ರಜನಿಕಾಂತ್ 
ಸಿನಿಮಾ ಸುದ್ದಿ

ರಜನಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಕೊನೆಗೂ 'ಜೈಲರ್​ 2' ರಿಲೀಸ್​ ಡೇಟ್​ ಫಿಕ್ಸ್

ಜೈಲರ್ 2 ಚಿತ್ರದ ನಿರ್ಮಾಪಕರು ಆಕ್ಷನ್-ಪ್ಯಾಕ್ಡ್ ಪ್ರೋಮೋದೊಂದಿಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಚೆನ್ನೈ: ತಮಿಳು ಸೂಪರ್​ಸ್ಟಾರ್​ ರಜನಿಕಾಂತ್​ ಅವರು ಗುರುವಾರ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ತಲೈವಾ ಅಭಿನಯದ ಹಾಗೂ ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನದ ಬಹುನಿರೀಕ್ಷಿತ 'ಜೈಲರ್ 2' ಚಿತ್ರದ ರಿಲೀಸ್​ ಡೇಟ್​ ಕೊನೆಗೂ ಹೊರಬಿದ್ದಿದೆ.

ಜೈಲರ್ 2 ಚಿತ್ರದ ನಿರ್ಮಾಪಕರು ಆಕ್ಷನ್-ಪ್ಯಾಕ್ಡ್ ಪ್ರೋಮೋದೊಂದಿಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ. ಬಹುನಿರೀಕ್ಷಿತ 'ಜೈಲರ್​ 2' ಸಿನಿಮಾ ಅಕ್ಟೋಬರ್ 15, 2026 ರಂದು ಬಿಡುಗಡೆಯಾಗಲಿದೆ.

ಕಲಾನಿಧಿ ಮಾರನ್ ನಿರ್ಮಿಸಿರುವ ಈ ಹೈಬಜೆಟ್​ ಚಿತ್ರದಲ್ಲಿ ರಜನಿ ಅವರ ಜೊತೆಗೆ ಇತರ ಚಿತ್ರರಂಗದ ದಿಗ್ಗಜ ನಟರು ಕೂಡ ನಟಿಸಿದ್ದು, ವಿಶೇಷ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಕೆರಳಿಸಿದೆ.

ಒಂದಷ್ಟು ವಿಳಂಬದ ಬಳಿಕ ರಿಲೀಸ್​ ದಿನಾಂಕವನ್ನು ಹಂಚಿಕೊಂಡಿರುವ ಚಿತ್ರತಂಡ, ಇದೇ ಅಕ್ಟೋಬರ್​ 15ಕ್ಕೆ 'ಜೈಲರ್​ 2' ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ತಿಳಿಸಿದೆ. ಇದರೊಟ್ಟಿಗೆ ರಜಿನಿ ಅಭಿಮಾನಿಗಳ ಹುಬ್ಬೇರಿಸುವಂತ ಟೀಸರ್​ವೊಂದನ್ನು ಕೂಡ ಹರಿಬಿಟ್ಟಿದೆ.

ಟೀಸರ್​ ತುಣುಕಿನಲ್ಲಿ ರಜಿನಿ ಅವರದ್ದು ಹೊಸ ಲುಕ್​ ಎನ್ನಿಸುವಂತೆ ಕಂಡುಬಂದಿದ್ದೇ ಆದರೂ ಚಿತ್ರತಂಡ ಅಷ್ಟಾಗಿ ಯಾವುದನ್ನೂ ರಿವೀಲ್​ ಮಾಡಿಲ್ಲ. ಟೀಸರ್​ನಲ್ಲಿ ಬಿಜಿಎಂ ಸದ್ದು ಮಾಡಿದರೆ, ಯಾರೆಲ್ಲ ಕಲಾವಿದರು ನಟಿಸಿದ್ದಾರೋ, ಅವರ ಪಾತ್ರಗಳ ಒಂದು ಸೆಕೆಂಡ್​ನಲ್ಲಿ ಪಾಸಿಂಗ್ ಶಾಟ್​ ಆಗಿ ತೋರಿಸಲಾಗಿದೆ.

ಚಿತ್ರಕ್ಕೆ ಎಂದಿನಂತೆ ಸೂಪರ್​ಹಿಟ್​ ಮ್ಯೂಸಿಕಲ್​ ಕಂಪೋಸರ್​ ಅನಿರುದ್ಧ್​ ರವಿಚಂದ್ರನ್ ಅವರೇ ಸಂಗೀತ ನೀಡಿದ್ದಾರೆ. ರಜಿನಿಕಾಂತ್​, ಮಿರ್ನಾ ಮೆನನ್​, ಮೋಹನ್​ ಲಾಲ್​, ಹ್ಯಾಟ್ರಿಕ್​ ಹೀರೋ ಶಿವಕಾಜ್​ಕುಮಾರ್​, ಹೃತಿಕ್​ ರೋಷನ್​, ಮೋಹನ್​ ಲಾಲ್​, ರಮ್ಯ ಕೃಷ್ಣನ್​ ಸೇರಿದಂತೆ ದಿಗ್ಗಜ ಕಲಾವಿದರೇ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರೀಕ್ಷೆ ಅಕ್ರಮ; ಜಾರ್ಖಂಡ್ ಸಿಎಂ ಸೊರೇನ್, ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಪ್ರತಿಕೃತಿ ದಹಿಸಿ JPSC-JSSC ಆಕಾಂಕ್ಷಿಗಳ ಪ್ರತಿಭಟನೆ

NLSIU ಘಟಿಕೋತ್ಸವ: NALSAR ಮಾದರಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಆಹ್ವಾನ ವಿರೋಧಿಸಿದ ಬೆಂಗಳೂರು ಉನ್ನತ ಕಾನೂನು ಕಾಲೇಜು!

ಪಂಜಾಬ್: ತಪ್ಪಿದ ಭಾರಿ ಅನಾಹುತ; ಉಗ್ರ ದಾಳಿ ಸಂಚು ವಿಫಲ, 690 ಗ್ರಾಂ IED ಪೊಲೀಸ್ ವಶಕ್ಕೆ

SIR ಪ್ರಕ್ರಿಯೆ ಯಶಸ್ಸು: ಬಿಹಾರ ಚುನಾವಣೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜಪಾನ್‌ಗಳನ್ನು ಮೀರಿಸಿದೆ: CEC ಜ್ಞಾನೇಶ್ ಕುಮಾರ್

ಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video