ಬಿಬಿಕೆ 12 ಫಿನಾಲೆ ಇಂದು ನಡೆಯುತ್ತಿದ್ದು ಟಾಪ್ 6ರಲ್ಲಿ ಅಶ್ವಿನಿ ಗೌಡ, ಗಿಲ್ಲಿ ನಟ, ರಕ್ಷಿತಾ, ಕಾವ್ಯ, ರಘು ಮತ್ತು ಧನುಷ್ ಇದ್ದರು. ಆದರೆ ಟಾಪ್ 6ರಲ್ಲಿ ಅತೀ ಕಡಿಮೆ ಮತ ಬಂದಿದ್ದರಿಂದ ಪ್ರಬಲ ಸ್ಪರ್ಧಿ ಧನುಷ್ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಾಸ್ಟರ್ ಎಂದೇ ಖ್ಯಾತರಾಗಿದ್ದ ಧನುಷ್ ಒಟ್ಟಾರೆ 1,27,35,179 ಮತಗಳನ್ನು ಪಡೆದಿದ್ದಾರೆ. ಬಿಗ್ ಬಾಸ್ನಲ್ಲಿ ಸದ್ಯ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕಾವ್ಯಾ, ರಘು ಇದ್ದಾರೆ. ಈ ಐವರ ಪೈಕಿ ಯಾರು ಕಪ್ ಎತ್ತುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.