ಹಿರಿಯ ನಟ ಸ್ಯಾಮ್ ನೀಲ್  
ಸಿನಿಮಾ ಸುದ್ದಿ

Jurassic Park ಖ್ಯಾತಿಯ ಹಿರಿಯ ನಟ ಸ್ಯಾಮ್ ನೀಲ್ ಹಠಾತ್ ನಿಧನ!

ನೀಲ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಕುರಿತು ಫೋಸ್ಟ್ ಮಾಡಲಾಗಿದ್ದು, ಅನಿರೀಕ್ಷಿತ, ಹಠಾತ್ ಆಗಿ ಸಾವನ್ನಪ್ಪಿರುವುದಾಗಿ ಅವರು ಕುಟುಂಬಸ್ಥರು ಖಚಿತಪಡಿಸಿದ್ದಾರೆ.

ಸಿಡ್ನಿ: ಜುರಾಸಿಕ್ ಪಾರ್ಕ್ ಮತ್ತು ದಿ ಪಿಯಾನೋ ಸಿನಿಮಾದಲ್ಲಿನ ತನ್ನ ಪಾತ್ರದಿಂದ ಹೆಸರುವಾಸಿಯಾಗಿದ್ದ ನ್ಯೂಜಿಲೆಂಡ್ ನ ಹಿರಿಯ ನಟ ಸ್ಯಾಮ್ ನೀಲ್ ಸೋಮವಾರ ಹಠಾತ್ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

ನೀಲ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಕುರಿತು ಫೋಸ್ಟ್ ಮಾಡಲಾಗಿದ್ದು, ಅನಿರೀಕ್ಷಿತ, ಹಠಾತ್ ಆಗಿ ಸಾವನ್ನಪ್ಪಿರುವುದಾಗಿ ಅವರು ಕುಟುಂಬಸ್ಥರು ಖಚಿತಪಡಿಸಿದ್ದಾರೆ.

ಸ್ಯಾಮ್ ನೀಲ್ ಅವರು 2022ರಲ್ಲಿ ಅಪರೂಪದ ರಕ್ತದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ 2023ರಲ್ಲಿ ಬಹಿರಂಗಪಡಿಸಿದ್ದರು. ಆದರೆ, ಅವರು ಮರಣ ಹೊಂದುವ ಸಂದರ್ಭದಲ್ಲಿ ಕ್ಯಾನ್ಸರ್ ನಿಂದ ಸಂಪೂರ್ಣವಾಗಿ ಮುಕ್ತರಾಗಿದ್ದರು ಎಂದು ಕುಟುಂಬಸ್ಥರು ಸ್ಪಷ್ಪಪಡಿಸಿದ್ದಾರೆ.

ಸ್ಯಾಮ್ ನೀಲ್ ಅವರ ನಿಧನಕ್ಕೆ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ಸೆಪ್ಟೆಂಬರ್ 14, 1947 ರಲ್ಲಿ ಉತ್ತರ ಐರ್ಲೆಂಡ್ ನಲ್ಲಿ ಜನಿಸಿದ ಸ್ಯಾಮ್ ನೀಲನ್, ನಟನೆಯತ್ತ ಆಕರ್ಷಿತರಾಗಿ ರಂಗಭೂಮಿ ಸೇರಿದರು. 1993ರಲ್ಲಿ ತೆರೆ ಕಂಡ ಬ್ಲಾಕ್ ಬಸ್ಟರ್ ಸಿನಿಮಾ ಜುರಾಸಿಕ್ ಪಾರ್ಕ್ ಮತ್ತು ದಿ ಪಿಯಾನೋ ಅವರನ್ನು ಜಾಗತಿಕ ತಾರೆಯನ್ನಾಗಿ ಮಾಡಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತೀ ಹೆಚ್ಚು!

Yash’s Toxic: ನೆಗೆಟಿವ್ ರಿವ್ಯೂ ನಡುವೆ 'ರೇಟಿಂಗ್' ತೆಗೆದುಹಾಕಿದ ಬುಕ್ ಮೈ ಶೋ; ನಿರೀಕ್ಷಿತ ಕಲೆಕ್ಷನ್ ಇಲ್ವಾ? ನೆಟ್ಟಿಗರಿಂದ ತರಾಟೆ!

‘ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು’: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

"RSS ನಲ್ಲಿ ಜೆನ್ ಝೀಗಳೇ ಅತಿ ದೊಡ್ಡ ಸಂಖ್ಯೆ": ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್