಲಿಸಿದ. ಅಲ್ಲದೆ ಫಿಟ್ನೆಸ್ ಮತ್ತು ಕ್ರೀಡೆಗಳತ್ತ ಗಮನಹರಿಸಿದರು ಎಂದು ಹೇಳಿದ್ದಾರೆ.

ರಜೆಯ ಬಗ್ಗೆ CRPF ಅಧಿಕಾರಿಗಳಿಂದ ನಮಗೆ ಹಲವಾರು ಪತ್ರಗಳು ಬಂದವು ಮತ್ತು ಅದಕ್ಕೆ ಅನುಗುಣವಾಗಿ ಉತ್ತರಿಸಲಾಯಿತು. ಏಕೆಂದರೆ ಕಲ್ಯಾಣ್ ಬಿಗಿ ಬಾಸ್ ನಲ್ಲಿದ್ದರು. ಈಗ, ಅವರು ಬಿಗ್ ಬಾಸ್ 9 ಗೆದ್ದಿದ್ದಾರೆ, ಲಕ್ಷಾಂತರ ಜನರ ಹೃದಯಗಳನ್ನು ಗೆದ್ದಿದ್ದಾರೆ. ನಮಗೆ ತುಂಬಾ ಸಂತೋಷವಾಗಿದೆ. ಕಲ್ಯಾಣ್ ಕೇವಲ ಬಿಗ್ ಬಾಸ್ ಟ್ರೋಫಿಯನ್ನು ಎತ್ತಿ ಹಿಡಿದಿಲ್ಲ; ಆತ ತನ್ನ ದೃಢನಿಶ್ಚಯ, ಶಿಸ್ತು ಮತ್ತು ಅಚಲ ನಂಬಿಕೆಯಿಂದ ಗೌರವ, ನಂಬಿಕೆ ಮತ್ತು ಇತಿಹಾಸದಲ್ಲಿ ಸ್ಥಾನ ಗಳಿಸಿದ್ದಾರೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಗಿಲು ಅಕ್ರಮ ಮನೆಗಳ ತೆರವು ಪ್ರಕರಣ: ಪರಿಹಾರ ಕೋರಿ ಹೈಕೋರ್ಟ್​​ಗೆ ಪಿಐಎಲ್ ಸಲ್ಲಿಕೆ

ಬಿಡಿಎ ಹಿಂದೆಂದೂ ಮಾಡಲಾಗದ ಐತಿಹಾಸಿಕ ಯೋಜನೆಗಳನ್ನು ಹಮ್ಮಿಕೊಂಡಿದೆ: ಡಿಕೆ ಶಿವಕುಮಾರ್

ಶಾಂತಿ ಮಾತುಕತೆಗಳ ಮಧ್ಯೆ ಉದ್ವಿಗ್ನತೆ: ಉಕ್ರೇನ್ ದಾಳಿ, ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದ 24 ಮಂದಿ ಸಾವು- ರಷ್ಯಾ

2026 ರಲ್ಲಿ "ರಾಜಕೀಯ ಬಡ್ತಿ": ಗೃಹ ಸಚಿವ ಪರಮೇಶ್ವರ ಹೇಳಿಕೆ ಹಿಂದಿನ ಮರ್ಮ ಏನು? Video

ವಿಜಯಪುರ: ಪ್ರತಿಭಟನೆ ತಡೆಯಲು ಮುಂದಾದ PSI, ಪೇದೆಗೆ ಸ್ವಾಮೀಜಿ ಕಪಾಳಮೋಕ್ಷ!

SCROLL FOR NEXT