ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಅಂತಿಮ ಘಟ್ಟ ತಲುಪಿದ್ದು, ಫಿನಾಲೆ ವಾರ ಚಾಲ್ತಿಯಲ್ಲಿರುವಂತೆಯೇ ವಿರೋಧಿಗಳಿಗೆ ನಟ ಕಿಚ್ಚಾ ಸುದೀಪ್ ನೀಡಿರುವ ಹೇಳಿಕೆ ಭಾರಿ ವೈರಲ್ ಆಗುತ್ತಿದೆ.
ಹೌದು.. ಬಿಗ್ ಬಾಸ್ ಕನ್ನಡ ಸೀಸನ್ 12 ನಿತ್ಯ ನಾನಾ ಕಾರಣಗಳಿಂದ ಸುದ್ದಿಗೆ ಗ್ರಾಸವಾಗುತ್ತಿದ್ದು, ಕಳೆದ ವಾರದ ವೀಕೆಂಡ್ ಪಂಚಾಯಿತಿಯಲ್ಲಿ ನಟ ಕಿಚ್ಚಾ ಸುದೀಪ್ ಈ ಸೀಸನ್ ಕಿಚ್ಚನ ಚಪ್ಪಾಳೆಯನ್ನು ದ್ರುವಂತ್ ಅವರಿಗೆ ನೀಡಿದ್ದರು.
ನಟ ಕಿಚ್ಚಾ ಸುದೀಪ್ ಮತ್ತು ಬಿಗ್ ಬಾಸ್ ಆಡಳಿತ ವಿಭಾಗದ ಈ ನಿರ್ಧಾರ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಪ್ರಮುಖವಾಗಿ ನಟ ಗಿಲ್ಲಿ ಅಭಿಮಾನಿಗಳಿಗೆ ಅಸಮಾಧನ ಉಂಟು ಮಾಡಿದ್ದು, ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಟ ಕಿಚ್ಚಾ ಸುದೀಪ್ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
‘ಧ್ರುವಂತ್ ಸಾಕಷ್ಟು ಮನರಂಜನೆ ನೀಡಿದ್ದಾರೆ. ಅವರ ವಿಟಿ ವಿಶೇಷವಾಗಿ ಇರುತ್ತದೆ’ ಎಂದು ಸುದೀಪ್ ಬಿಗ್ ಬಾಸ್ ವೇದಿಕೆ ಮೇಲೆ ಹೇಳಿದ್ದರು. ಇದು ಗಿಲ್ಲಿ ಫ್ಯಾನ್ಸ್ನ ಕೆರಳಿಸಿದೆ. ‘ಸೀಸನ್ ಆರಂಭದಿಂದಲೂ ಗಿಲ್ಲಿ ಮನರಂಜನೆ ನೀಡುತ್ತಾ ಬಂದವರು. ಧ್ರುವಂತ್ಗೆ ಹೋಲಿಸಿದರೆ ಗಿಲ್ಲಿ ತುಂಬಾನೇ ಬೆಟರ್’ ಎಂದು ಗಿಲ್ಲಿ ಫ್ಯಾನ್ಸ್ ವಾದ ಮುಂದಿಡುತ್ತಿದ್ದಾರೆ. ಸುದೀಪ್ ಅವರನ್ನು ಟೀಕಿಸುವ ಕೆಲಸ ಕೂಡ ಆಗಿದೆ.
ತಿರುಗೇಟು ಕೊಟ್ಟ ಕಿಚ್ಚನ ಅಭಿಮಾನಿಗಳು
ಇನ್ನು ಸುದೀಪ್ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ಅವರ ಅಭಿಮಾನಿಗಳು ಕೂಡ ಖಡಕ್ ತಿರುಗೇಟು ನೀಡಿದ್ದು, ಸುದೀಪ್ ಅವರು 10ನೇ ಸೀಸನ್ ಅಲ್ಲಿ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಆ ವಿಡಿಯೋ ಹಂಚಿಕೊಂಡು ಮತ್ತೆ ವೈರಲ್ ಮಾಡಲಾಗುತ್ತಿದೆ.
ಕಿತ್ತೋದ್ ಕೆಲಸ ಅಂತೂ ಮಾಡಿಲ್ಲ, ನನ್ನಿಂದ ಕೆಲವರ ಹೊಟ್ಟೆಪಾಡು ನಡೀತಿದೆ
‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸಂದರ್ಭದಲ್ಲೂ ಸುದೀಪ್ ಅವರನ್ನು ಸೋಶಿಯಲ್ ಮೀಡಿಯದಲ್ಲಿ ಟೀಕಿಸಲಾಗಿತ್ತು. ಈ ಟೀಕೆಗಳ ಸಂದರ್ಭದಲ್ಲಿ ಸುದೀಪ್ ಒಂದು ಮಾತನ್ನು ಹೇಳಿದ್ದರು. ಈ ಮಾತುಗಳೇ ಇದೀಗ ಮತ್ತೆ ವೈರಲ್ ಆಗುತ್ತಿದೆ.
'ನನಗಾಗೇ ದುಡ್ಡು ಕೊಟ್ಟು ಸೃಷ್ಟಿಸಿದ ಟ್ರೋಲ್ ಪೇಜ್ಗಳಿವೆ. ನಾನು ಗುಡ್ ಮಾರ್ನಿಂಗ್ ಎಂದರೆ ನಿನ್ನ ಗುಡ್ ಮಾರ್ನಿಂಗ್ ಯಾರಿಗೆ ಬೇಕು ಎನ್ನುತ್ತಾರೆ. ಅವರು ನನ್ನ ಬಗ್ಗೆ ಮಾತನಾಡುತ್ತಾರೆ. ನಾನು ಮಜಾ ತೆಗೆದಿಕೊಳ್ಳುತ್ತೇನೆ. ಕಿತ್ತೋದ್ ಕೆಲಸ ನಾನಂತೂ ಮಾಡಿಲ್ಲ. ಅವರ ಟ್ರೋಲ್ ಬಗ್ಗೆ ನಂಗೆ ಬೇಸರ ಇಲ್ಲ. ಏಕೆಂದರೆ ನನ್ನಿಂದ ಅವರ ಹೊಟ್ಟೆ ಪಾಡು ನಡೆಯುತ್ತಿದೆ' ಎಂದು ಟ್ರೋಲರ್ಸ್ ಗಳಿಗೆ ಸುದೀಪ್ ಖಡಕ್ ತಿರುಗೇಟು ನೀಡಿದ್ದರು.