ಬಿಗ್ ಬಾಸ್ ಕನ್ನಡ ಸೀಜನ್ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ನಾಳೆ ಮಧ್ಯರಾತ್ರಿ ಕನ್ನಡ ಬಿಗ್ ಬಾಸ್ ನ 12ನೇ ಆವೃತ್ತಿಯ ವಿನ್ನರ್ ಹೆಸರು ಘೋಷಣೆಯಾಗಲಿದೆ. ಈ ಮಧ್ಯೆ ಬಿಗ್ ಬಾಸ್ ಕನ್ನಡ ನಿರೂಪಕ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ವಿನ್ನರ್ ಪಡೆದ ವೋಟುಗಳ ಅಂಕಿ ಅಂಶವನ್ನು ತೋರಿಸಿದರು. ಅದರಲ್ಲಿ ವಿನ್ನರ್ ಗೆ ಸಿಕ್ಕಿದ್ದು ಬರೋಬ್ಬರಿ 37 ಕೋಟಿಗೂ ಹೆಚ್ಚು ಮತಗಳು ಬಂದಿದೆ. ಅಲ್ಲದೆ ವಿನ್ನರ್ ಗೂ ರನ್ನರ್ ಗೂ ಮಧ್ಯೆ ಅಂತರ ಕಡಿಮೆ ಇದೆ ಎಂದು ಸುದೀಪ್ ಹೇಳಿದ್ದಾರೆ. ಕಳೆದ ಆವೃತ್ತಿಯಲ್ಲಿ ಹನುಮಂತ ವಿನ್ನರ್ ಆಗಿದ್ದು ಅವರು 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ಯಾರೂ ಮುಟ್ಟಲಾಗದಂತ ದಾಖಲೆಯ ವೋಟುಗಳು ವಿನ್ನರ್ ಗೆ ಸಿಕ್ಕಿದೆ.
ಇನ್ನು ಬಿಗ್ ಬಾಸ್ ಕನ್ನಡದ ಟಾಪ್ 6ರಲ್ಲಿ ಅಶ್ವಿನಿ ಗೌಡ, ಗಿಲ್ಲಿ ನಟ, ರಘು, ಧನುಷ್, ರಕ್ಷಿತಾ ಮತ್ತು ಕಾವ್ಯ ಇದ್ದಾರೆ. ಈ ಪೈಕಿ ಇಂದು ಇಬ್ಬರು ಹೊರಬರಬಹುದು. ನಾಳಿನ ಫೈನಲ್ ಸಂಚಿಕೆಯಲ್ಲಿ ಯಾರ್ಯಾರು ಇರಬಹುದು ಎಂಬ ಊಹಾಪೋಹಗಳು ಶುರುವಾಗಿದೆ. ಗಿಲ್ಲಿ ನಟ, ರಕ್ಷಿತಾ ಮತ್ತು ಅಶ್ವಿನಿ ಗೌಡ ಟಾಪ್ 3ರಲ್ಲಿ ಇರುವ ಸಾಧ್ಯತೆ ಹೆಚ್ಚಾಗಿದೆ. ಅಂತಿಮವಾಗಿ ಗಿಲ್ಲಿ ನಟ ಮತ್ತು ರಕ್ಷಿತಾ ಮಧ್ಯೆ ನೇರ ಹಣಾಹಣಿ ಇರುವ ಸಾಧ್ಯತೆ ಇದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಗಿಲ್ಲಿ ನಟನ ಪರ ಪ್ರಚಾರಗಳು ಜೋರಾಗಿ ನಡೆಯುತ್ತಿವೆ. ಮತ್ತೊಂದೆಡೆ ರಕ್ಷಿತಾ ಪರ ಕರಾವಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಹಾಕುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.