ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ವೇಳೆ ಅವಾಚ್ಯ ಪದ ಬಳಕೆ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಕಿಚ್ಚಾ ಸುದೀಪ್ ಕೊನೆಗೂ ಸ್ಪಷ್ಟನೆ ನೀಡಿದ್ದು, ಇದಕ್ಕೆ ಜೋಗಿ ಪ್ರೇಮ್ ಕಾರಣ ಎಂದು ಹೇಳಿದ್ದಾರೆ.
ಹೌದು.. ಕಿಚ್ಚ ಸುದೀಪ್ ಸಿಸಿಎಲ್ ಪಂದ್ಯದಲ್ಲಿ ಅವಾಚ್ಯ ಶಬ್ದ ಬಳಕೆ ವಿವಾದಕ್ಕೆ ಸ್ಪಷ್ಟನೆ ನೀಡಿದ್ದು, ಈ ಪದ ಬಳಕೆಗೆ ಜೋಗಿ ಪ್ರೇಮ್ ಕಾರಣ ಎಂದಿದ್ದಾರೆ.
ಸಿಸಿಎಲ್ನಲ್ಲಿ ಅವರು ಕರ್ನಾಟಕ ಬುಲ್ಡೋಜರ್ ತಂಡವನ್ನು ಸುದೀಪ್ ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ಪಂದ್ಯ ಆಡುವಾಗ ಅವರು ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ.
ರಾಜ್ ಬಿ ಶೆಟ್ಟಿ ನಟನೆಯ ‘ರಕ್ಕಸಪೂರದೊಳ್’ ಸಿನಿಮಾ ಟ್ರೈಲರ್ ಲಾಂಚ್ ಈವೆಂಟ್ ನಲ್ಲಿ ಪಾಲ್ಗೊಂಡು ಮಾತನಾಡಿದ ಕಿಚ್ಚಾ ಸುದೀಪ್, ಈ ಪದ ಬಳಕೆಗೆ ಜೋಗಿ ಪ್ರೇಮ್ ಕಾರಣ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿರ್ದೇಶಕ ಜೋಗಿ ಪ್ರೇಮ್ ಅವರು ಮೊದಲು ಈ ವಿಷಯ ತೆಗೆದರು. ಈ ಮೊದಲು ಜೋಗಿ ಪ್ರೇಮ್ ಅವರು ಏನಾದರೂ ಮಾತನಾಡುವಾಗ ಕೆಟ್ಟ ಪದ ಬಳಕೆ ಮಾಡಿದರೆ ಸುದೀಪ್ ಅದನ್ನು ಪ್ರಶ್ನೆ ಮಾಡುತ್ತಿದ್ದರಂತೆ. ಹಾಗೆಲ್ಲ ಏಕೆ ಮಾತನಾಡಿದೆ ಎಂದು ಕೇಳುತ್ತಿದ್ದರಂತೆ. ಈಗ ಸುದೀಪ್ ಕೂಡ ಬಳಕೆಗೆ ಅರ್ಹವಲ್ಲದ ಶಬ್ದ ಹೇಳಿದ್ದನ್ನು ಕೇಳಿ ಖುಷಿ ಆಗಿದೆ ಎಂದರು.
‘ನಾನು ಬರುವಾಗ ಒಂದು ವಿಡಿಯೋ ನೋಡಿದೆ. ಇಡೀ ಕರ್ನಾಟಕ ವಿಡಿಯೋ ನೋಡಿದೆ. ಆಗ ಸುದೀಪ್ ಕೆಟ್ಟ ಪದ ಬಳಕೆ ಮಾಡಿದ್ರೆ ಬೈತಿದ್ರು. ಆದ್ರೆ ಈಗ ಸುದೀಪ್ ಕೂಡ ನಮ್ಮ ರೂಟ್ಗೆ ಬಂದ್ರಲ್ಲ ಎಂಬುದೇ ಖುಷಿ. ಅವರು ಅದನ್ನು ಹೇಳಿದ ಸ್ಟೈಲ್ ಚೆನ್ನಾಗಿತ್ತು’ ಎಂದು ಪ್ರೇಮ್ ಹೇಳಿದರು.
ತಿರುಗೇಟು ಕೊಟ್ಟ ಪ್ರೇಮ
‘ಮೊನ್ನೆ ಏನು ವೈರಲ್ ಆಯ್ತಲ್ಲ ರೀಲ್ ಅದಕ್ಕೆ ಕಾರಣ ಗುರುಗಳು ಪ್ರೇಮ್. ಸೆಮಿ ಫೈನಲ್ ಅಲ್ಲಿ ಏನಾದರೂ ಬಂದರೆ ಅದಕ್ಕೆ ಕಾರಣನೂ ಪ್ರೇಮ್ ಅವರೇ’ ಎಂದು ಸುದೀಪ್ ನಿರ್ದೇಶಕ ಜೋಗಿ ಪ್ರೇಮ್ ಕಾಲೆಳೆದರು.