ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್ 12' ಸದ್ಯ ಫಿನಾಲೆ ಹಂತಕ್ಕೆ ತಲುಪಿದೆ. ಬಿಗ್‌ಬಾಸ್ ಗೆಲ್ಲುವ ಅದೃಷ್ಟ ಯಾರಿಗಿದೆ? ಎಂಬ ಚರ್ಚೆ ಎಲ್ಲೆಲ್ಲೂ ನಡೆಯುತ್ತಿದೆ. ಈ ಬಾರಿ ಎಲ್ಲಿ ನೋಡಿದರೂ ಗಿಲ್ಲಿ- ಗೆಲ್ಲಿ ಎನ್ನುವ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿದೆ.
ತನ್ನದೇ ಆದ ಹಳ್ಳಿ ಸೊಗಡಿನ ಮಾತು, ಹಾಸ್ಯದ ಮೂಲಕ ಎದುರಾಳಿಗೆ ತಿವಿಯುವ ತಂತ್ರ, ಡ್ಯಾನ್ಸ್ ಹೀಗೆ ಕೋಟ್ಯಾಂತರ ಜನರನ್ನು ರಂಜಿಸುತ್ತಿರುವ ಗಿಲ್ಲಿ ನಟನೇ ನೆಚ್ಚಿನ ಫೇವರಿಟ್ ಸ್ಪರ್ಧಿಯಾಗಿದ್ದಾರೆ. ಅವರ ಅಭಿಮಾನಿಗಳಿಂದ ಹಿಡಿದು, ಬಿಗ್ಬಾಸ್ನಿಂದ ಹೊರಕ್ಕೆ ಬಂದಿರುವ ಸ್ಪರ್ಧಿಗಳ ಬಾಯಲ್ಲಿಯೂ ಗಿಲ್ಲಿ ಹೆಸರೇ ಹೆಚ್ಚಾಗಿ ಕೇಳಿಬರುತ್ತಿದೆ.
ಗಿಲ್ಲಿ ನಟ ಗೆದ್ದು, ಬಿಗ್‌ಬಾಸ್ ಕನ್ನಡ ಸೀಸನ್ 12 ಕಪ್ ಎತ್ತಬೇಕು ಎಂಬುದು ಕೋಟಿ ಕೋಟಿ ಅಭಿಮಾನಿಗಳ ಅಪೇಕ್ಷೆಯೂ ಆಗಿದೆ. ಗಿಲ್ಲಿ ನಟ ಬಿಗ್‌ಬಾಸ್ ಗೆಲ್ಲಬೇಕು ಅಂತಾ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಅಭಿಯಾನ ಶುರುವಾಗಿದೆ.
ಮಂಡ್ಯ ಸೇರಿದಂತೆ ವಿವಿಧ ಕಡೆಗಳಲ್ಲಿ ಕಟೌಟ್ ಹಾಕುವ ಮೂಲಕ ಗಿಲ್ಲಿ ನಟನ ಪರ ವೋಟಿಂಗ್ ಮಾಡಲಾಗುತ್ತಿದೆ. ಗಿಲ್ಲಿ ನಟ ಬಡವರ ಮನೆಯ ಹುಡುಗ ಆಗಿದ್ದು, ಗಿಲ್ಲಿ ಗೆಲ್ಲಬೇಕು ಎಂಬ ಕೂಗು ಹೆಚ್ಚಾಗುತ್ತಿದೆ. ಮಂಡ್ಯ ಮೂಲದ ಗಿಲ್ಲಿ ನಟ ಆರಂಭದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಖ್ಯಾತಿ ಪಡೆದಿದ್ದರು. ಅವರ ಶಾರ್ಟ್ ಫಿಲ್ಮ್ ' ನಲ್ಲಿ ಮೂಳೆ' ಕೋಟಿ ಕೋಟಿ ವೀಕ್ಷಣೆ ಪಡೆದು ರಾತ್ರೋ ರಾತ್ರಿ ಗಿಲ್ಲಿ ಕನ್ನಡಿಗರ ಮನದಲ್ಲಿ ಸ್ಥಾನ ಪಡೆದರು. ಅಲ್ಲಿಂದ ಆರಂಭವಾದ ಅವರ ಕಾಮಿಡಿ ಹಲವು ರಿಯಾಲಿಟಿ ಶೋ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕುವಂತೆ ಮಾಡಿತು.
ಹೀಗೆ ತನ್ನದೇ ಆದ ಗಿಲ್ಲಿ ನಟ ಹೊಸ ಇತಿಹಾಸ ಬರೆಯಲು ಬಿಗ್‌ಬಾಸ್ ಕನ್ನಡ ಸೀಸನ್ 12 ಮನೆಗೆ ಎಂಟ್ರಿ ಕೊಟ್ಟಿದ್ದೂ ಆಗಿದೆ. ಈಗಾಗಲೇ ಗಿಲ್ಲಿ ನಟ ಗೆಲ್ಲೋದು ಗ್ಯಾರಂಟಿ ಅಂತಾ ಎಲ್ಲರೂ ಅಂತಿದ್ದಾರೆ. ಈಗ ಮನೆಯಲ್ಲಿ ಅಶ್ವಿನಿ, ಗಿಲ್ಲಿ, ರಘು, ರಕ್ಷಿತಾ, ಕಾವ್ಯಾ, ಧ್ರುವಂತ್ ಮತ್ತು ಧನುಶ್ ಇದ್ದಾರೆ. ಮಿಡ್ ವೀಕ್ ಎಲಿಮಿನೇಷನ್ ಸಹ ನಡೆಯಲಿದೆ ಎಂದು ಈಗಾಗಲೇ ಹೇಳಲಾಗಿದೆ. ಧನುಷ್ ಅಥವಾ ಕಾವ್ಯಾ ಇವರಿಬ್ಬರಲ್ಲಿ ಒಬ್ಬರು ಮಿಡ್ ನೈಟ್ ಎಲಿಮಿನೇಷನ್ ಆಗಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.
ವೋಟ್ ಲೈನ್ಗಳು ಈಗಾಗಲೇ ಓಪನ್ ಆಗಿದ್ದು, ಎಲ್ಲರ ಅಭಿಮಾನಿಗಳು ಸಹ ತಮ್ಮ ಮೆಚ್ಚಿನ ಸ್ಪರ್ಧಿಯ ಪರವಾಗಿ ಓಟು ಹಾಕಲು ಆರಂಭಿಸಿದ್ದಾರೆ. ಈ ಮಧ್ಯೆ ಗಿಲ್ಲಿ ನಟನ ಪರವಾಗಿ ಅವರ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ ಅವರು ಮತ ಯಾಚನೆ ಮಾಡಿದ್ದಾರೆ. ಫಿನಾಲೆ ಜನವರಿ 17 18ರಂದು ನಡೆಯಲಿದೆ ಎನ್ನಲಾಗುತ್ತಿದೆ. ಈ ಶೋನ ವಿನ್ನರ್ ಯಾರಾಗ್ತಾರೆ ಅನ್ನೋದು ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.