ವಾರಣಾಸಿ ಚಲನಚಿತ್ರದಲ್ಲಿ ಮಹೇಶ್ ಬಾಬು 
ಸಿನಿಮಾ ಸುದ್ದಿ

Varanasi Movie: ವಾರಣಾಸಿ ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು! ವೈರಲ್ ಆಗಿರುವ ಫೋಟೋ ರಿಯಾಲಿಟಿ ಏನು?

ಸುಮಾರು 1000 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಮಹೇಶ್ ಬಾಬು ಅವರ ವಾರಾಣಸಿ ಚಿತ್ರದ ಬಹುತೇಕ ಶೋಟಿಂಗ್ ಮುಗಿದಿದೆ ಎನ್ನಲಾಗಿದೆ. ಇನ್ನು ಈ ಚಿತ್ರದ ಚಿತ್ರೀಕರಣದ್ದು ಎನ್ನಲಾದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹೇಶ್ ಬಾಬು ಅಭಿಮಾನಿಗಳನ್ನ ಹುಬ್ಬೇರುವಂತೆ ಮಾಡಿದೆ.

Varanasi Movie: ಸುಮಾರು 1000 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಟಾರ್ (Super Star) ಮಹೇಶ್ ಬಾಬು (Mahesh Babu) ಹಾಗೂ ರಾಜಮೌಳಿ (Rajamouli) ಕಾಂಬಿನೇಷನ್‌ನ ವಾರಾಣಸಿ ಚಲನಚಿತ್ರದ (Varanasi Movie) ಬಹುತೇಕ ಶೋಟಿಂಗ್ ಮುಗಿದಿದೆ ಎನ್ನಲಾಗಿದೆ. ಇನ್ನು ಈ ಚಿತ್ರದ ಚಿತ್ರೀಕರಣದ್ದು ಎನ್ನಲಾದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹೇಶ್ ಬಾಬು ಅಭಿಮಾನಿಗಳನ್ನ ಹುಬ್ಬೇರುವಂತೆ ಮಾಡಿದೆ. ಹಾಗಾದ್ರೆ, ವೈರಲ್ ಆದ ಚಿತ್ರದಲ್ಲಿ ಏನಿದೆ?

ರಾಮನಾಗಿ ಸೂಪರ್ ಸ್ಟಾರ್?
ಟಾಲಿವುಡ್‌ನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು, ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಬಹು ನಿರೀಕ್ಷಿತ ವಾರಾಣಸಿ ಚಲನಚಿತ್ರದಲ್ಲಿ ಪ್ರಭು ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದಾರೆ ಎನ್ನಲಾದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದ್ರಂತೆ ವೈರಲ್ ಆದ ಚಿತ್ರದಲ್ಲಿ ಮಹೇಶ್ ಬಾಬು, ಕೇಸರಿ ಬಣ್ಣದ ಧೋತಿಯಲ್ಲಿ ಭುಜದ ಮೇಲೆ ಬಿಲ್ಲು ಹೊಂದಿರುವಂತೆ ಕಾಣಿಸಿಕೊಂಡಿದಾರೆ. ಏತನ್ಮಧ್ಯೆ, ವೈರಲ್ ಆಗಿರುವ ಚಿತ್ರದ ಸತ್ಯ ಸತ್ಯತೆ ಅಧಿಕೃತವಾಗದಿದರು ಸಹ, ಅಭಿಮಾನಿಗಳ ಕಾತುರತೆಯನ್ನ ಹೆಚ್ಚಿಸಲು ಇದು ಸಾಕಾಗಿತ್ತು. ಆದ್ರೆ, ಈ ಚಿತ್ರವನ್ನು ಕಂಡ ಕೆಲವರು ಇದು ಎಐ ಮೂಲಕ ರಚಿಸಲಾಗಿದೆ ಎಂದು ಹೇಳುತ್ತಿದ್ದಾರೆ.

