ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿ ಅನುಷಾ ಹೆಗಡೆ ಅವರು ತಮ್ಮ ವೈವಾಹಿಕ ಜೀವನದ ಒಂದು ಅಧ್ಯಾಯವನ್ನ ಮುಗಿಸಿದ್ದಾರೆ. 2020ರಲ್ಲಿ ತೆಲುಗು ನಟ ಪ್ರತಾಪ್ ಸಿಂಗ್ ಅವರೊಂದಿಗೆ ನಡೆದಿದ್ದ ಅವರ ಮದುವೆಯು ಈಗ ವಿಚ್ಛೇದನದೊಂದಿಗೆ ಕೊನೆಗೊಂಡಿದೆ.
ಮೂರು ವರ್ಷದ ಮದುವೆ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಈ ಬಗ್ಗೆ ಅವರೇ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿ ಅವರು ನಟ ಪ್ರತಾಪ್ ಜೊತೆ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದರು. ಇದೀಗ ನಟಿ ಡಿವೋರ್ಸ್ ತಗೊಂಡಿರೋದಾಗಿ ಹೇಳಿದ್ದಾರೆ. ಈ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ರಾಧಾ ರಮಣ ಧಾರಾವಾಹಿಯಲ್ಲಿ ವಿಲನ್ ದೀಪಿಕಾ ಪಾತ್ರದಲ್ಲಿ ಅನುಷಾ ಹೆಗಡೆ ನಟಿಸುತ್ತಿದ್ದರು. ಸ್ಕಂದ ಅಶೋಕ್, ಶ್ವೇತಾ ಆರ್ ಪ್ರಸಾದ್ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ನಿಮಗೆ ಈಗಾಗಲೇ ತಿಳಿದಿರುವಂತೆ, 2023 ರಿಂದ ನನ್ನ ಮದುವೆ, ದಾಂಪತ್ಯ ಜೀವನದಲ್ಲಿ ಬದಲಾವಣೆಗಳು ನಡೆಯುತ್ತಿದ್ದವು. 2025 ರಲ್ಲಿ ನಾವು ಕಾನೂನುಬದ್ಧವಾಗಿ ಬೇರೆಯಾಗಿದ್ದೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು.
ಈ ಬಗ್ಗೆ ಹೆಚ್ಚಿನ ಚರ್ಚೆ ಅಥವಾ ಪ್ರಶ್ನೆಗಳನ್ನು ಮಾಡಬೇಡಿ ಎಂದು ವಿನಂತಿಸುತ್ತೇನೆ ನನ್ನ ಜೀವನದ ಈ ಅಧ್ಯಾಯವು ಪರಸ್ಪರ ಗೌರವ ಸಾಮರಸ್ಯದೊಂದಿಗೆ ಮುಕ್ತಾಯಗೊಂಡಿದೆ. ನಾನು ಈಗ ಶಾಂತಿ ಮತ್ತು ಸ್ಪಷ್ಟತೆಯೊಂದಿಗೆ ನನ್ನ ವೃತ್ತಿಜೀವನ, ನನ್ನ ಕುಟುಂಬ ಮತ್ತು ವೈಯಕ್ತಿಕ ಬೆಳವಣಿಗೆಯ ಕಡೆಗೆ ಗಮನ ಹರಿಸಲು ನಿರ್ಧರಿಸಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.