ಮುಂದುವರೆದು, ಎಐ ಚಿತ್ರ ಎಂದವರನ್ನ ಟೀಕೆ ಮಾಡಿರುವ ಓರ್ವ ಅಭಿಮಾನಿ, “ಅದು ಏನೇ ಇರಲಿ, ಎಐ ಅಥವಾ ಚಿತ್ರೀಕರಣ ವೇಳೆಯ ಚಿತ್ರವೇ ಹಾಗಿರಲಿ. ಇದನ್ನು ನೋಡಿದ, ನಾನು ಚಿತ್ರದ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ” ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, “ಈ ವೈರಲ್ ಚಿತ್ರಗಳು ಉದ್ದೇಶಪೂರ್ವಕವಾಗಿ ಬಿಡುಗಡೆ ಆದಂತೆ ಕಾಣುತಿದೆ. ಮೊದಲು ಹಾಲಿವುಡ್ ನವರು ಈ ಗಿಮಿಕ್ ಮಾಡಲು ಪ್ರಾರಂಭಿಸಿದರು. ಈಗ ಎಲ್ಲರೂ ಅದನ್ನೇ ಅನುಸರಿಸುತ್ತಿದ್ದಾರೆ" ಎಂದು ಬರೆದಿದ್ದಾರೆ.

ಅದ್ರಲ್ಲೂ ಓರ್ವ ಬಳಕೆದಾರನು, ಮಹೇಶ್ ಬಾಬು ಅವರ ಈ ಗೆಟಪ್ಅನ್ನು ಯಶ್ ನಟನೆಯ, ರಾಮಾಯಣ ಚಿತ್ರದ ನಟ ರಣಬೀರ್ ಕಪೂರ್ ಅವರ ರಾಮನ ಪಾತ್ರಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಅದ್ರಂತೆ ಸಮಾಜಿಕ ಜಾಲತಾಣದ ಒಬ್ಬ ಬಳಕೆದಾರನು,

ವಾರಾಣಸಿ ಚಿತ್ರದಲ್ಲಿ ಬಹುತಾರಾಗಣ

ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದರ್ಶನದ ಚಿತ್ರದಲ್ಲಿ ತೆಲಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ದ್ವಿಪಾತ್ರದಲ್ಲಿ ನಟಿಸುತಿದ್ದಾರೆ ಎನ್ನಲಾಗಿದ್ದು, ನಾಯಕಿಯಾಗಿ ಪ್ರಿಯಾಂಕಾ ಚೊಪ್ರಾ ನಟಿಸುತಿದ್ದಾರೆ. ಈ ಮೂಲಕ 7 ವರ್ಷಗಳ ತರುವಾಯು ಪಿಂಕಿ, ಭಾರತೀಯ ಸಿನಿರಂಗಕ್ಕೆ ರೀ-ಎಂಟ್ರಿ ಕೂಡುತಿದ್ದಾರೆ. ಇವರೊಂದಿಗೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಖಳನಟನಾಗಿ ನಟಿಸುವ ಮೂಲಕ ಟಾಲಿವುಡ್ ಗೆ ರೀ-ಎಂಟ್ರಿ ಕೂಡುತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ಪ್ರತಿಪಕ್ಷಗಳ ಪ್ರತಿಭಟನೆ, ಗದ್ದಲದ ನಡುವೆ ಯಾವುದೇ ಚರ್ಚೆಯಿಲ್ಲದೇ ವಿಧಾನ ಪರಿಷತ್ತಿನಲ್ಲಿ ಎರಡು ವಿಧೇಯಕಗಳು ಪಾಸ್

Biggboss Kannada ಅಗ್ನಿಪರೀಕ್ಷೆ: ಗೆಟ್ ಔಟ್, ಇದೆಲ್ಲಾ ಬೇಡ ಬ್ರೋ; ವಿನಯ್ ಗೌಡಗೆ ಸ್ಪರ್ಧಿ ತಿರುಗೇಟು, Video ವೈರಲ್!

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ಕೊಲಂಬೊ ಟೆಸ್ಟ್‌ನಲ್ಲಿ ಭಾರತದ ಅಬ್ಬರ: 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್, ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